ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಶತಮಾನೋತ್ತರ ಬೆಳ್ಳಿ ಸಂಭ್ರಮ.

 

ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರು ಇದರ ಶತಮಾನೋತ್ತರ ಬೆಳಿಹಬ್ಬ ಮಹಾಸಂಭ್ರಮ ಕಾರ್ಯಕ್ರಮವು ಮೇ.2 ರಂದು ಜರುಗಿತು.

 ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ  ವಂ|ಡಾ| ಅಲೋಶಿಯಸ್ ಪೌಲ್ ಡಿಸೋ’ಜ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಆಶೀರ್ವಚನ ನೀಡಿದ ಬೆಳ್ತಂಗಡಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಬಿಷಪ್ ಲಾರೆನ್ಸ್ ಮುಕ್ಕುಯಿಯವರು, ಮನುಷ್ಯ ಮಾನಸಿಕ ಮತ್ತು ಸಾಮಾಜಿಕ ಒತ್ತಡಕ್ಕೊಳಗಾಗಿ ಜೀವನ ನಡೆಸುತ್ತಿದ್ದು ಜೀವನ ಸಂಘರ್ಷಕ್ಕೊಳಗಾಗಿ ಮರಣದ ಸಂಸ್ಕೃತಿ ಅಪ್ಪಿಕೊಳ್ಳುತ್ತಿದ್ದಾನೆ. ಇದು ಒಳ್ಳೆದಲ್ಲ. ಮದ್ಯಪಾನ, ಲೈಂಗಿಕ ದುರಾಲೋಚನೆ, ಭಯೋತ್ಪಾದನೆ, ದುಶ್ಚಟಗಳಿಗೆ ಬಲಿಯಾಗಿ ಕೌಟುಂಬಿಕ ಪರಿಶುದ್ಧತೆ ಇಲ್ಲದೆ ಜೀವನ ನಡೆಸುವ ಬದಲು ಏಸುಸ್ವಾಮಿಯಂತೆ ಪರಿಶುದ್ಧ ಜೀವನ ನಡೆಸಿ ಅವರ ಕೃಪೆಗೆ ಒಳಗಾಗಬೇಕು ಎಂದರು.
ವೇದಿಕೆಯಲ್ಲಿದ್ದು ಸೇವೆ, ಉಪಕಾರ ಮಾಡಿದ ಮಂದಿಗೆ ಸನ್ಮಾನ ನೆರವೇರಿಸಿದ ಬಳ್ಳಾರಿ ಧರ್ಮ ಕೇಂದ್ರದ ಧರ್ಮಾಧ್ಯಕ್ಷ ಅತಿ ವಂದನೀಯ ಬಿಷಪ್ ಡಾ|ಹೆನ್ರಿ ಡಿಸೋಜಾ, ಪುತ್ತೂರು ಧರ್ಮಕೇಂದ್ರದ ಬಿಷಪ್ ಅತಿ ವಂದನೀಯ ಗೀವರ್ಗಿಸ್ ಮಾರ್ ಮಖಾರಿಯೋಸ್, ಆಶೀರ್ವಚನ ನುಡಿಗಳನ್ನಾಡಿದರು.
ಬೆಳ್ತಂಗಡಿ ಶಾಸಕ ವಸಂತ ಬಂಗೇರ, ಮಹಾಮಾತೆ ಸಿಸ್ಟರ್ ಸುಶೀಲಾ ಸಿಕ್ವೇರಾ, ಸಿಸ್ಟರ್ ಅಪೋಲಿನ್ ಕಾರ್ಡಿಯೇರೋ, ರೆ. ಫಾ. ಅಲೆಕ್ಸಾಂಡರ್ ಲೋಬೋ, ರೆ|ಫಾ|ವಲೇರಿಯನ್ ಫ್ರಾಂಕ್, ರೆ. ಫಾ. ಲಾರೆನ್ಸ್ ಮಸ್ಕರೇನ್ಹಸ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ 16 ನಿಮಿಷಗಳಲ್ಲಿ ತಯಾರಿಸಲಾಗಿದ್ದ ಮಡಂತ್ಯಾರಿನ ಚರಿತ್ರೆಯುಳ್ಳ ಕಿರುಚಿತ್ರ ಪ್ರದರ್ಶನ ನಡೆಯಿತು. ಇಗರ್ಜಿಯ ಮಕ್ಕಳು ಸ್ವಾಗತ ನೃತ್ಯ ನೀಡಿದರು. ಮಡಂತ್ಯಾರು ಚರ್ಚ್‌ನ ಈಗಿನ ಧರ್ಮ ಗುರುಗಳಾಗಿದ್ದು ಷಷ್ಟ್ಯಬ್ಧ ಆಚರಿಸಿಕೊಂಡ ರೆ|ಫಾ| ಬೇಸಿಲ್ ವಾಸ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶತಮನೋತ್ತರ ಸ್ಮರಣ ಸಂಚಿಕೆ ಬಿಡುಗಡೆ ನಡೆಯಿತು. 22 ಗುರಿಕಾರರಿಗೆ ಸನ್ಮಾನ, ಈ ಹಿಂದೆ ಧರ್ಮ ಗುರುಗಳಾಗಿ ಸೇವೆ ಸಲ್ಲಿಸಿದವರಿಗೆ ಸನ್ಮಾನ, ಸಾಧಕರಿಗೆ ಸನ್ಮಾನ, ಪಾಲನಾ ಮಂಡಳಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದರಿಗೆ ಸನ್ಮಾನ, ಬಡವರೊಬ್ಬರಿಗೆ ಮನೆ ದುರಸ್ಥಿ ಸಹಕಾರ ನೀಡುವಿಕೆ, ಕಾರ್ಯಕ್ರಮದ ವಿಶೇಷತೆಗಳಾಗಿದ್ದವು. ವಿಶಾಲವಾದ ಬಯಲು ಮಂಟಪದಲ್ಲಿ ಕಾರ್ಯಕ್ರಮ ನಡೆಯಿತು. ಸುಮಾರು 4 ಸಾವಿರಕ್ಕೂ ಮಿಕ್ಕಿದವರು ಸಭಾಂಗಣದಲ್ಲಿ ನೆರೆದಿದ್ದರೂ ಶಿಸ್ತಿಗೆ ಮೊದಲ ಆದ್ಯತೆ ನೀಡಿದ್ದರು. ಎಲ್ಲರಿಗೂ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಬ್ಯಾಂಡ್ ಸೆಟ್ ವಾದನ ಆಕರ್ಷಕವಾಗಿತ್ತು.
ಅಲೋಶಿಯಸ್ ಡಿಸೋಜಾ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ವಿವೇಕ್ ವಿನ್ಸೆಂಟ್ ಪಾಯಿಸ್ ಸಂಯೋಜನೆ ಮಾಡಿದರು.
ರೊನಾಲ್ಡ್ ಸಿಕ್ವೇರಾ ವಂದಿಸಿದರು. ಸೇಕ್ರೆಡ್ ಹಾರ್ಟ್ ಪ. ಪೂ ಕಾಲೇಜು ಪ್ರಾಂಶುಪಾಲ ರೆ| ಫಾ| ಜೆರೋಮ್ ಡಿಸೋಜಾ ಸನ್ಮಾನಿತ ಬಿಷಪರುಗಳ ಪರಿಚಯ ಮಂಡಿಸಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.