ಕಳೆಂಜ ಕೊಲೆ ಪ್ರಕರಣ : ಪತ್ನಿ ಮತ್ತು ಪ್ರಿಯಕರ ಇಬ್ಬರಿಗೂ ಜೀವಾವಧಿ ಕಾರಾಗೃಹ ಶಿಕ್ಷೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅಣ್ಣಯ್ಯ ಗೌಡ (ಕೊಲೆಯಾದ ವ್ಯಕ್ತಿ)

ಬೆಳ್ತಂಗಡಿ: ನಿಡ್ಲೆ ಸನಿಹದ ಕಳೆಂಜ ಗ್ರಾಮ ಶಾಲೆತಡ್ಕ ಬಳಿಯ ನಿವಾಸಿ, ಈ ಹಿಂದೆ ಚಾಲಕನಾಗಿದ್ದ, ಕೆಂಚಪ್ಪ ಗೌಡರ ಪುತ್ರ ಅಣ್ಣಯ್ಯ ಗೌಡ(48ವ.) ಅವರನ್ನು ಎ.19ರ ರಾತ್ರಿ ತನ್ನ ಪತ್ನಿ ಮತ್ತು ಆಕೆಯ ಪ್ರಿಯತಮನಾಗಿದ್ದ ಫಾರೆಸ್ಟರ್ ಸೇರಿ ಮನೆಯಲ್ಲೇ ತಲೆಗೆ ಕಬ್ಬಿಣದ ಸರಳಿನಿಂದ ಹೊಡೆದು ಅತ್ಯಂತ ಅಮಾನವೀಯವಾಗಿ ಕೊಲೆಗೈದ ವಿಲಕ್ಷಣಕಾರಿ ಘಟನೆಗೆ ಸಂಬಂಧಿಸಿದಂತೆ ಮಂಗಳೂರಿನ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಲಯ ಇಬ್ಬರೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಆರೋಪಿಗಳಾಗಿದ್ದ ಅಣ್ಣಯ್ಯ ಗೌಡ ಅವರ ಪತ್ನಿ ಅಮಿತಾ ಯಾನೆ ದೇವಕಿ (42 ವ.) ಮತ್ತು ಆಕೆಯ ಪ್ರಿಯಕರ ಭದ್ರಾವತಿ ತಾಲೂಕು ಸಿದ್ದಾಪುರ ತಾಂಡದ ನಾವುಂಗ ನಿವಾಸಿ ರುದ್ರೇಶ (39 ವ.) ಈ ಇಬ್ಬರನ್ನೂ ಆಪರಾಧಿಗಳೆಂದು ಘೋಷಿಸಿದೆ.
ಶಿಕ್ಷೆಯ ವಿವರ:
ಕೊಲೆ ಕೃತ್ಯ ಆರೋಪಕಕ್ಕೆ ಜೀವಾವಧಿ ಶಿಕ್ಷೆ ಮತ್ತು ತಲಾ 50 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದರೆ ಮತ್ತೆ 1 ವರ್ಷ ಜೈಲು ಶಿಕ್ಷೆ ವಿಸ್ತರಣೆ, ಕೊಲೆಗೆ ಒಳಸಂಚು ರೂಪಿಸಿದ ಆರೋಪಕ್ಕೆ ಜೀವಾಧಿ ಸಜೆ ಮತ್ತು 50 ಸಾವಿರ ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಹೆಚ್ಚುವರಿ 1 ವರ್ಷ ಜೈಲು ಶಿಕ್ಷೆ, ಸಾಕ್ಷ್ಯ ನಾಶ ಆರೋಪಕ್ಕೆ 2 ವರ್ಷ ಸಾಮಾನ್ಯ ಶಿಕ್ಷೆ ತಲಾ 15 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದರೆ 6 ತಿಂಗಳ ಸಜೆ, ಕೃತ್ಯದ ಬಗ್ಗೆ ತಪ್ಪು ಮಾಹಿತಿ ನೀಡಿದ ಆರೋಪಕ್ಕಾಗಿ 1 ವರ್ಷ ಸಾಮಾಜ್ಯ ಸಜೆ ಮತು ತಲಾ 10 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದರೆ 3 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಲಯ ತೀರ್ಪು ನೀಡಿದೆ.
