ಮೇ.16ರಂದು ಎಸ್.ಡಿ.ಎಂ.ಐ.ಟಿಯಲ್ಲಿ ಅಡಿಕೆ ಬೆಳೆಗಾರರ ಸಮಾವೇಶ ಮತ್ತು ರಾಜ್ಯಮಟ್ಟದ ಪ್ರಾಜೆಕ್ಟ್ ಎಗ್ಸಿಬಿಶನ್

Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯವು ಮೇ.೧೬ರಂದು ಐ.ಇ.ಡಿ.ಸಿ, ಕ್ಯಾಂಪ್ಕೋ ನಿಯಮಿತ, ಮಂಗಳೂರು, ಹಾಗೂ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇವರ ಸಹಭಾಗಿತ್ವದಲ್ಲಿ ಅಡಿಕೆ ಬೆಳೆಯಲ್ಲಿ ಹೆಚ್ಚುವರಿ ಉತ್ಪಾದನೆ ಹಾಗೂ ಜೇನು ಕೃಷಿಯ ಬಗ್ಗೆ ಮಾಹಿತಿ ಕಾರ್‍ಯಾಗಾರ ನಡೆಯಲಿದೆ.
ಹನಿಡೇ ಬಿ ಫಾರ್ಮ್ ದಿ ಹೈವ್ ನಿರ್ದೇಶಕ ಅಪೋರ್ವ, ಸಂಶೋಧಕ ಮತ್ತು ಅಡಿಕೆ ಉತ್ಪಾದಕ ಬದನಾಜೆ ಶಂಕರ್ ಭಟ್, ಎ.ಆರ್.ಡಿ.ಎಫ್ ಟ್ರಸ್ಟಿ ಮಂಚಿ ಶ್ರೀನಿವಾಸ್ ಆಚಾರ್ ಮಾಹಿತಿ ನೀಡಲಿದ್ದಾರೆ. ಆಸಕ್ತರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕಾಲೇಜಿನ ಪ್ರಾಂಶುಪಾಲ ಡಾ| ಕೆ. ಸುರೇಶ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.
ಎಸ್.ಡಿ.ಎಮ್ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗ ಮತ್ತು ಐ.ಎಸ್.ಟಿ.ಇ, ನ್ಯೂ ಡೆಲ್ಲಿ ಸಹಭಾಗಿತ್ವದಲ್ಲಿ ರಾಜ್ಯಮಟ್ಟದ ಪ್ರಾಜೆಕ್ಟ್ ಎಗ್ಸಿಬಿಶನ್, ಇನ್ನೋವೇಟ-೨೦೧೮, ಮೇ.೧೭ರಂದು ಆಯೋಜಿಸಲಾಗಿದೆ. ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿದೆ.
ಆಯ್ದ ಪ್ರಾಜೆಕ್ಟ್‌ಗಳಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಗುವುದು. ಈ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ವಿನಂತಿ. ಹೆಸರು ನೋಂದಾಯಿಸಲು ಸಂಘಟಕರಾದ ಪ್ರೊ. ಎಚ್.ಎಂ.ಟಿ ಗಡಿಯಾರ್ (9743703840) ಇವರನ್ನು ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.