HomePage_Banner_
HomePage_Banner_

ಉಜಿರೆ ಎಸ್.ಡಿ.ಎಮ್ ನಿವೃತ್ತ ಪ್ರೊಫೆಸರ್ ಎಸ್.ಎಸ್.ಐತಾಳ್ ನಿಧನ.

ಉಜಿರೆ: ಎಸ್.ಡಿ.ಎಮ್ ಕಾಲೇಜಿನ ಅರ್ಥ ಶಾಸ್ತ್ರ ವಿಭಾಗದ ನಿವೃತ್ತ ಪ್ರೊಫೆಸರ್ ಎಸ್.ಸುಬ್ರಹ್ಮಣ್ಯ ಐತಾಳ್(75.ವ) ರವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೇ.28 ರಂದು ನಿಧನರಾದರು.
ಮೃತರು ನಿವೃತ್ತಿಯ ನಂತರ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬಳಿ ಸುರಿಯ ರಸ್ತೆಯ ತನ್ನ ಮನೆಯಲ್ಲಿ ಜ್ಯೋತಿಷ್ಯ ಶಾಸ್ತ್ರ ನಡೆಸುತ್ತಿದ್ದರು. ಇವರ ಹಿರಿಯ ಮಗ ಡಾ|ಎಸ್.ಎನ್.ಪ್ರಸಾದ್ ಐತಾಳ್ ರವರು ಬೆಂಗಳೂರು ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, ಎರಡನೇ ಮಗನಾದ ಡಾ| ಪ್ರಸನ್ನ ಐತಾಳ್ ರವರು ಮಂಗಳೂರು ಯೆನಪೋಯ ವೈದ್ಯಕೀಯ ಕಾಲೇಜಿನಲ್ಲಿ ಆಯುರ್ವೇದ ಎಂ.ಡಿ. ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಿರಿಯ ಮಗನಾದ ರಾಘವೇಂದ್ರ ಐತಾಳರವರು ನ್ಯಾಯವಾದಿಯಾಗಿದ್ದಾರೆ.
ಮೃತರ ಪತ್ನಿ ಶ್ರೀಮತಿ ಜಯಶ್ರೀ ಐತಾಳ್ ರವರು ಖ್ಯಾತ  ಜ್ಯೋತಿಷಿಯಾಗಿದ್ದು, ಕಳೆದ ವರ್ಷ ಆಗಸ್ಟ್. 27 ರಂದು ನಿಧನರಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.