ಬೆಳ್ತಂಗಡಿ ತಾಲೂಕಿನ ಜನತೆಗೆ ಸಂದ ಜಯವಾಗಿದೆ: ನಳಿನ್ ಎಂ. ಪೂಂಜ

ವೇಣೂರು: ಪುತ್ರ ಹರೀಶ್ ಪೂಂಜನ ಜಯ ಬೆಳ್ತಂಗಡಿ ತಾಲೂಕು ಜನತೆಯ ಜಯ ಆಗಿದೆ. ಕಳೆದೆರಡು ಮೂರು ವರ್ಷಗಳಿಂದ ಧಾರ್ಮಿಕ, ಸಾಮಾಜಿಕವಾಗಿ ಸಕ್ರೀಯವಾಗಿ ತೊಡಗಿಸಿ ಹಿರಿಯರ ಆಶೀರ್ವಾದ ಬೇಡುತ್ತಾ ಯುವಕರ ಕಣ್ಮಣಿ ಆಗಿದ್ದ ಹರೀಶ್ ಪೂಂಜರವರಿಗೆ ತಾಲೂಕಿನ ಜನತೆ ಆಶೀರ್ವಾದ ನೀಡಿದ್ದಾರೆ  ಎಂದು ಹರೀಶ್ ಪೂಂಜರ ತಾಯಿ ನಳಿನಿ ಎಂ. ಪೂಂಜ  ಸಂತಸ ವ್ಯಕ್ತಪಡಿಸಿದರು.

ಪುತ್ರನಿಗೆ ಪ್ರಥಮ ಬಾರಿಗೆ ವಿಧಾನಸಭೆ ಚುನಾವಣೆ ಎದುರಿಸಲು ಅವಕಾಶ ಸಿಕ್ಕಿರುವುದು ಸಂತಸ ಹಾಗೂ ನಮಗೆ ಹೆಮ್ಮೆ ತಂದಿತ್ತು. ಅದರಲ್ಲೂ ಇದೀಗ ಜಯ ಹೊಂದಿರುವುದು ನಮ್ಮ ಸಂತಸಕ್ಕೆ ಪಾರವೇ ಇಲ್ಲ. ಜನಸೇವೆಯ ಮೂಲಕ ರಾಜಕೀಯ ಪ್ರವೇಶಿಸಿದ ಪುತ್ರ ಹರೀಶ್ ಪೂಂಜ ಮುಂದೆಯೇ ಜನರ ಸೇವೆಯಲ್ಲಿಯೇ ನಿರತನಾಗಲಿದ್ದಾನೆ. ಹಿರಿಯರಲ್ಲಿ ಗೌರವವನ್ನು ಕಾಣುತ್ತಾನೆ, ಯುವಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ಆತನನ್ನು ಕಂಡರೂ ಯುವಕರಿಗೆ ಬಹಳ ಅಚ್ಚುಮೆಚ್ಚು ಎಂದರು. ಅವನ ನಿರಂತರದ ಸಮಾಜ ಸೇವೆಯ ಕಾರ್ಯಗಳಿಗೂ ನಾವೂ ಸಂತಸದಿಂದ ಕೈಜೋಡಿಸುತ್ತೇವೆ ಎಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.