ಉಜಿರೆ ಹೊಡೆದಾಟ ಪ್ರಕರಣ: ಪರಸ್ಪರರ ವಿರುದ್ಧ ಕೇಸು ದಾಖಲು.

ಉಜಿರೆ: ಜಾಗದಲ್ಲಿ ಕೊಳಚೆ ನೀರು ಹರಿಯುವ ವಿಚಾರವಾಗಿ ಉಜಿರೆ ಓಡಲದಲ್ಲಿ ಹೊಡೆದಾಟ ನಡೆದು ಎರಡೂ ಕಡೆಯವರ ಮೇಲೆ ಠಾಣೆಯಲ್ಲಿ ಕೇಸು ದಾಖಲಾದ ಘಟನೆ ಮೆ. 19 ರಂದು ನಡೆದಿದೆ.
ನಿವೃತ ಪೊಲೀಸ್ ಇನ್ಸ್‌ಪೆಕ್ಟರ್ ಗಂಗಾಧರಪ್ಪ ಅವರು ಒಂದು ಕಡೆಯಿಂದ ದೂರುದಾರರಾದರೆ ಇನ್ನೊಂದು ಕಡೆಯಿಂದ ರಘುರಾಮ ಶೆಟ್ಟಿ ಅವರು ದೂರುದಾರರು.
ರಘುರಾಮ ಶೆಟ್ಟಿ ಅವರು ಆರೋಪಿಸಿದಂತೆ, ತನ್ನ ಮನೆಯ ರಸ್ತೆಯ ಜಾಗವು ನನ್ನ ಖಾಸಗಿ ಜಾಗವಾಗಿದ್ದು ಇಲ್ಲೇ ಪಕ್ಕದಲ್ಲಿ ನೆಲೆಸಿರುವ ಗಂಗಾಧರಪ್ಪ ಅವರು ತಮ್ಮ ಕೊಳಚೆ ನೀರನ್ನು ರಸ್ತೆ ಮತ್ತು ಜಾಗಕ್ಕೆ ಬಿಡುತ್ತಿದ್ದು ಈ ವಿಚಾರವಾಗಿ ನಮ್ಮೊಳಗೆ ಚರ್ಚೆ ನಡೆದಿದೆ. ಈ ವೇಳೆ ನನ್ನ ಹಾಗೂ ನನ್ನ ಪತ್ನಿ ಮತ್ತು ಕೆಲಸದಾಕೆಯ ಮಾನಕ್ಕೆ ಹಾನಿಯಾಗುವ ರೀತಿಯಲ್ಲಿ ಗಂಗಾಧರಪ್ಪ ನಡೆದುಕೊಂಡಿದ್ದು ಹಲ್ಲೆಗೈದಿದ್ದಾರೆ ಎಂದು ಅಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಇನ್ನೊಂದೆಡೆಯಿಂದ ಗಂಗಾಧರಪ್ಪ ಅವರು ಪ್ರತಿದೂರು ನೀಡಿದ್ದು, ನೆರೆಹೊರೆಯವರಾದ ರಘುರಾಮ ಶೆಟ್ಟಿ ಅವರು ತಮ್ಮ ಮನೆಯ ತ್ಯಾಜ್ಯವಸ್ತುಗಳನ್ನು ನನ್ನ ಮನೆಯ ಆವರಣ ಗೋಡೆ ಬಳಿ ತಂದು ಎಸೆಯುತ್ತಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ನನಗೆ ಹಲ್ಲೆ ನಡೆಸಿದ್ದಾರೆ ಎಂದಿದ್ದು. ಈ ಹಿನ್ನೆಲೆಯಲ್ಲಿ ಎದುರುದಾರರ ವಿರುದ್ಧ ದಲಿತ ದೌರ್ಜನ್ಯ ಕಾಯಿದೆಯಡಿ ಕೇಸು ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.