ಉಜಿರೆ: ಚಿಗುರು- 2018 ರ ಬೇಸಿಗೆ ಶಿಬಿರ.

Advt_NewsUnder_1
Advt_NewsUnder_1

ಉಜಿರೆ : ಕಪುಚಿನ್ ಕೃಷಿಕ ಸೇವಾ ಕೇಂದ್ರ ವಿಮುಕ್ತಿ ಲಾಲ, ಚೈಲ್ಡ್ ಫಂಡ್ ಇಂಡಿಯಾ, ಮತ್ತು ಸಂತ ಅಂತೋನಿ ಚರ್ಚ್ ಉಜಿರೆ ಇದರ ಸಹಯೋಗದೊಂದಿಗೆ ಮಕ್ಕಳಿಗೆ ಎರಡು ದಿನಗಳ ಚಿಗುರು-2018 ಬೇಸಿಗೆ ಶಿಬಿರವು ಅನುಗ್ರಹ ಕಾಲೇಜು ಉಜಿರೆಯಲ್ಲಿ ನಡೆಸಲಾಯಿತು. ಉಜಿರೆ ಚರ್ಚ್‌ನ ಧರ್ಮಗುರು ವಂ.ಫಾ| ಜೋಸೆಫ್ ಮಸ್ಕರೇನ್ಹಸ್ ರವರು  ಉದ್ಘಾಟನೆಯನ್ನು  ನೆರವೇರಿಸಿ ಶುಭ ಹಾರೈಸಿದರು.
ವಿಮುಕ್ತಿ ಕಪುಚಿನ್ ಕೃಷಿಕ್ ಸೇವಾ ಕೇಂದ್ರ ನಿರ್ದೇಶಕ ವಂ.ಫಾ ವಿನೋದ್ ಮಸ್ಕರೇನ್ಹಸ್ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಮುಖ್ಯ  ಅಥಿತಿಗಳಾಗಿ ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ.ಫಾ ಉದಯ್ ಜೋಸೆಫ್ ಫೆರ್ನಾಂಡಿಸ್ , ಸಂಸ್ಥೆಯ ಯೋಜನಾ ಪ್ರಬಂಧಕ ಫ್ರಾನ್ಸಿಸ್‌ಧಾಂತಿ , ಶ್ರೀಮತಿ ಹೆಲೆನ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಅಮ್ಮಿ ಸಿಸ್ಟರ್,  ದಯಾ ವಿಮುಕ್ತಿ ವಿಶೇಷ ಶಾಲೆಯ ಮುಖ್ಯೋಪಾದ್ಯಾಯ ವಂ.ಫಾ ಎಡ್ವಿನ್ ಡಿಸೋಜ, ವಿಮುಕ್ತಿ ಕಪುಚಿನ್‌ಕೃಷಿಕ್ ಸೇವಾ ಕೇಂದ್ರದ ನಿರ್ದೇಶಕ ವಂ.ಫಾ ವಿನೋದ್ ಮಸ್ಕರೇನ್ಹಸ್, ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಜೆ ಶಿಬಿರಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನೀಡಲಾಯಿತು. ಸಮಾರೋಪ ಸಮಾರಂಭ ಕಾರ್‍ಯಕ್ರಮದಲ್ಲಿ ಮಕ್ಕಳು ಶಿಬಿರದ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು ಹಾಗೆ ಮಕ್ಕಳಿಗೆ ಕಾರ್‍ಯಚಟುವಟಿಕೆಗಳ ಮೇಲೆ ಬಹುಮಾನವನ್ನು ವಿತರಿಸಲಾಯಿತು. ಎರಡು ದಿನದ ಬೇಸಿಗೆ ಶಿಬಿರದಲ್ಲಿ ಸಂಸ್ಥೆಯ ಶಿಕ್ಷಣ ಸಂಯೋಜಕಿ ಕು. ಎಮಿಲ್ಡಾ ಮತ್ತು ವಿಮುಕ್ತಿ ಸಿಬ್ಬಂದಿಗಳು ಹಾಗೂ 100 ಮಕ್ಕಳು ಕಾರ್‍ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕು.ಹೀತೆಶ್ ಸ್ವಾಗತಿಸಿ, ಕು.ಪ್ರೀತಿ ವಂದಿಸಿ. ಕು.ಸಂಜನಾ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.