ಅಪರಾಧಿಗಳಿಂದ ಸಂಗ್ರಹವಾಗುವ ಒಟ್ಟು ಮೊತ್ತ 2,50,000 ರೂ ಯಲ್ಲಿ 60 ಸಾವಿರ ರೂ. ಅನ್ನು ಅಣ್ಣಯ್ಯ ಗೌಡರ ಮೂವರು ಮಕ್ಕಳು (ಇಬ್ಬರು ಪುತ್ರಿಯರು, ಓರ್ವ ಪುತ್ರ) ಅವರಿಗೆ ಪರಿಹಾರವಾಗಿ ನೀಡಬೇಕು, ಅಲ್ಲದೆ ಜಿಲ್ಲಾಧಿಕಾರಿಗಳೂ ಕೂಡ ಈ ಮಕ್ಕಳಿಗೆ ಸೂಕ್ತ ಪರಿಹಾರ ನಿಗಧಿಪಡಿಸಿ ವಿತರಿಸುವ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಧೀಶರ ಆದೇಶದಲ್ಲಿ ತಿಳಿಸಲಾಗಿದೆ. ರುದ್ರೇಶರಿಂದ ಅಂದು ವಶಪಡಿಸಿಕೊಂಡ ಮೋಟಾರು ಬೈಕನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಲು ತೀರ್ಪು ನೀಡಿದೆ.
ಪ್ರಕರಣದ ಹಿನ್ನಲೆ: 2014 ಎ.19 ರಂದು ರಾತ್ರಿ 11.00 ಗಂಟೆಗೆ ಅಣ್ಣಯ್ಯ ಗೌಡರನ್ನು ಅವರ ಮನೆಯಲ್ಲಿಯೇ ಮಾರಕಾಯುಧಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು. ಘಟನೆ ನಡೆದ ಸಂಬಂಧ ಅಪರಾಧ ಪತ್ತೆದಳದ ಪೊಲೀಸರು ಮತ್ತು ಉಪ್ಪಿನಂಗಡಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಆಯುಧ, ರಕ್ತಸಿಕ್ತವಾದ ವಸ್ತ್ರಗಳು, ಮತ್ತು ರುದ್ರೇಶ್ ಅವರ ಬೈಕನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಎ.19 ರಂದು ರಾತ್ರಿ ಎಂದಿನಂತೆ ಮನೆಯಲ್ಲಿ ಅಣ್ಣಯ್ಯ ಗೌಡ, ಪತ್ನಿ ಅಮಿತಾ, 4 ವರ್ಷದ ಪುತ್ರ ಅನೀಶ್ ಊಟ ಮಾಡಿ ಮಲಗಿದ್ದರು. ರಾತ್ರಿ 10 ಕ್ಕೆ ಮನೆಗೆ ಬಂದಿದ್ದ ಆರೋಪಿ ರುದ್ರೇಶ ಅಮಿತಾ ಜೊತೆ ಊಟವನ್ನೂ ಸೇವಿಸಿ ಬಳಿಕ 10.30ರ ವೇಳೆ ಅಣ್ಣಯ್ಯ ಗೌಡರನ್ನು ರಾಡಿನಿಂದ ಹೊಡೆದು ನೆಲಕ್ಕುರುಳಿಸಿದ್ದರು. ಇದರಿಂದ ಗಂಭೀರ ಗಾಯಗೊಂಡು ತೀವ್ರ ರಕ್ತಶ್ರಾವಕ್ಕೊಳಗಾಗಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ನಂತರ ರುದ್ರೇಶ ಸ್ಥಳದಿಂದ ಕಾಲ್ಕಿತ್ತಿದ್ದರು.
ಆದರೆ ಪ್ರಕರಣವನ್ನು ತಿರುಚಿದ್ದ ಆರೋಪಿ ದೇವಕಿ ಅವರು ಕತೆ ಹೆಣೆದು, ಅಪರಾತ್ರಿ ಮೂವರು ಅಪರಿಚಿತ ಕಿಡಿಗೇಡಿಗಳು ಮನೆಯ ಹಿಂದಿನಿಂದ ಹೆಂಚು ತೆಗೆದು ಒಳಬಂದು ತನ್ನ ಪರಿಯನ್ನು ಕೊಲೆಗೈದಿದ್ದಾರೆ ಎಂದು ಪ್ರಾರಂಭದಲ್ಲಿ ದೂರು ನೀಡಿದ್ದರಾದರೂ ಪ್ರಕರಣದ ಜಾಡು ಹಿಡಿದ ಪೊಲೀಸರು ಇವರೇ ಆರೋಪಿಗಳೆಂದು ಪತ್ತೆಹಚ್ಚಿ ಅವರನ್ನು ಬಲೆಗೆ ಕೆಡವಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.