HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಕಾಂಗ್ರೆಸ್ 19 ರಲ್ಲಿ 15 ಕ್ಷೇತ್ರಗಳಲ್ಲಿ ಗೆಲುವು ಖಚಿತ : ಐವನ್

 ಬೆಳ್ತಂಗಡಿ: ಕರಾವಳಿ ಕರ್ನಾಟಕದಲ್ಲಿ 19 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 15 ಕ್ಷೇತ್ರ ಗಳಲ್ಲಿ ಗೆಲುವು ಸಾಧಿಸಲಿದೆ. ಕಳೆದ ಬಾರಿ ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿತ್ತು. ಈ ಬಾರಿ ಸುಳ್ಯ ಕ್ಷೇತ್ರವೂ ಕಾಂಗ್ರೆಸ್‌ನ ಪಾಲಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಅವರು ಎ.26 ರಂದು ಬೆಳ್ತಂಗಡಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಜಿಲ್ಲೆ 1710 ಬೂತಿನಲ್ಲಿ ಮೊದಲನೇ ಹಂತದ ಭೇಟಿಯನ್ನು ಪೂರ್ತಿಗೊಳಿಸಿದ್ದು, ಎರಡನೇ ಹಂತದಲ್ಲಿ ಅಭ್ಯರ್ಥಿಯ ಮನವಿಯೊಂದಿಗೆ ಭೇಟಿ ಕಾರ್ಯಕ್ರಮ ಆರಂಭಗೊಂಡಿದೆ. ಎ.27 ರಂದು ಧರ್ಮಸ್ಥಳಕ್ಕೆ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ರಾಜ್ಯಾಧ್ಯಕ್ಷರು, ಡಿ.ಕೆ.ಶಿ ಮೊದಲಾದವರು ಬರಲಿದ್ದಾರೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಕಿಣಿ, ಕೆ.ಪಿ.ಸಿ.ಸಿ ಕಾರ್ಯದರ್ಶಿ ಸವಿತಾ ರಮೆಶ್, ಎ.ಸಿ ಜಯರಾಜ್, ಲೋಕೇಶ್ವರಿ ವಿನಯಚಂದ್ರ, ಅಲೋಸಿಯಸ್ ಲೋಬೋ, ಅಜೇಯ್, ಜೆಸಿಂತಾ ಮೋನಿಸ್, ಅಬ್ದುಲ್ ಕರೀಂ, ಫ್ರಾನ್ಸಿಸ್ ವಿ.ವಿ, ರಾಜಶೇಖರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.