HomePage_Banner_
HomePage_Banner_
HomePage_Banner_

ಎಂಡೋ ಸಂತ್ರಸ್ತರು ತೀರ್ಮಾನಿಸಿದ್ದ ಚುನಾವಣೆ ಬಹಿಷ್ಕಾರ ಹಿಂದೆ ತೆಗೆದುಕೊಳ್ಳಲಾಗಿದೆ -ಶ್ರೀಧರಗೌಡ

Advt_NewsUnder_1

ಬೆಳ್ತಂಗಡಿ : ಎಂಡೋ ಸಂತ್ರಸ್ತರ ಹಲವಾರು ಬೇಡಿಕೆಗಳನ್ನು ಜನಪ್ರತಿನಿಧಿಗಳು ಈಡೇರಿಸದೇ ಇದ್ದುದ್ದರಿಂದ ಎಂಡೋ ವಿರೋಧಿ ಹೋರಾಟ ಸಮಿತಿ ಚುನಾವಣೆ ಬಹಿಷ್ಕಾರಕ್ಕೆ ತೀರ್ಮಾನಿಸಿದ್ದು, ಚುನಾವಣೆ ಬಹಿಷ್ಕಾರದಿಂದ ಏನು ಪ್ರಯೋಜನವಿಲ್ಲ ಹೋರಾಟದ ಮೂಲಕ ಸಂತ್ರಸ್ತರ ಪರಿಹಾರ ಮಾಡುವುದಕ್ಕಾಗಿ ಚುನಾವಣೆಯ ಬಹಿಷ್ಕಾರವನ್ನು ಹಿಂದೆತೆಗೆದುಕೊಳ್ಳಲಾಗಿದೆ ಎಂದು ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಕೆ. ಹೇಳಿದರು.
ಅವರು ಮೇ.8 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಮತದಾನ ಎನ್ನುವುದು ಕೆಲಸ ಮಾಡದ ಜನಪ್ರತಿನಿಧಿಯನ್ನು ಬದಲಾಯಿಸಲು ಇರುವ ಅವಕಾಶವಾಗಿದ್ದು ಎಂಡೋ ಸಂತ್ರಸ್ತರು ಸೂಕ್ತ ಶಾಸಕರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಎಲ್ಲಾ ಸಂತ್ರಸ್ತರು ಮತ್ತು ಅವರ ಕುಟುಂಬದವರು ಮತದಾನದಲ್ಲಿ ಭಾಗವಹಿಸಲಿದ್ದಾರೆ. ಸಂತ್ರಸ್ತರು ಅಭ್ಯರ್ಥಿಗಳ ದೂರವಾಣಿ ಸಂಖ್ಯೆಗಳನ್ನು ಪಡೆದುಕೊಂಡು ಚುನಾವಣೆಯ ಬಳಿಕ ನಿರಂತರ ಸಂಪರ್ಕದಲ್ಲಿ ಇದ್ದು ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳಲಿದ್ದಾರೆ. ಈ ಬಾರಿ ಜಿಲ್ಲೆಯ ನಾಗರಿಕರು ಎಂಡೋ ಸಂತ್ರಸ್ತರಿಗೆ ಧ್ವನಿಯಾಗಬಲ್ಲ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಮಾಡಲಾಗುವುದು.
ಈ ನಿಟ್ಟಿನಲ್ಲಿ ಮೇ ತಿಂಗಳ ಕೊನೆಯ ವಾರದಲ್ಲಿ ಚುನಾಯಿತ ನೂತನ ಮುಖ್ಯ ಮಂತ್ರಿಗಳನ್ನು ನಿಯೋಗ ಭೇಟಿಯಾಗಿ ಸಂತ್ರಸ್ತರ ಸಮಸ್ಯೆಗಳನ್ನು ಮನವರಿಕೆ ಮಾಡಲಿದ್ದೇವೆ. ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಜೂನ್ ತಿಂಗಳಲ್ಲಿ ಜಿಲ್ಲೆಯ ಮಠಾಧೀಶರುಗಳು, ಧರ್ಮಗುರುಗಳನ್ನು ಸೇರಿಸಿ ಸಮಾಲೋಚನಾ ಸಭೆ ನಡೆಸಿ ಆಗಸ್ಟ್ 15 ರಂದು ಬೆಂಗಳೂರು ಪ್ರೀಡಂ ಪಾರ್ಕ್‌ನಲ್ಲಿ ನಿರ್ಣಾಯಕ ಹೋರಾಟವನ್ನು ಸಂಘಟಿಸಲಾಗುವುದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಎಂಡೋ ವಿರೋಧಿ ಹೋರಾಟ ಸಮಿತಿಯ ಕಾರ್ಯದರ್ಶಿ ಪುರಂದರ ಕಡೀರ, ಸದಸ್ಯರುಗಳಾದ ಬಾಲಕೃಷ್ಣ ಬಳಕ್ಕ, ತುಕ್ರಪ್ಪ ಶೆಟ್ಟಿ ನೂಜಿ ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.