ಪ್ರಮೋದ್ ಆರ್. ನಾಯಕ್‌ರಿಗೆ ಗೌರವ ಡಾಕ್ಟರೇಟ್

 ಬೆಳ್ತಂಗಡಿ : ಬೆಳ್ತಂಗಡಿಯ ಪ್ರಜ್ವಲ್ ಕಾಂಪ್ಲೇಕ್ಸ್ ಮಾಲಿಕ, ಮಂಜುಶ್ರೀ ಸೀನಿಯರ್ ಛೇಂಬರ್‌ನ ಸ್ಥಾಪಕಾಧ್ಯಕ್ಷ ಹಾಗೂ ನ್ಯಾಯವಾದಿ ಪ್ರಮೋದ್ ಆರ್. ನಾಯಕ್ ಅವರಿಗೆ ನೇಶನಲ್ ವರ್ಚುವಲ್ ಯೂನಿವರ್ಸಿಟಿ, ಫಾರ್ ಪೀಸ್ ಏಂಡ್ ಎಜುಕೇಶನ್ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಪ್ರಮೋದ್ ಆರ್.ನಾಯಕ್ ಅವರು ಸಾಮಾಜಿಕ ಸೇವಾ ವಿಭಾಗದಲ್ಲಿ ಡಾಕ್ಟರೇಟ್ ಪಡೆದಿದ್ದು ಇತ್ತೀಚೆಗೆ ಬೆಂಗಳೂರಿನ, ಭಾರತೀಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಲಾಯಿತು. ಇವರು ಕರ್ನಾಟಕ ರಾಜ್ಯ ಜೇಸೀಸ್‌ನ ಉಪಾಧ್ಯಕ್ಷರಾಗಿ, ಸುಳ್ಳ ರೋಟರಿಯ ಅಧ್ಯಕ್ಷರಾಗಿ, ಸುಳ್ಳ ತಾಲೂಕು ರಾಮಕ್ಷತ್ರಿಯ ಸಂಘದ ಸ್ಥಾಪಕಾಧ್ಯಕ್ಷರಾಗಿ, ಉಜಿರೆಯ ಶ್ರೀ ಧ.ಮ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದರು.
ಇವರು ದಿ| ಕೆ.ರಾಮ ನಾಯಕ್ ಹಾಗೂ ಶ್ರೀಮತಿ ಶ್ರೀದೇವಿ ದಂಪತಿ ಪುತ್ರರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.