HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಮಕ್ಕಳಿಗೆ ಉತ್ತಮ ಸಂಸ್ಕಾರ-ಸನ್ನಡತೆ ಕಲಿಸಿ : ಕೃಷ್ಣಪ್ಪ ಪೂಜಾರಿ

ಮುಂಡೂರು : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡೂರು ಇದರ ಪ್ರತಿಷ್ಠಾ ವರ್ಧಂತ್ಯುತ್ಸವ, ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಸಭಾ ಕಾರ್‍ಯಕ್ರಮದಲ್ಲಿ ಧಾರ್ಮಿಕ ಮಾತನಾಡಿದ ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜು ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿ ಈ ದೇವಿಯ ಸಾನಿಧ್ಯದಲ್ಲಿ ಒಂದು ಶಕ್ತಿ ಇದೆ, ಇಲ್ಲಿಯ ಜನರು ಪುಣ್ಯವಂತರು, ಮಕ್ಕಳಿಗೆ ನಾವು ಉತ್ತಮ ಸಂಸ್ಕಾರ, ಸನ್ನಡತೆ, ಇವುಗಳೆಲ್ಲವನ್ನು ಕಲಿಸಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಬೆಳ್ತಂಗಡಿ ಜನಜಾಗೃತಿ ವೇದಿಕೆ ಅಧ್ಯಕ್ಷ ಕಿಶೋರ್ ಕುಮಾರ್ ಎರ್ಮೆತ್ತೋಡಿ, ಮುಂದಿನ ವರ್ಷ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವತಯಾರಿಯ ಬಗ್ಗೆ ಅವಲೋಕಿಸಿದರು. ಇನ್ನೋರ್ವ ಮುಖ್ಯ ಅತಿಥಿ ಬೆಳ್ತಂಗಡಿ ಎಸ್.ಕೆ.ಡಿ.ಆರ್.ಡಿ.ಪಿ. ಯೋಜನಾಧಿಕಾರಿ ಜಯಕರ ಶೆಟ್ಟಿ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ| ಎಂ.ಎಂ. ದಯಾಕರ ಭಟ್ ಮಾತನಾಡಿ ದೇವಸ್ಥಾನದ ಎಲ್ಲಾ ಅಭಿವೃದ್ಧಿ ಕಾರ್‍ಯಕ್ರಮಗಳಿಗೆ ಜನರ ಸಹಕಾರ ಕೋರಿದರು. ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೀವ ಸಾಲಿಯಾನ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಚಾಮರಾಜ ಸೇಮಿತ, ಜಗನ್ನಾಥ ಆಚಾರ್ಯ, ನೀತಾ ಮಹೇಶ್, ಕೇಶವ ಕುಲಾಲ್, ರಮಾನಂದ ಸಾಲಿಯಾನ್, ಸದಾನಂದ ನಾಯ್ಕ, ಪುಷ್ಪಾವತಿ ಶೆಟ್ಟಿ, ಅರ್ಚಕರಾದ ಅರವಿಂದ ಭಟ್ ಎಂ. ಹಾಗೂ ಪೂಜಾ ಸಮಿತಿಯ ಕಾರ್ಯದರ್ಶಿ ಅಶೋಕ್ ಕುಮಾರ್ ಕೊಡಕ್ಕಾಲು ಉಪಸ್ಥಿತರಿದ್ದರು. ಜಾತ್ರೋತ್ಸವದ ಅಂಗವಾಗಿ ಕೋಟಿಕಟ್ಟೆ ಅಂಗನವಾಡಿ ಮಕ್ಕಳಿಂದ ಮತ್ತು ಊರವರಿಂದ ಸಾಂಸ್ಕೃತಿಕ ಕಾರ್‍ಯಕ್ರಮ ಮತ್ತು ರವಿಚಂದ್ರ ಸಾಲಿಯಾನ್ ವೇಣೂರು ಬರೆದು ನಿರ್ದೇಶಿಸಿದ ಸೇವಂತಿಗ್ ಮದಿಮೆಗೆ ಎಂಬ ತುಳು ನಾಟಕ ಪ್ರದರ್ಶನ ನಡೆಯಿತು.
ಪ್ರಮುಖರಾದ ಅಶೋಕ್ ಕುಮಾರ್ ಜೈನ್, ವಸಂತ ಪೂಜಾರಿ ನಾನಿಲ್ತ್ಯಾರು, ಜಿನ್ನಪ್ಪ ಬಂಗೇರ, ಆನಂದ ಆಚಾರ್ಯ, ಸುಶೀಲ ಶೆಟ್ಟಿ, ಭಾರತಿ ಆಚಾರ್ಯ, ರಮೇಶ್ ಕುಲಾಲ್, ಲತೇಶ್ ಶೆಟ್ಟಿ, ವಿನಾಯಕ ನಾಯಕ್, ರಮೇಶ್ ದೇವಾಡಿಗ, ಪುರಂದರ ಆಚಾರ್ಯ, ಪ್ರಶಾಂತ್ ಶೆಟ್ಟಿ, ಪ್ರವೀಣ್ ಮಡಿವಾಳ, ಸಂತೋಷ್ ಶೆಟ್ಟಿ, ಪ್ರಶಾಂತ್ ಆಚಾರ್ಯ, ಸತೀಶ್ ಮುಂಡೂರು ಜಾತ್ರೋತ್ಸವದ ಎಲ್ಲಾ ಕಾರ್ಯಕ್ರಮಗಳಿಗೆ ಸಹಕರಿಸಿದರು. ಕು| ಆಶಿಕಾ ಪ್ರಾರ್ಥನೆಗೈದರು. ಕೇಶವ ಕುಲಾಲ್ ಧನ್ಯವಾದ ನೀಡಿ, ಸುಧಾ ರಮಾನಂದ ಮತ್ತು ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.