ಕಡಿರುದ್ಯಾವರ ಮಠ ದೇವಸ್ಥಾನ ವಠಾರದಲ್ಲಿ 1193 ನೇ ಮದ್ಯವರ್ಜನ ಶಿಬಿರ.

Advt_NewsUnder_1
Advt_NewsUnder_1
Advt_NewsUnder_1

ಕಡಿರುದ್ಯಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಾರ್ಮಾಡಿ ವಲಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಇದರ ವತಿಯಿಂದ ಮಠ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ 1193 ನೇ ಮದ್ಯವರ್ಜನ ಶಿಬಿರ ಉದ್ಘಾಟನೆಗೊಂಡಿತು.
ಸಮಾರಂಭದ ಅಧ್ಯಕ್ಷತೆಯನ್ನು ಜನಜಾಗೃತಿ ವೇದಿಕೆ ತಾ. ಅಧ್ಯಕ್ಷ ಬೇಬಿ ಚೆರಿಯನ್ ವಹಿಸಿದ್ದರು. ಉದ್ಘಾಟನೆಯನ್ನು ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್ ಕಾಪಿನಡ್ಕ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಗ್ರಾ. ಯೋಜನೆಯ ಜಿಲ್ಲಾ ನಿರ್ದೇಶಕ ಚಂದ್ರಶೇಖರ ಗೌಡ, ತಾ. ಯೋಜನಾಧಿಕಾರಿ ಜಯಕರ ಶೆಟ್ಟಿ, ಜನಜಾಗೃತಿ ವೇದಿಕೆ ಚಾರ್ಮಾಡಿ ವಲಯಾಧ್ಯಕ್ಷ ಅನಂತರಾವ್ ಚಾರ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.
ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಚಾರ್ಮಾಡಿ ವಲಯ, ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಮಠ ಕಡಿರುದ್ಯಾವರ, ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನ ಮುಂಡಾಜೆ, ಸಿಯೋನ್ ಆಶ್ರಮ ಟ್ರಸ್ಟ್ ಗಂಡಿಬಾಗಿಲು, ಮುಂಡಾಜೆ ಕೃಷಿ ಪತ್ತಿನ ಸಹಕಾರಿ ಸಂಘ, ಅನಂತ ಫಡ್ಕೆ ಮೆಮೋರಿಯಲ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ಮುಂಡಾಜೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಚಾರ್ಮಾಡಿ ವಲಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶಿಬಿರ ನಡೆಯಿತು.
ಶಿಬಿರಾಧಿಕಾರಿ ಭಾಸ್ಕರ್, ಚಾರ್ಮಾಡಿ ವಲಯದ ಗ್ರಾ. ಯೋ. ಮೇಲ್ವಿಚಾರಕ ರವಿ, ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ ಆಗಿರುವ ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಕಿಶೋರ್ ಕುಮಾರ್ ವಳಂಬ್ರ, ಕೋಶಾಧಿಕಾರಿ ವಿನಾಯಕ ಪ್ರಭು ಆಲಂದಡ್ಕ, ಗ್ರಾ. ಯೋ. ಸೇವಾ ಪ್ರತಿನಿಧಿಗಳಾದ ಸರಿತಾ, ದಿಶಾ, ರಶ್ಮಿ, ಅನೀಶ್, ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷರುಗಳಾದ ಜಯಾನಂದ, ಆನಂದ ನಾಯ್ಕ, ಪ್ರವೀಣ್ ಮೊದಲಾದವರು ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.