ಎಟಿಎಂ ಕಾರ್ಡ್ ಎಗರಿಸಿ ಹಣ ಕಳವುಗೈಯ್ಯುತ್ತಿದ್ದ ಚಾಣಾಕ್ಷ ಕಳ್ಳನ ಬಂಧನ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಯಾತ್ರಾರ್ಥಿಗಳು ದೇವರ ದರ್ಶನಕ್ಕೆ ತೆರಳುವ ವೇಳೆ ಪರ್ಸ್ ಮತ್ತು ಇತರ ಸೊತ್ತುಗಳನ್ನು ತಮ್ಮ ವಾಹನದಲ್ಲಿಟ್ಟು ತೆರಳುವುದು ಸಾಮಾನ್ಯ. ಆದರೆ ಇದೇ ಸಮಯಕ್ಕೆ ಹೊಂಚು ಹಾಕುತ್ತಿದ್ದ ಕಿರಾತಕನೊಬ್ಬ ವಾಹನಗಳ ಗಾಜನ್ನು ಒಡೆದು ಪರ್ಸ್, ಎಟಿಎಂ ಕಾರ್ಡ್ ಎಗರಿಸಿ ಹಣ ಲಪಟಾಯಿಸುತ್ತಿ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಎಚ್.ಡಿ ಕೋಟೆಯವರಾಗಿದ್ದು ಪ್ರಸ್ತುತ ಬೆಂಗಳೂರು ಆನೆಕಲ್ಲ್‌ನಲ್ಲಿ ನೆಲೆಸಿರುವ ಎನ್. ಕಿಶೋರ್ ಕುಮಾರ್ ಎಂಬವರೆಂದು ಗುರುತಿಸಲಾಗಿದೆ. ಇವರು ಈ ಹಿಂದೆ ಕೂಡ ಎರಡು ಬಾರಿ ಇದೇ ರೀತಿಯ ಕೃತ್ಯವೆಸಗಿ ಯಶಸ್ವಿಯಾಗಿದ್ದರು. ಮೂರನೇ ಬಾರಿಗೆ ಕಾರೊಂದರೊಳಗೆ ಇಟ್ಟಿದ್ದ ಪರ್ಸ್ ಮತ್ತು ಎಟಿಎಂ ಕಾರ್ಡನ್ನು ತನ್ನ ಬಳಿ ಇದ್ದ ಕೃತಕ ಕೀ ಬಳಸಿ ತೆಗೆದು ಹಣ ಡ್ರಾ ಮಾಡಿಕೊಂಡಿದ್ದರು. ಕೆಲವರು ಮರೆತುಹೋಗುತ್ತದೆ ಎಂಬ ಕಾರಣಕ್ಕೆ ಎಟಿಎಂ ಕಾರ್ಡ್‌ನಲ್ಲಿ ಅದರ ಪಾಸ್‌ವರ್ಡ್ (ಗುಪ್ತಸಂಖ್ಯೆ) ಅನ್ನು ಬರೆದಿಡುವ ಕೆಟ್ಟ ಹವ್ಯಾಸ ಇಟ್ಟುಕೊಂಡಿರುತ್ತಾರೆ. ಅಂತೆಯೇ ಹಿಂದೆ ಕಳವುಗೈದಿದ್ದ ಎಟಿಎಂ ನಿಂದ ಕಿಶೋರ್ ಕುಮಾರ್ ಪಾಸ್‌ವರ್ಡ್ ಬಳಸಿ 40 ಸಾವಿರ, 25 ಸಾವಿರ ಮತ್ತು 30 ಸಾವಿರ ಹೀಗೆ ಒಟ್ಟು ಮೂರು ಬಾರಿ 95 ಸಾವಿರ ರೂ. ಎಗರಿಸಿದ್ದರು. ಇದೀಗ ಧರ್ಮಸ್ಥಳದ ಪಾರ್ಕಿಂಗ್‌ನಲ್ಲಿ ಕಳವಿಗೆ ಹೊಂಚುಹಾಕುತ್ತಿದ್ದಾಗ ಸಿಸಿ ಕ್ಯಾಮರಾ ಆಧರಿಸಿ ನಡೆಸಿದ ಕರ್ಯಾಚರಣೆಯಲ್ಲಿ ಕಳ್ಳತನ ಕೃತ್ಯ ಬಯಲಾಗಿದ್ದು ಕಳ್ಳ ಈಗ ಜೈಲು ಸೇರುವಂತಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.