HomePage_Banner_
HomePage_Banner_
HomePage_Banner_

ಕೃಷಿಕ ಮಹಾಬಲ ಶೆಟ್ಟಿ ಮುಂಡಾಜೆ ನಿಧನ.

ಮುಂಡಾಜೆ: ಮುಂಡಾಜೆ ಗ್ರಾಮದ ನಾಗಂಡ ಮನೆ ನಿವಾಸಿ, ಹಿರಿಯ ಕೃಷಿಕರಾಗಿದ್ದ ಮಹಾಬಲ ಶೆಟ್ಟಿ (85 ವ.) ಅವರು ಮೇ. 25 ರಂದು ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ನಿಧನಾಗಿದ್ದಾರೆ. ಮೇ. 24 ರಂದು ಅವರಿಗೆ ಅಲ್ಪ ಅನಾರೋಗ್ಯ ಕಾಣಿಸಿಕೊಂಡಾಗ ಉಜಿರೆ ಬೆನಕ ಅಸ್ಪತ್ರೆಯಲ್ಲಿ ಪ್ರಥಮ ಚಿಕತ್ಸೆ ನೀಡಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ವಾಸಕೋಶದಲ್ಲಿ ಕಾಣಿಸಿಕೊಂಡಿದ್ದ ತಡೆಯ ಕಾರಣದಿಂದ ಅವರು ಬೆಳಗ್ಗಿನ ಜಾವಾ ನಿಧನರಾದರು.
ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಅವರು ಮಿತಭಾಷಿಯಾಗಿದ್ದರು. ಮೃತರ ಪತ್ನಿ ಲಿಂಗಮ್ಮ ಅವರು 21 ವರ್ಷಗಳ ಹಿಂದೆಯೇ ಮೃತರಾಗಿದ್ದರು. ಇದೀಗ ಮೃತ ಮಹಾಬಲ ಶೆಟ್ಟಿ ಅವರು ಪುತ್ರರಾದ ಶೇಖರ ಶೆಟ್ಟಿ, ಭಾಸ್ಕರ ಶೆಟ್ಟಿ, ರತ್ನಾಕರ ಶೆಟ್ಟಿ ಮತ್ತು ಶ್ರೀಧರ ಶೆಟ್ಟಿ, ಇಬ್ಬರು ಪುತ್ರಿಯರಾದ ಗಿರಿಜಾ ಮತ್ತು ಪುಷ್ಪಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.