ಶಿರ್ಲಾಲು: ಅಸಮರ್ಪಕ ಕಾಮಗಾರಿ ನಾಗರಿಕರಿಂದ ರಸ್ತೆ ತಡೆ ಪ್ರತಿಭಟನೆ.

Advt_NewsUnder_1
Advt_NewsUnder_1
Advt_NewsUnder_1

ಶಿರ್ಲಾಲು: ಕೆದ್ದುನಿಂದ ಶಿರ್ಲಾಲು ತನಕ ನಡೆಯುತ್ತಿರುವ ರಸ್ತೆ ಕಾಮಗಾರಿ ಸಮರ್ಪಕವಾಗಿಲ್ಲ ಎಂದು ಆರೋಪಿಸಿ ಊರ ನಾಗರಿಕರು ಪ್ರತಿಭಟನೆ ನಡೆಸಿದ ಘಟನೆ ಮೇ.16 ರಂದು ವರದಿಯಾಗಿದೆ.
ಕೆದ್ದುನಿಂದ ಶಿರ್ಲಾಲು ತನಕ ಇರುವ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ತೀರಾ ಹದಗೆಟ್ಟು ಹೋಗಿದ್ದು, ಇದನ್ನು ಅಭಿವೃದ್ಧಿ ಪಡಿಸುವಂತೆ ಹಲವು ಸಮಯಗಳಿಂದ ಜನರು ಒತ್ತಾಯಿಸುತ್ತಾ ಬಂದಿದ್ದರು. ಅಲ್ಲದೆ ಒಂದೆರಡು ಬಾರಿ ಪ್ರತಿಭಟನೆಗಳು ಕೂಡಾ ನಡೆದಿತ್ತು. ಈ ಎಲ್ಲಾ ಘಟನೆಗಳ ಹಿನ್ನಲೆಯಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರರ ಪ್ರಯತ್ನದಿಂದ ಈ ರಸ್ತೆ ಅಭಿವೃದ್ಧಿಗೆ ಸರಕಾರ 2.83 ಕೋಟಿ ಅನುದಾನವನ್ನು ಬಿಡುಗಡೆ ಮಾಡಿತ್ತು. ಇದರ ಗುತ್ತಿಗೆಯನ್ನು ದುರ್ಗಾಂಬಾ ಕನ್‌ಸ್ಟ್ರಕ್ಷನ್‌ರವರು ವಹಿಸಿಕೊಂಡಿದ್ದಾರೆ.
ಇದೀಗ ಇದರ ಕಾಮಗಾರಿ ಆರಂಭಗೊಂಡು ಎಳೆಂಟು ತಿಂಗಳು ಕಳೆದಿದೆ. ಶಿರ್ಲಾಲು ಸೊಸೈಟಿ ಬಳಿಯಿಂದ ಕರಂಬಾರು ಕ್ರಾಸ್ ತನಕ ಡಾಮರೀಕರಣ ಕಾಮಗಾರಿ ಪೂರ್ತಿಗೊಂಡಿದೆ. ಅಲ್ಲಿಂದ ಕೆದ್ದು ತನಕ ಜಲ್ಲಿ ಹಾಕುವ ಕೆಲಸ ನಡೆಯತ್ತಿದೆ. ಡಾಮರೀಕರಣಗೊಂಡ ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದೆ. ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ, ಎಳೆಂಟು ತಿಂಗಳು ಕಳೆದರೂ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಆರೋಪಿಸಿದ ಊರಿನ ನೂರಾರು ನಾಗರಿಕರು ಮೇ.16 ರಂದು ಶಿರ್ಲಾಲಿನಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಹಾಗೂ ಪೊಲೀಸರು ಆಗಮಿಸಿ ಪ್ರತಿಭಟನಾಗಾರರ ಜೊತೆ ಮಾತುಕತೆ ನಡೆಸಿದರು. ಪ್ರತಿಭಟನಾಗಾರರು ಕಳಪೆ ಕಾಮಗಾರಿ ಬಗ್ಗೆ ಆಕ್ಷೇಪ ಸಲ್ಲಿಸಿದರು. ಹಾಕಿದ ಡಾಮರು ಕೈಯಲ್ಲಿ ಕಿತ್ತು ಬರುತ್ತಿದೆ, ಜೊತೆಗೆ ರಸ್ತೆಗೆ ಹಾಕುವ ಜಲ್ಲಿಯಲ್ಲಿ ಮಣ್ಣು ಮಿಶ್ರಣವಾಗಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಆಗಮಿಸಿದ ಇಂಜಿನಿಯರ್ ಗುತ್ತಿಗೆದಾರರಿಗೆ ಯಾವುದೇ ಹಣ ಪಾವತಿಸಿಲ್ಲ, ಕಳಪೆ ಕಾಮಗಾರಿಯ ಬಗ್ಗೆ ಪರಿಶೀಲನೆ ನಡೆಸಿ ಸರಿಪಡಿಸಲಾಗುವುದು, ಡಾಮರೀಕರಣದ ಗುಣಮಟ್ಟವನ್ನು ಸಂಬಂಧ ಪಟ್ಟವರಿಂದ ತನಿಖೆಗೆ ಒಳಪಡಿಸುವುದಾಗಿ ಭರವಸೆ ನೀಡಿದರೂ ಪ್ರತಿಭಟನಾಗಾರರು ಒಪ್ಪಲಿಲ್ಲ.
ಸ್ಥಳಕ್ಕೆ ಗುತ್ತಿಗೆದಾರರು ಮತ್ತು ಮೇಲಾಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಜಿಲ್ಲೆಯಲ್ಲಿ ಸೆಕ್ಷನ್ ಇರುವುದರಿಂದ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ಪ್ರತಿಭಟನಾಗಾರರನ್ನು ಸಮಾಧಾನ ಪಡಿಸಿ ಸಂಜೆ ಇಲಾಖೆಯ ಮೇಲಾಧಿಕಾರಿಗಳು ಮತ್ತು ಗುತ್ತಿಗೆದಾರರ ಜೊತೆ ವಿವಾದದ ಬಗ್ಗೆ ಮಾತುಕತೆ ನಡೆಸುವುದಾಗಿ ತೀರ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.