ಪಡ್ಡಂದಡ್ಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ.

ವೇಣೂರು: ಪಡ್ಡಂದಡ್ಕದಲ್ಲಿ 9 ಜನ ಬಿಜೆಪಿ ಕಾರ್ಯಕರ್ತರು ಮೇ.1 ರಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಕೆ. ವಸಂತ ಬಂಗೇರ ರವರ ಉಪಸ್ಥಿತಿಯಲ್ಲಿ ಗ್ರಾ.ಪಂ ಸದಸ್ಯ ಹರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅದ್ಯಕ್ಷ ಶ್ರೀನಿವಾಸ್ ಕಿಣಿ, ರಾಜ್ಯ ಕಾಂಗ್ರೆಸ್ ಹಿಂದುಳಿದ ವಿಭಾಗದ ಉಪಾಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಪಿತಾಂಬರ ಹೆರಾಜೆ , ಜಿ.ಪಂ ಸದಸ್ಯ ಧರಣೇಂದ್ರ ಕುಮಾರ್, ಜಿ.ಪಂ ಸದಸ್ಯ ಸಾಹುಲ್ ಹಮೀದ್, ಅಬ್ದುಲ್ ರಹಿಮಾನ್ ಪಡ್ಡಂದಡ್ಕ, ಜಿಲ್ಲಾ ಅಲ್ಪ ಸಂಖ್ಯಾತ ವಿಭಾಗ ಉಪಾಧ್ಯಕ್ಷ ಖಾಲಿದ್ ಪುಲಾಬೆ, ಜಿಲ್ಲಾ ಕಾರ್ಯದರ್ಶಿ ಅಲಿಯಬ್ಬ ಬಲ್ಲಂಗೇರಿ, ತಾಲೂಕು ಅಲ್ಪಸಂಖ್ಯಾತ ಕಾರ್ಯದರ್ಶಿ ಇಸ್ಮಾಯಿಲ್ ಕೆ ಪೆರಿಂಜೆ, ಶ್ರೀಪತಿ ಭಟ್, ಅಕ್ಬರ್ ಅಲಿ, ರುಕುಮಯ್ಯ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.