ಬೆಳ್ತಂಗಡಿಯಲ್ಲಿ ಪ್ರೇರಣಾ ಸ್ಕೂಲ್ ಆಫ್ ಕಾಮರ್ಸ್ ಕನ್ಸಲ್ಟೆನ್ಸಿ ಉದ್ಘಾಟನೆ .

 ಬೆಳ್ತಂಗಡಿ: ಚಾರ್ಟರ್‍ಡ್ ಎಕೌಂಟೆಂನ್ಸಿ ಮತ್ತು ಕಂಪೆನಿ ಸೆಕ್ರೆಟರಿ ಕೋರ್ಸ್ ನೀಡುವ ತಾಲೂಕಿನ ಮೊತ್ತಮೊದಲ ಸಂಸ್ಥೆ ಪ್ರೇರಣಾ ಸ್ಕೂಲ್ ಆಫ್ ಕಾಮರ್ಸ್ ಮತ್ತು ಕನ್ಸಲ್ಟೆನ್ಸಿ ಮೇ. 6 ರಂದು ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ಗುಡಿ ಹಿಂಭಾಗದ ಶ್ರೀ ದೇವಿ ಕಾಂಪ್ಲೆಕ್ಸ್‌ನ ಒಂದನೇ ಮಹಡಿಯಲ್ಲಿ ಉದ್ಘಾಟನೆಗೊಂಡಿತು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ ಯಶೋವರ್ಮ ಉದ್ಘಾಟನೆ ನೆರವೇರಿಸಿದರು.
ದೀಪಪ್ರಜ್ವಲನೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯ, ರಾಜಾರಾಮ ಇಂಡ್ರಸ್ಟ್ರೀಸ್ ಮಾಲಕ ರಮಾನಂದ ಸಾಲ್ಯಾನ್, ವಾಣಿ ಶಿಕ್ಷಣ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಿ ಸೋಮೇಗೌಡ ಜಂಟಿಯಾಗಿ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಜಮೀಯತುಲ್ ಫಲಾಹ್ ಮಾಜಿ ಅಧ್ಯಕ್ಷ ಉಮರ್‌ಕುಂಞಿ ನಾಡ್ಜೆ, ಎಸ್‌ಡಿಎಂ ಪ. ಪೂ ಕಾಲೇಜು ಪ್ರಾಂಶುಪಾಲ ಎನ್ ದಿನೇಶ್ ಚೌಟ, ಶ್ರೀ ಗುರುದೇವ ಕಾಲೇಜು ಪ್ರಾಂಶುಪಾಲ ಪ್ರೊ. ಕೃಷ್ಣಪ್ಪ ಪೂಜಾರಿ, ವಾಣಿ ಪ. ಪೂ. ಕಾಲೇಜು ಪ್ರಾಂಶುಪಾಲ ಡಿ. ಯದುಪತಿ ಗೌಡ, ಉಪಪ್ರಾಂಶುಪಾಲ ವಿಷ್ಣು ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.
ಚೈತನ್ಯಾ ಕೆ (ಎಂ. ಫಾರ್ಮಾ), ಎಸ್‌ಡಿಎಂ ಪದವಿ ಕಾಲೇಜು ವಿಶ್ರಾಂತ ಪ್ರಾಂಶುಪಾಲ ಡಾ. ಕೆ.ಎಸ್ ಮೋಹನ್‌ನಾರಾಯಣ ಉಪಸ್ಥಿತರಿದ್ದರು.
ಪಾಲುದಾರರಾದ ಸನತ್ ಕುಮಾರ್ ಮತ್ತು ಶ್ರೀಮತಿ  ಕ್ಷಮಾ ಸಿ.ಎ, ಹಾಗೂ ಅವರ ಕುಟುಂಬ ವರ್ಗದವರು ಭಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.