HomePage_Banner_
HomePage_Banner_

ಬೆಳ್ತಂಗಡಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬಿ.ಜೆ.ಪಿ ಸಂಕಲ್ಪ: ಪ್ರತಾಪ್‌ಸಿಂಹ ನಾಯಕ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಎಲ್ಲಾ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಕ್ಷೇತ್ರದ ಎಲ್ಲಾ ಹಳ್ಳಿಗಳಲ್ಲೂ ಪಕ್ಕಾ ರಸ್ತೆಯನ್ನಾಗಿಸಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವುದು ಸೇರಿದಂತೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಸಂಕಲ್ಪ ಮಾಡಿದೆ ಎಂದು ಭಾರತೀಯ ಜನತಾ ಪಕ್ಷ ಮಂಗಳೂರು ವಿಭಾಗದ ಸಹಪ್ರಭಾವಿ ಕೆ. ಪ್ರತಾಪ್‌ಸಿಂಹ ನಾಯಕ್ ರವರು ಮೇ.9 ರಂದು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬೆಳ್ತಂಗಡಿ ಕ್ಷೇತ್ರವನ್ನು ಸರ್ವತೋಮುಖ ಅಭಿವೃದ್ಧಿ ಪಡಿಸಲು ಭಾರತೀಯ ಜನತಾ ಪಕ್ಷ ಪ್ರತಿಜ್ಞೆ ಮಾಡಿದೆ. ಜನರ ದೀರ್ಘ ಕನಸು ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ಶ್ರದ್ದೆಯಿಂದ ಕೆಲಸ ಮಾಡುತ್ತೇವೆ. ಬಸ್ ನಿಲ್ದಾಣಗಳ ಮೂಲಭೂತ ಸೌಕರ್ಯ, ಸುಸಜ್ಜಿತ ಬಸ್‌ನಿಲ್ದಾಣ ಪಟ್ಟಣ ಸೌಂದರ್ಯಕರಣ, ಬಿ.ಸಿ ರೋಡ್ ನಿಂದ ಬೇಲೂರಿನ ವರೆಗೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ, ಧರ್ಮಸ್ಥಳಕ್ಕೆ ಉತ್ತಮ ರಸ್ತೆ ಮೂಲಭೂತ ಸೌಕರ್ಯಗಳನ್ನು ಉತ್ತಮ ಗೊಳಿಸಿ ಧಾರ್ಮಿಕ ಪ್ರವಾಸವನ್ನಾಗಿ ಮಾಡುವುದು.
ಉಜಿರೆ ನಗರ ಮುನಿಸಿಪಾಲಿಟಿಯನ್ನಾಗಿ ರಚಿಸುವುದು, ಎಂಡೋಸಲ್ಫಾನ್ ಸಂತ್ರಸ್ತರಿಗೆ ಪರಿಹಾರ ಮತ್ತು ವೈದ್ಯಕೀಯ ಕೇಂದ್ರ ಪುನರ್ವಸತಿ ಕೇಂದ್ರ ಸ್ಥಾಪನೆ.
ಕೋಮು ಸೌಹರ್ದತೆಯ ರಕ್ಷಣೆಗೆ ಬೇಕಾದ ಕಾನೂನುಗಳನ್ನು ಜಾರಿಗೆತರಲಾಗುವುದು. ತುಳುಬಾಷೆಯನ್ನು ರಾಜ್ಯದ ಅಧಿಕೃತ ಭಾಷೆಗಳಲ್ಲಿ ಪರಿಗಣಿಸಿ 8ನೇ ಪರಿಚ್ಚೇದದಲ್ಲಿ ಸೇರಿಸುವಂತೆ ಕೆಲಸಮಾಡುವುದು. ಪ್ರತಿಯೊಂದು ಬೆಳೆಯನ್ನು ಪ್ರತ್ಯಾಕವಾಗಿ ಗುರುತಿಸಿ ಸೂಕ್ತ ಬೆಂಬಲ ಬೆಲೆ ನೀತಿ ಜಾರಿಗೆ ತರುವುದು. ರಬ್ಬರ್ ಬೆಲೆಯ ಆಮದು ಸುಂಕವನ್ನು ಹೆಚ್ಚಿಸಿ ಸ್ಥಳೀಯ ರೈತರಿಗೆ ಸಹಾಯ ಮಾಡುವುದು. ಅಡಿಕೆ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಗಮನ. ಮರಳು ಒದಗಿಸುವ ಒಪ್ಪಂದದ ವಿದಾನವನ್ನು ಬಿಗಿಗೊಳಿಸಿ ಮರಳಿನ ಬೆಲೆಯಲ್ಲಿ ಪಾರದರ್ಶಕತೆ ತರಲಾಗುವುದು ಇ-ಹರಾಜಿನ ಅತ್ಯಧಿಕ ಬೆಲೆಯನ್ನು ನಿರ್ದೇಶಿಸುವುದರ ಮೂಲಕ ಮರಳಿನ ಬೆಲೆಯನ್ನು ನಿಯಂತ್ರಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಸೀತಾರಾಮ ಬಿ.ಎಸ್, ಕಾರ್ಯದರ್ಶಿ ರಾಘವ ಕಲ್ಮಂಜ, ಮಾಧ್ಯಮ ಪ್ರಮುಖ ರಾಜೇಶ್ ಪೆಂರ್ಬುಡ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.