ಎಸ್.ಡಿ.ಎಮ್ ಇನ್ನೋವೇಶನ್ ಸೆಂಟರ್ ಉದ್ಘಾಟನೆ.

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯ ಉಜಿರೆಯಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಇನ್ನೋವೇಶನ್ ಸೆಂಟರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.
ಗೋವಾದ ಪರ್ಸಿಸ್ಟಂಟ್ ಸಿಸ್ಟಮ್ಸ್ ನ ಟ್ಯಾಲೆಂಟ್ ವಿಭಾಗದ ಮುಖ್ಯಸ್ಥ ಹಾಗೂ ಸಹ ಉಪಾಧ್ಯಕ್ಷ ಗಿರೀಶ್ ಬಾರ್ಣೆ, ಡೋವರ್ಸ್ ಕಾರ್ಪೋರೇಶನ್ ನ ರಿಸರ್ಚ್ ಹೆಡ್ ಡಾ| ಅನಿಲ್ ಕುಮಾರ್, ಎನ್.ಐ.ಟಿ ಗೋವಾದ ಡೈರೆಕ್ಟರ್ ಡಾ| ಗೊಪಾಲ್ ಮುಗೇರಾಯ, ವಿಪ್ರೋದ ಜನರಲ್ ಮ್ಯಾನೇಜರ್ ಪಿ.ಬಿ ಕೊಟ್ಟೂರ್, ಡಿ.ಸುರೇಂದ್ರ ಕುಮಾರ್, ಪ್ರೊ.ಎಸ್ ಪ್ರಭಾಕರ್, ಎಸ್.ಡಿ.ಎಂ ಸೊಸೈಟಿಯ ಉಪಾಧ್ಯಕ್ಷರು, ಎಸ್.ಡಿ.ಎಂ ಸೊಸೈಟಿಯ ಕಾರ್‍ಯದರ್ಶಿ ಡಾ| ಬಿ ಯಶೋವರ್ಮ, ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ| ಕೆ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.
ಇಂಜಿನಿಯರಿಂಗ್ ಕಲಿಕಾ ಅವಧಿಯಲ್ಲಿ ವಿದ್ಯಾರ್ಥಿಗಳ ಕ್ರೀಯಾತ್ಮಕ ಕಲ್ಪನಾ ಶಕ್ತಿಯನ್ನು ಅನಾವರಣಗೊಳಿಸಿ ಅದಕ್ಕೆ ವಾಸ್ತವಿಕ ರೂಪ ನೀಡುವ ನಿಟ್ಟಿನಲ್ಲಿ ಪೂರಕವಾದ ವಾತಾವರಣ ಹಾಗೂ ಸೌಲಭ್ಯವನ್ನು ಈ ಲ್ಯಾಬ್ ಹೊಂದಿದೆ. ಗ್ರಾಮೀಣ ಪರಿಸರದ ಹಾಗೂ ಕೃಷಿಗೆ ಒತ್ತು ನೀಡುವ ಸಂಶೋಧನಾ ಮತ್ತು ಪರಿಹಾರೋಪಾಯ ಒದಗಿಸುವ ಪ್ರಾಜೆಕ್ಟ್ ಗಳಿಗೆ ಇಲ್ಲಿ ಆದ್ಯತೆ ನೀಡಲಾಗುತ್ತದೆ. ಇಂತಹ ಕೆಲವು ಯೋಜನೆಗಳನ್ನು ವಿದ್ಯಾರ್ಥಿಗಳೇ ಕಾರ್ಯರೂಪಗೊಳಿಸಿ ಅಭಿವೃದ್ದಿಪಡಿಸಿದಂತಹ ಕೆಲವು ಮಾದರಿಗಳನ್ನು (ಸ್ಮಾರ್ಟ್ ರಬ್ಬರ್ ಟ್ಯಾಪಿಂಗ್ ಮೆಶಿನ್, ಮಣ್ಣಿನ ಫಲವತ್ತತೆ ನಿಯಂತ್ರಕ ಮೆಶಿನ್, 3 ಆಪ್ರಿಂಟಿಂಗ್ ಮೆಶಿನ್, ಸೋಲಾರ್ ಗಾಳಿ ಶುದ್ದೀಕರಿಸುವ ಯಂತ್ರ ಮೊದಲಾದವು) ಪ್ರದರ್ಶಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.