ಉಜಿರೆ: ಹರೀಶ್ ಪೂಂಜ ಪರ ಬೃಹತ್ ಪ್ರಚಾರ ಸಭೆ ಮತ್ತು ಬೃಹತ್ ರೋಡ್‌ಶೋ.

 ಉಜಿರೆ: ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹರೀಶ್ ಪೂಂಜ ಪರ ಬೃಹತ್ ಪ್ರಚಾರ ಸಭೆ ಮತ್ತು ಬೃಹತ್ ರೋಡ್‌ಶೋ ಮೇ.9 ರಂದು ಉಜಿರೆಯಲ್ಲಿ ನಡೆಯಿತು.
ಉತ್ತರ ಪ್ರದೇಶದ ಗ್ರಾಮೀಣಾಭಿವೃದ್ಧಿ ಸಚಿವ ಡಾ| ಮಹೇಂದ್ರ ಸಿಂಗ್ ಭಾಗವಹಿಸಿ, ಚುನಾವಣಾ ಪ್ರಚಾರ ಭಾಷಣ ಮಾಡಿದರು.
ಸಂಸದ ನಳಿನ್ ಕುಮಾರ್ ಕಟೀಲು, ಮೋನಪ್ಪ ಭಂಡಾರಿ, ಕುಶಾಲಪ್ಪ ಗೌಡ ಪೂವಾಜೆ, ಕುಂಟಾರು ರವೀಶ್ ತಂತ್ರಿ, ಪೂಜಾ ಪೈ, ಶಾರದಾ ರೈ, ಅಣ್ಣಯ್ಯ ಕುಲಾಲ್, ಸಂಪತ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು
ತಾ.ಪಂ. ಸದಸ್ಯ ಶಶಿಧರ್ ಕಲ್ಮಂಜ ಸ್ವಾಗತಿಸಿದರು.
ವಲಯ ಸಹ ಪ್ರಭಾರಿ ಪ್ರತಾಪಸಿಂಹ ನಾಯಕ್ ಪ್ರಸ್ತಾವಿಸಿದರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿದರು. ಸಭೆಯ ಮೊದಲು ಉಜಿರೆಯ ಬೆಳಾಲು ಕ್ರಾಸ್ ರಸ್ತೆಯಿಂದ ಜನಾರ್ದನ ದೇವಸ್ಥಾನ ರಥಬೀದಿ ತನಕ ಸಹಸ್ರಾರು ಕಾರ್ಯಕರ್ತರೊಂದಿಗೆ ಮುಖಂಡರು ರೋಡ್ ಶೋ ನಡೆಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.