‘ಬೆಳ್ತಂಗಡಿ ಮುಂದೆ ಹೇಗಿರಬೇಕು?’-ಶಾಸಕರಿಂದ ನಿಮ್ಮ ನಿರೀಕ್ಷೆ ಏನು? ಅಭಿಪ್ರಾಯ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಆರಂಭಿಕ ಹಂತದಲ್ಲಿರುವ ಕಾಮಗಾರಿ ಪೂರ್ತಿಗೊಳಿಸಲಿ:

ಬೆಳ್ತಂಗಡಿ ಕ್ಷೇತ್ರದ ನೂತನ ಶಾಸಕ ಹರೀಶ್ ಪೂಂಜ ಅವರು ತಾಲೂಕಿನ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಬೇಕು. ಈ ಹಿಂದಿನ ಸರಕಾರದ ಅವಧಿಯಲ್ಲಿ ತಾಲೂಕಿನಲ್ಲಿ ಅನೇಕ ಕಾಮಗಾರಿಗಳು ಆರಂಭದ ಹಂತದಲ್ಲಿದ್ದು, ಇದನ್ನು ಮುಂದುವರಿಸಿ ಪೂರ್ತಿಗೊಳಿಸಬೇಕು.
ಗುರುವಾಯನಕೆರೆ-ಉಜಿರೆ ರಾಜ್ಯ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ತುಂಬಾ ಇದೆ. ಇದನ್ನು ನಿವಾರಿಸುವ ಪ್ರಯತ್ನ ಪ್ರಥಮವಾಗಿ ಮಾಡಬೇಕು. ಕೇಂದ್ರ ಸರಕಾರದ ಮೂಲಕ ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಮತ್ತು ಅಗಲಗೊಳಿಸುವ ಕೆಲಸವನ್ನು ಮಾಡಬೇಕು.
ಎಸ್.ಸಿ. ಮತ್ತು ಎಸ್.ಟಿ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ವ್ಯವಸ್ಥೆ, ಅವರಿಗೆ ಹಾಸ್ಟೇಲ್ ವ್ಯವಸ್ಥೆ, ಕಾಲೇಜಿನ ಸೇರ್‍ಪಡೆ ಬಗ್ಗೆ ವ್ಯವಸ್ಥೆ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಬೇರೆ, ಬೇರೆ ಸೌಲಭ್ಯಗಳು ಇದ್ದು ಇದು ವಿದ್ಯಾರ್ಥಿಗಳಿಗೆ ದೊರೆಯುವಂತೆ ಮಾಡಬೇಕು. ಅಲ್ಲದೆ ಈ ಇಲಾಖೆಯ ಮೂಲಕ ಸರಕಾರದಿಂದ ವಿವಿಧ ಯೋಜನೆಗಳನ್ನು ತರಿಸಿ, ಪ.ಜಾತಿ, ಪಂಗಡದವರ ಅಭಿವೃದ್ಧಿಗೆ ಶ್ರಮಿಸಬೇಕು. ಯುವಕರಿಗೆ ಉದ್ಯೋಗ ದೃಷ್ಟಿಯಿಂದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಯಾಗಬೇಕು, ನಮ್ಮದು ಮೂಲ ಕೃಷಿ ಆದ್ದರಿಂದ ಕೃಷಿಕರಿಗೆ ಎಲ್ಲಾ ಸೌಲಭ್ಯಗಳು ಸರಕಾರದಿಂದ ದೊರೆಯುವಂತೆ ಮಾಡಬೇಕು.

ಬಾಬು ಮೊಗೇರ, ಆಡಳಿತ ಮೊಕ್ತೇಸರರು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ಎರ್ನೋಡಿ ಉಜಿರೆ.


ಧರ್ಮಸ್ಥಳಕ್ಕೆ ರೈಲ್ವೇ ಮಾರ್ಗ ಸಂಪರ್ಕ:

