ಕಾರ್ಕಳದಲ್ಲಿ ಕಳವುಗೈದಿದ್ದ ಬೆಳ್ತಂಗಡಿಯ ಇಬ್ಬರು ಆರೋಪಿಗಳಿಗೆ 2ವರ್ಷ ಜೈಲು.

ಬೆಳ್ತಂಗಡಿ: 2011 ರಲ್ಲಿ ಕಾರ್ಕಳ ಬೆಳ್ಮಣ್ ಲಕ್ಷ್ಮೀ ಸೂಪರ್ ಶಾಪ್‌ನಲ್ಲಿ 48 ಸಾವಿರ ರೂ. ನಗದು ಕಳ್ಳತನ ಗೈದಿದ್ದ ಆರೋಪ ಎದುರಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ಇಬ್ಬರಿಗೆ 2 ವರ್ಷ ಜೈಲು ಶಿಕ್ಷೆ, 5 ಸಾವಿರ ರೂ. ದಂಡ ವಿಧಿಸಿ ಕಾರ್ಕಳ 2 ನೇ ಹೆಚ್ಚುವರಿ ನ್ಯಾಯಾಲಯ ತೀರ್ಪು ನೀಡಿದೆ.
ಬೆಳ್ತಂಗಡಿ ಗುರುವಾಯನಕೆರೆಯ ಹಂಝ, ಅಂಬೊಟ್ಟು ನಿವಾಸಿ ಮುಹಮ್ಮದ್ ಶಫಿ ಎಂಬವರೇ ಶಿಕ್ಷೆಗೊಳಗಾದವರು. ಕಾರ್ಕಳ ಗ್ರಾಮಾಂತರ ಠಾಣೆಯ ಅಂದಿನ ಎಸ್.ಐ ಅಝ್‌ಮತ್ ಅಲಿ ಅವರು ಇವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದರು. ಸರಕಾರದ ಪರ ಸರ್ಕಾರಿ ಅಭಿಯೋಜಕ ಜಗಧೀಶ್ ಕೃಷ್ಣ ಜಾಲಿ ಅವರು ವಾದಿಸಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.