ಅಂಚೆ ಮತಪತ್ರ ನೀಡಲು ಬಂದರೆ ಚುನಾವಣಾ ಕಚೇರಿ ಖಾಲಿ ಖಾಲಿ…

ಬೆಳ್ತಂಗಡಿ: ಚುನಾವಣಾ ಕರ್ತವ್ಯಕ್ಕಾಗಿ ಬೇರೆ ಕಡೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳಿಗೆ ನೀಡಲಾದ ಅಂಚೆ ಮತಪತ್ರದ ಮೂಲಕ ಮತಚಲಾವಣೆಗೈದು ಅದನ್ನು ಮೇ. 14 ರಂದು ತಾಲೂಕು ಮಿನಿ ವಿಧಾನ ಸೌಧ ಕಟ್ಟಡದ ಚುನಾವಣಾಧಿಕಾರಿ ಕಚೇರಿಗೆ ತಂದರೆ ಅಲ್ಲಿ ಅಧಿಕಾರಿಗಳಾಗಲೀ, ಸಿಬಂದಿಗಳಾಗಲೀ ಇಲ್ಲದೆ ಕೆಲ ಹೊತ್ತು ಕಾಯವ ಸ್ಥಿತಿ ನಿರ್ಮಾಣವಾಗಿತ್ತು ಎಂದು ಸರಕಾರಿ ಸಿಬಂದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೋಮ್‌ಗಾರ್ಡ್ಸ್, ಸರಕಾರಿ ಶಾಲಾ ಶಿಕ್ಷಕರುಗಳ ಪೈಕಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವವರಿಗೆ ಅಂಚೆ ಮತದಾನದ ಅವಕಾಶ ಇದೆ. ಅಂತೆಯೇ ಮೇ. 14 ರಂದು ಅವರು ತಮ್ಮ ಮತಗಳನ್ನು ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಕಚೇರಿಗೆ ತಂದಾಗ ಅಲ್ಲಿ ಯಾವುದೇ ಸಿಬಂದಿ, ಅಧಿಕಾರಿಗಳು ಇರಲಿಲ್ಲ. ಚುನಾವಣಾ ಶಾಖೆ 24*7 ಎಂಬುದಾಗಿ ಚುನಾವಣಾ ಜರೂರು ಕರ್ತವ್ಯ ನಿರ್ವಹಿಸಬೇಕಾಗಿದ್ದು, ನಿಯಮವಿದ್ದರೂ ಇಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳಲಾಗಿದೆ ಎಂದು ಆಕ್ಷೇಪಣೆ ಕೇಳಿಬಂತು. ಬಹಳ ವೇಳೆಯಾದ ಬಳಿಕ ಕಚೇರಿಗೆ ಆಗಮಿಸಿದ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಬಸವರಾಜ್ ಅಯ್ಯಣ್ಣನವರ್ ಅಂಚೆ ಮತಗಳನ್ನು ಸ್ವೀಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.