ಶ್ರೀ ಕ್ಷೇತ್ರ ಧರ್ಮಸ್ಥಳವು ದೇಶದಾದ್ಯಂತ ಪ್ರಸಿಧ್ಧಿಯನ್ನು ಪಡೆದಿದ್ದು, ಶ್ರೀ ಕ್ಷೇತ್ರಕ್ಕೆ ಅತೀ ಹತ್ತಿರವಾಗುವಂತೆ ರೈಲ್ವೇ ಮಾರ್ಗವನ್ನು ಸಂಪರ್ಕಿಸುವುದು. ವೇಣೂರು ಶ್ರೀ ಗೊಮ್ಮಟೇಶ್ವರ ಪ್ರವಾಸಿ ತಾಣವಾಗಿ ವೇಣೂರು/ಅಳದಂಗಡಿಯನ್ನು ಅಭಿವೃದ್ಧಿ ಪಡಿಸುವುದು.
ಜಮಲಾಬಾದ್ ಕೋಟೆಯು ಬೆಳ್ತಂಗಡಿ ತಾಲೂಕಿನ ಪ್ರವಾಸ ಕೇಂದ್ರದಲ್ಲಿ ಇನ್ನೊಂದಾಗಿದ್ದು, ಕುದುರೆಮುಖ ಘಾಟಿಯಿಂದ ನೇರ ಸಂಪರ್ಕ ಕಲ್ಪಿಸುವಂತೆ ಯೋಜನೆಯೊಂದನ್ನು ರೂಪಿಸುವುದು.ಶಿಶಿಲದಿಂದ ಬೈರಾಪುರಕ್ಕೆ ನೇರ ಸಂಪರ್ಕ ಸಾಧಿಸುವ ಬಗ್ಗೆ ಕ್ರಮ ಕೈಗೊಳ್ಳುವುದು.
ಮಲವಂತಿಗೆ ಗ್ರಾಮಸ್ಥರಿಗೆ ಬೆಳ್ತಂಗಡಿ ತಾಲೂಕು ಕೇಂದ್ರಕ್ಕೆ ಬರಲು 100 ಕಿ.ಮೀ ಸಂಚರಿಸಿ ತಲುಪಬೇಕಾದ ಪರಿಸ್ಥಿತಿ ಯಿದ್ದು, ಅವರ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಬೆಳ್ತಂಗಡಿ ಅತೀ ಹತ್ತಿರದಲ್ಲಿ ರಸ್ತೆ ನಿರ್ಮಾಣ ಮಾಡಿ, ರಸ್ತೆಯ ಬೇಡಿಕೆಯನ್ನು ಈಡೇರಿಸುವುದು. ಅಲ್ಲದೆ ನೆರಿಯ ಗ್ರಾಮದ ಬಾಂಜಾರು ಪ್ರದೇಶದಲ್ಲಿ ಸುಮಾರು 50/60 ಮಲೆಕುಡಿಯ ಜನಾಂಗದವರು ವಾಸ್ತವ್ಯವಿದ್ದು, ಅಲ್ಲಿನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ರಸ್ತೆ ಬೇಡಿಕೆಯನ್ನು ಅತೀ ಶೀಘ್ರದಲ್ಲಿ ಈಡೇರಿಸುವುದು. ಸವಣಾಲು ಗ್ರಾಮದ ಹಿತ್ತಿಲಪೇಲ ಎಂಬಲ್ಲಿನ ಮಲೆಕುಡಿಯರ ಬೇಡಿಕೆಗಳನ್ನು ಸೇರಿದಂತೆ ತಾಲೂಕಿ ನಾದ್ಯಂತ ಇರುವ ಮಲೆಕುಡಿಯ ಜನಾಂಗದ ಬೇಡಿಕೆಗಳನ್ನು ಈಡೇರಿ ಸುವುದು.
ಎಲ್ಲಾ ಕೃಷಿಕರಲ್ಲಿ ಕುಮ್ಕಿ ಜಾಗ ಎಂಬ ಕೃಷಿಕರಿಗೆ ಮಂಜೂರಾಗಲು ಬಾಕಿ ಇರುವ ಜಾಗವನ್ನು ಎಲ್ಲಾ ಕೃಷಿಕರಿಗೂ ಈಗಿರುವ ಕೋರ್ಟ್ ಸ್ಟೇ ಯನ್ನು ತೆರವುಗೊಳಿಸಿ ಮಂಜೂರುಗೊಳಿಸಲು ಪ್ರಯತ್ನಿಸುವುದು. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೇರವಾಗಿ ಬೆಳಾಲು, ಕೊಯ್ಯೂರು, ಗೇರುಕಟ್ಟೆ, ಬಳ್ಳಮಂಜ, ಮಡಂತ್ಯಾರು ಸಂಪರ್ಕ ರಸ್ತೆ ಇದ್ದು, ಅದನ್ನು ಅಭಿವೃದ್ಧಿ ಪಡಿಸಿದಲ್ಲಿ ಬೆಳ್ತಂಗಡಿಯ ಗುರುವಾಯನಕೆರೆ ವಾಹನಗಳ ದಟ್ಟನೆ ಕಡಿಮೆಯಾಗುವುದು. ತಾಲೂಕಿನಾದ್ಯಂತ ರಬ್ಬರ್ ಕೃಷಿಕರಿದ್ದು ಅವರು ಬೆಳೆದ ರಬ್ಬರ್‌ಗೆ ಕೆ.ಜಿ. 1 ರ ರೂಪಾಯಿ 5 /- ರಂತೆ ಜಿ.ಎಸ್.ಟಿ ನೆಪದಲ್ಲಿ ದಾರಣೆಯಲ್ಲಿ ಕಡಿತಗೊಳಿಸುತ್ತಿದ್ದು, ಮಾರುಕಟ್ಟೆ ಧಾರಣೆಯಂತೆ ಬೆಲೆ ರೈತರಿಗೆ ಸಿಗುತ್ತಿಲ್ಲ. ಅದನ್ನು ಸರಿಪಡಿಸಲು ಕೇಂದ್ರ ಸರ್ಕಾರದ ಮುಖಾಂತರ ಪ್ರಯತ್ನಪಡುವುದು.

