ಪಕ್ಷೇತರ ಅಭ್ಯರ್ಥಿ ಯು.ಎಂ. ಸೈಯ್ಯದ್ ಹಸನ್ ಪತ್ರಿಕಾಗೋಷ್ಠಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ:  ವಿಧಾನಸಭಾ ಕ್ಷೇತ್ರದ 67 ವರ್ಷಗಳ ಇತಿಹಾಸದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಅಲ್ಪಸಂಖ್ಯಾತರಿಗೆ ಅನ್ಯಾಯವನ್ನು ಮಾಡಿದೆ ಎಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಯು.ಎಂ.ಸೈಯ್ಯದ್ ಹಸನ್ ರವರು ಹೇಳಿದರು.
ಅವರು ಮೇ.4 ರಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 37000 ಮುಸ್ಲಿಂ ಮತದಾರರು, ಸುಮಾರು 18000 ಕ್ರಿಶ್ಚಿಯನ್ ಮತದಾರರು, ಹೀಗೆ ಒಟ್ಟು 55000 ಅಲ್ಪಸಂಖ್ಯಾತ ಮತಗಳಿದ್ದು ಅಲ್ಪಸಂಖ್ಯಾತರಿಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ಸೂಕ್ತ ಸ್ಥಾನಮಾನ ದೊರೆತಿಲ್ಲ. ಶಿಕ್ಷಣ, ಆರೋಗ್ಯ, ಉದ್ಯೋಗ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಜೀವನಮಟ್ಟ ಅತ್ಯಂತ ಕೆಳಮಟ್ಟದಲ್ಲಿದೆ. ಅಲ್ಪಸಂಖ್ಯಾತರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ವಿವಿಧ ಮಜಲುಗಳಲ್ಲಿ ಸಮುದಾಯ ಅಭಿವೃದ್ಧಿಯ ದೃಷ್ಟಿಯಿಂದ ಸೂಕ್ತ ಸ್ಥಾನಮಾನದ ಅಗತ್ಯವಿದೆ.ಆದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಲ್ಪಸಂಖ್ಯಾತ ಮತದಾರರಿದ್ದರೂ ಕನಿಷ್ಠ ಓರ್ವನಾದರೂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವುದು ಅತ್ಯಂತ ದುರದೃಷ್ಟಕರ. ಇದು ಮನಸ್ಸಿಗೆ ತೀರಾ ಬೇಸರ ನೀಡುವ ಸಂಗತಿ. ಚುನಾವಣೆಯಲ್ಲಿ ಸ್ಪರ್ಧಿಸಿ ನಾವು ನಮ್ಮ ಇರುವಿಕೆಯನ್ನು ಸಮುದಾಯದ ಸಾಮರ್ಥ್ಯವನ್ನು ಪರಿಚಯಿಸಿ ಎಲ್ಲಾ ರಾಜಕೀಯ ಪಕ್ಷಗಳನ್ನು ಎಚ್ಚರಿಸುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಸಮುದಾಯ ಸ್ವಾಭಿಮಾನದ ಪ್ರತೀಕವಾಗಿ ಎಲ್ಲಾ ರಾಜಕೀಯ ಪಕ್ಷಗಳ ಅಲ್ಪಸಂಖ್ಯಾತ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸಿ ಸಮುದಾಯದ ಸೂಕ್ತ ಪ್ರತಿನಿಧಿತ್ವಕ್ಕಾಗಿ ಮುಂಬರುವ 2018 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ.
ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿ ಸಿಗುವ ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ನೀಡದೆ ಸಮರ್ಪಕವಾಗಿ ಸಮುದಾಯದ ಅರ್ಹ ಫಲಾನುಭವಿಗಳಿಗೆ ನೇರವಾಗಿ ತಲುಪಿಸುವಂತಹ ವ್ಯವಸ್ಥೆ ಮಾಡುವುದು, ಪರಭಾರೆಯಾಗಿರುವ ರಾಜ್ಯದ ವಿವಿಧೆಡೆ ಇರುವ ವಕ್ಫ್ ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳುವ ಕಾರ್ಯವನ್ನು ಕೈಗೆತ್ತಿಕೊಳ್ಳುವುದು, ರಾಜ್ಯದಲ್ಲೆಲ್ಲಾ ಮದರಸಗಳ ಶಿಕ್ಷಕರಿಗೆ ಸರಕಾರ ನೌಕರರ ವೇತನಶ್ರೇಣಿಯನ್ನು ಜಾರಿಗೊಳಿಸುವುದು, ಮದುವೆಯಾಗುವ ಪ್ರತಿ ಅಲ್ಪಸಂಖ್ಯಾತ ಮಹಿಳೆಯರಿಗೆ ವಿವಾಹದ ಖರ್ಚಿಗಾಗಿ ರೂ. 1 ಲಕ್ಷವನ್ನು ಸರಕಾರ ಭರಿಸುವುದು, ಸಮುದಾಯದ ಎಲ್ಲರಿಗೂ ಉಚಿತ ಉನ್ನತ ಶಿಕ್ಷಣವನ್ನು ನೀಡುವುದು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪ್ರತಿ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒಂದು ಶಾದಿಮಹಲ್ ನಿರ್ಮಿಸುವುದು, ಅಲ್ಪಸಂಖ್ಯಾತ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಗೂ ಉಚಿತ ಆರೋಗ್ಯ ವಿಮಾ ಯೋಜನೆ ಅಲ್ಪಸಂಖ್ಯಾತ ಸಮುದಾಯದ ಸಮಗ್ರ ಅಭಿವೃದ್ಧಿ ಬಗ್ಗೆ ಕಾರ್ಯಯೋಜನೆ, ಸಮಗ್ರ ಕುಡಿಯುವ ನೀರಿನ ಯೋಜನೆ, ಉತ್ತಮ ಗುಣಮಟ್ಟದ ಗ್ರಾಮೀಣ ರಸ್ತೆಗಳ ನಿರ್ಮಾಣ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕ್ಷೇತ್ರದ ಎಲ್ಲಾ ಸಾಮಾಜಿಕ, ಧಾರ್ಮಿಕ ಪ್ರತಿನಿಧಿಗಳ ಸಲಹಾ ಸಮಿತಿಯೊಂದನ್ನು ರಚಿಸಿಕೊಂಡು, ಸಲಹೆಯನ್ನು ಪಡೆದುಕೊಂಡು ಜಾರಿಗೊಳಿಸುತ್ತೇನೆ ಎಂದು ಹೇಳಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.