ಉಜಿರೆ ಕಾಲೇಜಿನಲ್ಲಿ ಕ್ಯಾ| ಗಣೇಶ್ ಕಾರ್ಣಿಕ್ ಮತಯಾಚನೆ.

ಬೆಳ್ತಂಗಡಿ: ಜೂನ್.8 ರಂದು ನಡೆಯಲಿರುವ ಕರ್ನಾಟಕ ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಸದಸ್ಯ ಸ್ಥಾನದ ಚುನಾವಣೆಯ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕ್ಯಾ| ಗಣೇಶ್ ಕಾರ್ಣಿಕ್ ರವರು ಮೇ. 28 ರಂದು ಎಸ್.ಡಿ.ಎಮ್. ಕಾಲೇಜು ಉಜಿರೆಗೆ ಆಗಮಿಸಿ ಮತಯಾಚಿಸಿದರು.
ನಂತರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಡಾ| ಡಿ. ವಿರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದರು. ಇವರೊಂದಿಗೆ ನೈರುತ್ಯ ಪಧವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯಾನೂರ್ ಮಂಜುನಾಥ್‌ರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.