-ಕೆ.ರಾಮಣ್ಣ ಪೂಜಾರಿ, ಕೊಯ್ಯೂರು ದಸ್ತಾವೇಜು ಬರಹಗಾರರು, ಬೆಳ್ತಂಗಡಿ


ಸರಕಾರಿ ಕಛೇರಿಗಳಲ್ಲಿ ಲಂಚಾವತಾರ ನಿಲ್ಲಬೇಕು:

ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಬೇಕು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಾಗಬೇಕು ಹಾಗೆಯೇ ಸಂಪರ್ಕ ಸೇತುವೆಗಳ ಅಗತ್ಯತೆ ಇದೆ. ತಾಲೂಕು ಆಫೀಸಲ್ಲಿ ಇರುವ ಎಲ್ಲಾ ಅಧಿಕಾರಿಗಳು ಜನರೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು. ಎಲ್ಲಾ ಸರಕಾರಿ ಕಛೇರಿಗಳಲ್ಲಿ ಲಂಚಾವತಾರ ನಿಲ್ಲಬೇಕು, ಹಾಗೆಯೇ ದಲ್ಲಾಳಿಗಳ ಹಾವಳಿ ನಿಲ್ಲಬೇಕು.  ಸರ್ಕಾರಿ ಕಛೇರಿಗಳಲ್ಲಿ 5ವರ್ಷಕ್ಕಿಂತ ಹೆಚ್ಚು ಕರ್ತವ್ಯದಲ್ಲಿರುವ ಅಧಿಕಾರಿಗಳ ವರ್ಗಾವಣೆ ಆಗಬೇಕು.
ತಾಲೂಕಿನಲ್ಲಿ ಒಂದು ಸುಂದರವಾದ ಉದ್ಯಾನವನ ಮತ್ತು ಒಂದು ಕ್ರೀಡಾಂಗಣವಾಗಬೇಕು. ತಾಲೂಕಿನ ಯುವ ಪೀಳಿಗೆಗೆ ಉದ್ಯೋಗ ದೊರಕಬೇಕು. ರಸ್ತೆಗಳ ಅಭಿವೃದ್ಧಿ ಮತ್ತು ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ. ಸರ್ಕಾರಿ ಸೇವೆಗಳನ್ನು ಚುರುಕುಗೊಳಿಸುವುದು. ತಾಲೂಕನ್ನು ಉತ್ತಮ ಪ್ರವಾಸಿ ಕೇಂದ್ರವಾಗಿ ಮಾರ್ಪಡಿಸುವುದು . ಎಲ್ಲಾ ಜಾತಿ-ಪಕ್ಷಗಳೊಂದಿಗೆ ಉತ್ತಮವಾಗಿ ಸ್ಪಂದಿಸುವುದು. ಬೆಳ್ತಂಗಡಿ ತಾಲೂಕನ್ನು ಒಂದು ಮಾದರಿ ತಾಲೂಕಾಗಿ ಬದಲಾಯಿಸುವುದು.  ಸರ್ಕಾರಿ ಅನುದಾನವನ್ನು ಉತ್ತಮವಾಗಿ ಬಳಸುವುದು . 94ಸಿಯಲ್ಲಿ ಆದ ಎಲ್ಲಾ ಅವ್ಯವಹಾರಗಳ ತನಿಖೆ ಆಗಬೇಕು.

