HomePage_Banner_
HomePage_Banner_

ಕಳೆಂಜ ಕೊಲೆ ಪ್ರಕರಣ: ಆರೋಪ ಸಾಬೀತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅಣ್ಣಯ್ಯ ಗೌಡ ಕೊಲೆಯಾದ ವ್ಯಕ್ತಿ

ಕಳೆಂಜ: ಕಳೆಂಜ ಗ್ರಾಮದಲ್ಲಿ ನಾಲ್ಕು ವರ್ಷಗಳ ಹಿಂದೆ ಅಮಿತಾ ಯಾನೆ ದೇವಕಿ ಎಂಬವರು ತನ್ನ ಪ್ರಿಯಕರ ಫಾರೆಸ್ಟರ್ ಟಿ.ರುದ್ರೇಶ ರವರೊಂದಿಗೆ ಸೇರಿ ತನ್ನ ಪತಿ ಅಣ್ಣಯ್ಯ ಗೌಡ ರವರನ್ನು ಕೊಲೆಗೈದ ಪ್ರಕರಣವೊಂದು ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಮಿತಾ ಯಾನೆ ದೇವಕಿ ಹಾಗೂ ಆಕೆಯ ಪ್ರಿಯಕರನನ್ನು ಅಪರಾಧಿಗಳೆಂದು ನ್ಯಾಯಾಲಯ ಘೋಷಿಸಿದೆ.

ಪ್ರಕರಣದ ಹಿನ್ನಲೆ: 2014 ಎ.4 ರಂದು ರಾತ್ರಿ 11.00 ಗಂಟೆಗೆ ಅಣ್ಣಯ್ಯ ಗೌಡರನ್ನು ಅವರ ಮನೆಯಲ್ಲಿಯೇ ಮಾರಕಾಯುಧಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು. ಪತ್ನಿ ಅಮಿತಾ ಮತ್ತು ಫಾರೆಸ್ಟರ್ ಟಿ. ರುದ್ರೇಶ ನಡುವಿನ ಅನೈತಿಕ ಸಂಬಂಧ ಇದಕ್ಕೆ ಕಾರಣ ಎಂದು ಆರೋಪಿಸಲಾಗಿತ್ತು.

ವಿಚಾರಣೆ ನಡೆಸಿದ ನ್ಯಾಯಾಧೀಶ ಶಾರದಾ.ಬಿ. ಯವರು ಆರೋಪ ಸಾಬೀತಾಗಿದೆ ಎಂದು ತೀರ್ಮಾನಕ್ಕೆ ಬಂದು  ಆರೋಪಿಗಳು ಅಪರಾಧಿಗಳು ಎಂದು ಗುರುವಾರ ತೀರ್ಪು ಪ್ರಕಟಿಸಿದ್ದಾರೆ. ಮೇ.8 ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗುವ ಸಾಧ್ಯತೆ ಇದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.