ಮನೆ ದುರಸ್ತಿ ಮಾಡುವ ಮೂಲಕ ಹರೀಶ್ ಪೂಂಜ ಗೆಲುವಿಗೆ ವಿಜಯೋತ್ಸವ.

ಮಿತ್ತಬಾಗಿಲು: ಇಲ್ಲಿಯ ಕೊಲ್ಲಿ ಸಮೀಪದ ವಳಚ್ಚಿಳಬೆಟ್ಟು ವಿಜಯಲಕ್ಷ್ಮಿ ಉಮೇಶ್ ಪೂಜಾರಿ ದಂಪತಿಗಳ ಸಂಪೂರ್ಣ ದುಸ್ಥಿತಿಯಲ್ಲಿದ್ದ ಮನೆಯನ್ನು ಬಿಜೆಪಿ ಕಾರ್ಯಕರ್ತರು ಶ್ರಮದಾನದ ಮೂಲಕ ಸಂಪೂರ್ಣ ದುರಸ್ಥಿಗೊಳಿಸಿ ಹರೀಶ್ ಪೂಂಜ ಗೆಲುವಿಗೆ ವಿಜಯೋತ್ಸವವನ್ನು ಆಚರಿಸಿ ಇತರರಿಗೆ ಮಾದರಿಯಾದರು.
ಸುಮಾರು 50 ಸಾವಿರ ರೂ. ವೆಚ್ಚದಲ್ಲಿ ಶೇಖರ ಪೂಜಾರಿ ಕಂಬಳದಡ್ಡು, ವಿನಯಚಂದ್ರ ಸೇನರಬೆಟ್ಟು, ವಿಜಯ ಗೌಡ ಕಾಡುಮನೆ, ಮಿತ್ತಬಾಗಿಲು ಗ್ರಾ.ಪಂ ಸದಸ್ಯರು, ಉಮೇಶ್ ಪೂಜಾರಿ ಮಾಲೂರು, ಸುರೇಶ್ ಪೂಜಾರಿ ಅಡ್ಕದಕರೆ ಇವರ ನೇತೃತ್ವದಲ್ಲಿ ಮನೆ ದುರಸ್ತಿ ಕಾರ್ಯವು ನೆರವೇರಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.