-ಜಯಾನಂದ ಗೌಡ, ಅಧ್ಯಕ್ಷರು
ತಾಲೂಕು ಯುವ ವೇದಿಕೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ 


3 ತಿಂಗಳಿಗೊಮ್ಮೆ ಗ್ರಾ.ಪಂ.ಕ್ಕೆ ಭೇಟಿ:

ಪ್ರತಿ ಗ್ರಾಮ ಪಂಚಾಯತಕ್ಕೆ 3ತಿಂಗಳಿಗೊಮ್ಮೆ ಶಾಸಕರು ಭೇಟಿ ನೀಡಬೇಕು. ತಾಲೂಕು ಆಫೀಸಿನಲ್ಲಿ ಮಧ್ಯವರ್ತಿಗಳ ಹಾವಳಿ ನಿಲ್ಲಬೇಕು. ಬೆಳ್ತಂಗಡಿಯಲ್ಲಿ ಫ್ರೀ ಪಾರ್ಕಿಂಗ್ ವ್ಯವಸ್ಥೆ ಮತ್ತು ಫುಟ್‌ಪಾತ್ ವ್ಯವಸ್ಥೆಯನ್ನು ಮಾಡಬೇಕು.

ಬಾಲಕೃಷ್ಣ ಗೌಡ , ಬಿರ್ಮೊಟ್ಟು ಮೋಟಾರ್ ಲಿಂಕ್ಸ್ ಬೆಳ್ತಂಗಡಿ

 

 


ಕಿಂಡಿ ಅಣೆಕಟ್ಟುಗಳ ನಿರ್ಮಾಣ:

ಬೆಳ್ತಂಗಡಿ ತಾಲೂಕಿನ ರಸ್ತೆಗಳ ಅಗಲೀಕರಣ, ಪ್ರವಾಸೋದ್ಯಮ ಅಭಿವೃದ್ಧಿ, ಕಿಂಡಿ ಅಣೆಕಟ್ಟು ನಿರ್ಮಿಸಿ ನೀರು ಇಂಗಿಸುವುದು. ತಾಲೂಕು ಕಛೇರಿಯಲ್ಲಿ ಬ್ರಷ್ಠಾಚಾರ ರಹಿತವಾಗಿ ಕಾರ್ಯ ನಿರ್ವಹಿಸಲು ಸಹಕರಿಸುವುದು. ತಾಲೂಕಿನ ಸಮಗ್ರ ಅಭಿವೃದ್ಧಿ.ಯಾಗಬೇಕು.
-ಉದಯ ಹೆಗ್ಡೆ, ಗ್ರಾ.ಪಂ ಸದಸ್ಯ ನಾರಾವಿ

 


ಭ್ರಷ್ಠಾಚಾರ ಮುಕ್ತ ತಾಲೂಕು ಆಗಲಿ:

ರಾಘವ ಪುತ್ರನ್, ಮಾಜಿ ಅಧ್ಯಕ್ಷ, ಗ್ರಾ.ಪಂ.ಅಂಡಿಂಜೆ

ಬೆಳ್ತಂಗಡಿ ತಾಲೂಕು ಬದಲಾವಣೆಯ ಒಳ್ಳೆಯ ಆಡಳಿತ ನಡೆಸುವುದು. ಭ್ರಷ್ಠಾಚಾರ ಮುಕ್ತ ತಾಲೂಕು ನಿರ್ಮಾಣ ಮಾಡುವುದು.


ಪರಪ್ಪು ಭಾಗದ ಜನರ ಬೇಡಿಕೆ ಈಡೇರಿಸಿ:

 

ಪರಪ್ಪು-ಕೊಯ್ಯೂರು ರಸ್ತೆ ಡಾಮರೀಕರಣ ಕಾಣದೆ 10 ವರ್ಷಗಳು ಸಂದಿದೆ. ಇದೀಗ ಆ ರಸ್ತೆಯಲ್ಲಿ ನಡೆದಾಡಲು ಸಾಧ್ಯವಿಲ್ಲ. ಕೆಲವು ಪ್ರತಿಭಟನೆಗಳು ನಡೆದವು. ಅದಕ್ಕೆ ಯಾವುದೇ ಸ್ಪಂದನವಿಲ್ಲ. ಇದೀಗ ಹೊಸ ಶಾಸಕರಾದ ಹರೀಶ್ ಪೂಂಜರವರು ಶೀಘ್ರ ಡಾಮರೀಕರಣವನ್ನು ನಡೆಸಿ ಈ ಭಾಗದ ಜನರ ಸಮಸ್ಯೆಯನ್ನು ಬಗೆಹರಿಸಬೇಕು. 

