ಮುಂಜಾಗ್ರತಾ ಕ್ರಮಕ್ಕೆ ರಬ್ಬರ್ ಬೆಳೆಗಾರರಿಗೆ ಮನವಿ.

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಮುಂಗಾರು ಮಳೆ ಸಂದರ್ಭ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮಕ್ಕಾಗಿ ರಬ್ಬರ್ ಬೆಳಗಾರರು ರಬ್ಬರ್ ಮರಗಳಿಗೆ ಅಳವಡಿಸಿರುವ ರಬ್ಬರ್ ಹಾಲು ಸಂಗ್ರಹಣಾ ಪಾತ್ರೆ ತೆಗೆದು ವಿಲೇ ಮಾಡಿ ಸಹಕರಿಸುವಂತೆ ತಾಲೂಕು ಆಡಳಿತ ಸೂಚಿಸಿದೆ. ತಾಲೂಕಿನ ಎಲ್ಲ ರಬ್ಬರ್ ಬೆಳೆಗಾರರು ತಮ್ಮ ರಬ್ಬರ್ ಮರಗಳಿಗೆ ಅಳವಡಿಸಿರುವ ರಬ್ಬರ್ ಹಾಲು ಸಂಗ್ರಹಣಾ ಪಾತ್ರೆಗಳಲ್ಲಿ ನೀರು ನಿಲ್ಲದಂತೆ ಅದನ್ನು ವಿಲೇ ಮಾಡಬೇಕು. ರಬ್ಬರ್ ಬೆಳೆಗಾರರಿಗೆ ಸಂಬಂಧಪಟ್ಟ ರಬ್ಬರ್ ಬೋರ್ಡ್‌ನವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.