ಎಸ್ಸೆಸ್ಸೆಲ್ಸಿ: ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸ್ಯಾಕ್ಸೋಫೋನ್ ಕಲಾವಿದೆ ಸಹೋದರಿಯರು.

            ಸ್ನೇಹಾ ಬಿ                                      ರಕ್ಷಿತಾ ಬಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಸ್ಯಾಕ್ಸೋಫೋನ್ ಕಲಾವಿದರ ತಂಡವಾದ ಬುಡೆಂಗೊಟ್ಟು ಬೇಬೇಂದ್ರ ತಂಡದ ಇಬ್ಬರು ಸ್ಯಾಕ್ಸೋಫೋನ್ ಕಲಾವಿದ ಸಹೋದರಿಯರಾದ ಸ್ನೇಹಾ ಬಿ ಮತ್ತು ರಕ್ಷಿತಾ ಬಿ ಅವರು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ದೇಜಪ್ಪ ಮತ್ತು ನಿವೇದಿತಾ ದಂಪತಿ ಪುತ್ರಿಯಾಗಿರುವ ಸ್ನೇಹಾ ಬಿ ಅವರು 553 ಅಂಕಗಳನ್ನು ಪಡೆದರೆ, ರಮೇಶ್ ಮತ್ತು ರೋಹಿಣಿ ದಂಪತಿ ಪುತ್ರಿ ರಕ್ಷಿತಾ ಬಿ ಅವರು 543 ಅಂಕಗಳನ್ನು ಪಡೆದು ಈ ದಾಖಲೆ ಬರೆದಿದ್ದಾರೆ.
ಪಠ್ಯೇತರ ಚಟುವಟಿಕೆಯಿಂದ ಫಲಿತಾಂಶಕ್ಕೆ ಅಡ್ಡಿಯಾಗುವುದಿಲ್ಲ ಎಂದು ಈ ಹಿಂದೆಯೇ ಅನೇಕ ಬಾರಿ ಸಾಬೀತಾಗಿದ್ದರೂ ಕೂಡ ಈ ಸಹೋದರಿಯರ ಫಲಿತಾಂಶ ಕೂಡ ಮತ್ತೊಮ್ಮೆ ಇದನ್ನು ನಿರೂಪಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.