ಉಜಿರೆ: ಅನುಗ್ರಹ ಸಭಾಭವನ ಉದ್ಘಾಟನಾ ಸಮಾರಂಭ.

 ಉಜಿರೆ: ಸಂತ ಅಂತೋಣಿ ಚರ್ಚ್ ಉಜಿರೆ ಇದರ ಸುವರ್ಣ ಮಹೋತ್ಸವದ ಅಂಗವಾಗಿ ನೂತನವಾಗಿ ನಿರ್ಮಾಣಗೊಂಡ ಅನುಗ್ರಹ ಸಭಾಭವನವನ್ನು ಮೇ.1 ರಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ರೆ| ರೆ| ಡಾ| ಅಲೋಶಿಯಸ್ ಪಾವ್ಲ್ ಡಿಸೋಜಾ ರವರು ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥನದ ಆನುವಂಶಿಯ ಆಡಳಿತ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯ, ತಾ.ಪಂ ಸದಸ್ಯ ಶಶಿಧರ್ ಎಂ, ಉಜಿರೆ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ ಆಗಮಿಸಿದ್ದರು.
ಸಂತ ಅಂತೋಣಿ ಚರ್ಚ್‌ನ ಮುಖ್ಯಗುರುಗಳಾದ ಫಾ| ಜೋಸೆಫ್ ಮಸ್ಕರೇನ್ಹಸ್, ಸಹಾಯಕ ಗುರುಗಳಾದ ಫಾ| ಜೋಸೆಫ್ ಉದಯ ಫೆರ್ನಾಂಡಿಸ್, ಚರ್ಚ್‌ನ ಉಪಾಧ್ಯಕ್ಷ ಅರುಣ್ ರೆಬೆಲ್ಲೊ, ಕಾರ್ಯದರ್ಶಿ ವಲೇರಿಯನ್ ರೊಡ್ರಿಗಸ್,ಬೆಳ್ತಂಗಡಿ ತಾಲೂಕಿನ ವಲಯದ ಎಲ್ಲಾ ಚರ್ಚ್‌ಗಳ ಧರ್ಮಗುರುಗಳು ಹಾಗೂ ಸಮಸ್ತ ಕ್ರೈಸ್ತ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.