-ಯಶೋಧರ ಶೆಟ್ಟಿ. ಕೆ., ಮಾಲಕರು, ಮಾಣಿಕ್ಯ ಸ್ಟೀಲ್ ಇಂಡಸ್ಟ್ರೀಸ್ ಗೇರುಕಟ್ಟೆ


ತಾಲೂಕಿನ ಸಮಗ್ರ ಅಭಿವೃದ್ಧಿಯಾಗಲಿ:

ತಾಲೂಕಿನ ರಸ್ತೆಗಳು ಸಮರ್ಪಕವಾಗಿ ನಿರ್ಮಾಣವಾಗಲಿ. ಸೇತುವೆಗಳು ನಿರ್ಮಾಣವಾಗಲಿ ಹಾಗೂ ತಾಲೂಕು ಸಮಗ್ರ ಅಭಿವೃದ್ಧಿ ಹೊಂದಲಿ.

-ವಿನ್ಸೆಂಟ್ ಡಿಸೋಜ, ಮಾಜಿ ತಾ.ಪಂ. ಸದಸ್ಯ, ಮಾಲಾಡಿ

 


ಕೆರೆಗಳನ್ನು ಅಭಿವೃದ್ಧಿ ಪಡಿಸಿ:

ಉಜಿರೆ-ಗುರುವಾಯನಕೆರೆ ರಸ್ತೆ ಅಗಲೀಕರಣವಾಗಲಿ, ಟ್ರಾಫಿಕ್ ಜಾಮ್ ಕೊನೆಗೊಳ್ಳಲಿ. ಬೆಳ್ತಂಗಡಿ ತಾಲೂಕಿನಲ್ಲಿರುವ ಕೆರೆಗಳು, ಪ್ರತ್ಯೇಕವಾಗಿ ಗುರುವಾಯನಕೆರೆ ಮತ್ತು ಬಂಗೇರಕಟ್ಟೆ ಕೆರೆಗಳನ್ನು ಅಭಿವೃದ್ಧಿಪಡಿಸಿ ಜನರಿಗೆ ನೀರಿನ ಸಮಸ್ಯೆ ಕೊನೆಗೊಳ್ಳುವಂತೆ ಮಾಡಬೇಕು.

ಕೆ.ಎ. ದಾಮೋದರ ಆಚಾರ್ಯ ಉದ್ಯಮಿ ಮಡಂತ್ಯಾರು.

 


ಜನರ ಬೇಡಿಕೆಗಳಿಗೆ ಸ್ಪಂದಿಸುವುದು:

ನೂತನ ಶಾಸಕರು ಜನರ ಬೇಡಿಕೆಗಳಿಗೆ ಮನ್ನಣೆ ನೀಡಬೇಕು. ತಾಲೂಕು ಕಛೇರಿಯಲ್ಲಿ ಜನರ ಬೇಡಿಕೆಗೆ ಸ್ಪಂದಿಸುವುದು ಹಾಗೂ ಕಛೇರಿಯಲ್ಲಿ ಜನರ ಕೆಲಸಗಳು ಶೀಘ್ರವಾಗಿ ಆಗುವಂತೆ ನೋಡಿಕೊಳ್ಳಬೇಕು-

ಮೋಹನ್ ಅಂಡಿಂಜೆ ಅಧ್ಯಕ್ಷರು, ಗ್ರಾ.ಪಂ.ಅಂಡಿಂಜೆ

 


ಅರಣ್ಯ ನಿವಾಸಿಗಳಿಗೆ ರಸ್ತೆ-ವಿದ್ಯುತ್:

ಅಳದಂಗಡಿ ಮುಳ್ಳಗುಡ್ಡೆ ಕುಡ್ಡಲಬೆಟ್ಟು ಎಂಬಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಇದ್ದು, ಇದಕ್ಕೆ ಸೂಕ್ತ ಪರಿಹಾರ ರೂಪಿಸಬೇಕು. ಸುಲ್ಕೇರಿ ಮೊಗ್ರು ಗ್ರಾಮದಲ್ಲಿ ಮಾಳಿಗೆ ಎಂಬಲ್ಲಿ ಅರಣ್ಯ ಪ್ರದೇಶದಲ್ಲಿ ರಸ್ತೆ ಸಂಪರ್ಕ ಹಾಗೂ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಬೇಕು. ಕುದ್ಯಾಡಿ ಸಂಪರ್ಕ ರಸ್ತೆಯನ್ನು ಡಾಮರೀಕರಣ ಗೊಳಿಸಬೇಕು.

-ಸುಪ್ರಿತ ಜೈನ್ ಅಳದಂಗಡಿ

 


 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.