ಅಶೋಕ್ ಕುಮಾರ್ ರವರಿಗೆ ಯಮನಾದ ಲಾರಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 ಉಪ್ಪಿನಂಗಡಿ: ಎ.25 ರಂದು ಬೆಳಿಗ್ಗೆ 10.15 ಗಂಟೆಗೆ ಉಪ್ಪಿನಂಗಡಿ ಗುರುವಾಯನಕೆರೆ ರಸ್ತೆಯ ರಾಜ್ಯ ಹೆದ್ದಾರಿ ಪೆದಮಲೆಯಲ್ಲಿ ಲಾರಿ ಡಿಕ್ಕಿಯಾಗಿ ಬೈಕ್ ಸವಾರ, ಪಿಲಿಗೂಡು ಮೂಡಬೈಲು ನಿವಾಸಿ ಹೊನ್ನಪ್ಪ ಪೂಜಾರಿ ಯವರ ಮಗನಾದ ಅಶೋಕ್ ಕುಮಾರ್ ರವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಎಪ್ರಿಲ್.30 ರಂದು ಮದುವೆ ನಿಶ್ಚಯವಾಗಿದ್ದ ಅಶೋಕ್‌ರವರು ಮದುವೆ ಕಾಗದ ಹಂಚಲು ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಪೆದಮಲೆ ಬಳಿ ಯಮನಾಗಿ ಬಂದ ಎನ್.ಎಸ್.ರೋಡ್ ಲೈನ್ಸ್ ಲಾರಿಯ ಅತಿಯಾದ ವೇಗದ ರಭಸಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅವರ ತಲೆಗೆ ಬಲವಾದ ಗಾಯವಾಗಿ ಸ್ಥಳದಲ್ಲಿಯೇ ಕೊನೆಯುಸಿರೆಳೆದರು. ಇವರ ಸಾವಿನಿಂದ ಮದುವೆ ಸಂಭ್ರಮದಲ್ಲಿದ್ದ ಎರಡೂ ಮನೆಯ ಕಡೆಯವರೂ ದುಃಖದ ಮಡುವಿನಲ್ಲಿ ಮುಳುಗಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.