ಬೆಳ್ತಂಗಡಿ: ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ.

       ಗಣೇಶ್ ಕಾರ್ಣಿಕ್                                         ಬೋಜೇ ಗೌಡ                            ಮಂಜುನಾಥ್

ಬೆಳ್ತಂಗಡಿ : ರಾಜ್ಯ ವಿಧಾನ ಪರಿಷತ್ ನೈರುತ್ಯ ಪದವಿಧರ ಕ್ಷೇತ್ರದ ಮೂರು ಮತ್ತು ಶಿಕ್ಷಕರ ಕ್ಷೇತ್ರದ ಮೂರು ಸ್ಥಾನಗಳಿಗೆ ಜೂ.8 ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ನೈರುತ್ಯ ಪದವೀಧರ ಕ್ಷೇತ್ರಕ್ಕೆ ಮೇ 21 ರಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್.ಬಿ. ದಿನೇಶ್, ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಂಸದ ಅಯನೂರು ಮಂಜುನಾಥ್, ಪಕ್ಷೇತರರಾಗಿ ಭದ್ರಾವತಿಯ ಬಿ.ಕೆ. ಮಂಜುನಾಥನ್ ನಾಮಪತ್ರ ಸಲ್ಲಿಸಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ವಿಧಾನ ಪರಿಷತ್ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್, ಜೆಡಿಎಸ್ ಅಭ್ಯರ್ಥಿಯಾಗಿ ಚಿಕ್ಕಮಗಳೂರಿನ ಎಸ್.ಎಲ್. ಬೋಜೇ ಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕೊಡಗು ಸೋಮವಾರ ಪೇಟೆಯ
ಮಂಜುನಾಥ ಕುಮಾರ್, ಪಕ್ಷೇತರರಾಗಿ ಮಂಗಳೂರಿನ ಡಾ| ಕೆ. ಶಿವಶರಣ್ ಶೆಟ್ಟಿ, ಮಂಗಳೂರಿನ ಕೆ.ಪಿ. ರಾಜೇಂದ್ರ ಕುಮಾರ್, ಕೊಣಂದೂರಿನ ಎಚ್.ಟಿ. ಅರುಣ್, ಕುಂದಾಪುರದ ನಿತ್ಯಾನಂದ ಶೆಟ್ಟಿ, ಸೋಮವಾರ ಪೇಟೆ ತಾಲೂಕಿನ ಎಚ್.ಎನ್. ದೇವರಾಜ್ ನಾಮಪತ್ರ ಸಲ್ಲಿಸಿದ್ದಾರೆ.
ನೈರುತ್ಯ ಪದವೀಧರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಚಿಕ್ಕಮ ಗಳೂರಿನ ಪ್ರಭುಲಿಂಗ ಬಿ.ಆರ್, ಜೆಡಿಎಸ್ ಅಭ್ಯರ್ಥಿಯಾಗಿ ಕುಂದಾ ಪುರದ ಅರುಣ ಕುಮಾರ್, ಸರ್ವಜನತಾ ಪಕ್ಷದ ಅಭ್ಯರ್ಥಿಯಾಗಿ ದಾವಣಗೆರೆ ಮಾಯಕೊಂಡದ ಜೆ.ಸಿ. ಪಾಟೀಲ್, ಚಿಕ್ಕಮಗಳೂರಿನ ಜಿ.ಎಂ. ಜಯಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮೇ 22 ರಂದು ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಚಿಕ್ಕಮಗಳೂರು ತರಿಕೆರೆಯ ಪ್ರಭುಲಿಂಗ ಬಿ.ಆರ್, ಶಿವಮೊಗ್ಗ ಭದ್ರಾವತಿಯ ತುಳಸಪ್ಪ ದಾಸರ, ಮಂಗಳೂರಿನ ರಾಜೇಂದ್ರ ಕುಮಾರ್ ಕೆ.ಪಿ, ಶಿವಮೊಗ್ಗ ಶಿಕಾರಿಪುರದ ಬಸವರಾಜಪ್ಪ ಕೆ.ಸಿ, ಭದ್ರಾವತಿಯ ಎ. ರಮೇಶ್, ಶಿವಮೊಗ್ಗದ ಕೆ.ಬಿ. ಚಂದ್ರೋಜಿ ರಾವ್ ನಾಮಪತ್ರ ಸಲ್ಲಿಸಿದ್ದಾರೆ. ಎರಡು ಕ್ಷೇತ್ರಗಳಿಗೆ ಒಟ್ಟು 25 ಮಂದಿ ಚುನಾವಣಾಧಿಕಾರಿ ಹಾಗೂ ಮೈಸೂರು ಪ್ರಾದೇಶಿಕ ಆಯುಕ್ತರಾದ ಪಿ. ಹೇಮಲತಾ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಮೇ 23 ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆದಿದ್ದು, ಮೇ 25 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಜೂ.4 ರಂದು ಬೆಳಗ್ಗೆ8.00 ರಿಂದ ಸಂಜೆ 4.00 ಗಂಟೆಯವರೆಗೆ ಮತದಾನ ನಡೆಯಲಿದೆ. ನೈಋತ್ಯ ಶಿಕ್ಷಕರ ಕ್ಷೇತ್ರದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ (ಬಿಜೆಪಿ), ನೈಋತ್ಯ ಪದವೀಧರ ಕ್ಷೇತ್ರದ ಡಿ.ಎಚ್. ಶಂಕರಮೂರ್ತಿ (ಬಿಜೆಪಿ) ಸಹಿತ ಒಟ್ಟು ಆರು ಮಂದಿಯ ಅವಧಿ ಜೂನ್ ತಿಂಗಳಲ್ಲಿ ಕೊನೆಗೊಳ್ಳಲಿರುವುದರ ಹಿನ್ನಲೆಯಲ್ಲಿ ಈ ಚುನಾವಣೆ ನಡೆಯುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.