ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಮತ್ತೊಮ್ಮೆ ಅವಕಾಶ ನೀಡಿ: ಬಂಗೇರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 ಓಟಿನ ಮೂಲಕ ಕೂಲಿ ನೀಡಿ
ಕಳೆದ ಐದು ವರ್ಷಗಳಲ್ಲಿ ತಾಲೂಕಿನಲ್ಲಿ 1 ಸಾವಿರಕ್ಕೂ ಮಿಕ್ಕಿ ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಯಾವುದೇ ಭ್ರಷ್ಟಾಚಾರಕ್ಕೂ ಅವಕಾಶ ನೀಡಿಲ್ಲ. ಅಕ್ರಮ-ಸಕ್ರಮದಲ್ಲಿ ಯಾವುದೇ ಜಾತಿ, ಪಕ್ಷ ನೋಡದೆ 35 ಸಾವಿರ ಮಂದಿಗೆ ಮತ್ತು 94ಸಿಯಲ್ಲಿ 21 ಸಾವಿರ ಮಂದಿಗೆ ಹಕ್ಕುಪತ್ರ ನೀಡಿದ್ದೇನೆ.
ತಾಲೂಕಿನ ಜನತೆಗೆ, ಮತದಾರರಿಗೆ ಯಾವುದೇ ಅಗೌರವ ತರುವ ಕೆಲಸ ಮಾಡಿಲ್ಲ, ಸರಕಾರದ ಯೋಜನೆಗಳ ಅನುಷ್ಠಾನದ ಜೊತೆಗೆ ಸಿಕ್ಕಿದ ಅವಕಾಶದಲ್ಲಿ ನಿಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಈಗ ಚುನಾವಣೆಗೆ ನಿಂತಿದ್ದೇನೆ. ಐದು ವರ್ಷಗಳ ಕಾಲ ಮಾಡಿದ ಕೆಲಸಕ್ಕೆ ಈಗ ಕೂಲಿ ಕೇಳುತ್ತಿದ್ದೇನೆ ಮೇ.12 ಕ್ಕೆ ನನಗೆ ಮತದಾನ ನೀಡುವ ಮೂಲಕ ಕೂಲಿ ನೀಡಿ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ವಸಂತ ಬಂಗೇರ ಮತದಾರರಲ್ಲಿ ವಿನಂತಿಸಿಕೊಂಡರು.

ರೋಡ್ ಶೋ: ಬಂಗೇರ ನಾಮಪತ್ರ ಸಲ್ಲಿಕೆ
ಅಂಬೇಡ್ಕರ್ ಭವನದ ಸಮೀಪ ನಡೆದ ಕಾರ್ಯಕರ್ತರ ಸಮಾವೇಶದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ವಸಂತ ಬಂಗೇರ ಬೆಳ್ತಂಗಡಿ ನಗರದ ಮುಖ್ಯ ರಸ್ತೆ ಮೂಲಕ ಮಿನಿ ವಿಧಾನ ಸೌಧ ತನಕ ರೋಡ್ ಶೋ ನಡೆಸಿದರು.
ಈ ಸಂದರ್ಭ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಬಂಗೇರರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಜೈಘೋಷ ಹಾಕಿದರು. ಮಿನಿವಿಧಾನ ಸೌಧಕ್ಕೆ ಆಗಮಿಸಿದ ಬಂಗೇರರು ನಂತರ ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್, ಶ್ರೀಮತಿ ಸುಜಿತಾ ವಿ. ಬಂಗೇರ, ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಶ್ರೀನಿವಾಸ ಕಿಣಿ, ಪ್ರಚಾರ ಸಮಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಉಪಸ್ಥಿತರಿದ್ದರು.

ಬೆಳ್ತಂಗಡಿ: ಬೆಳ್ತಂಗಡಿ ಕ್ಷೇತ್ರದ ಶಾಸಕನಾಗಿ ನೀವು ನನ್ನನ್ನು ಐದು ಬಾರಿ ಆಯ್ಕೆ ಮಾಡಿದ್ದೀರಿ, ನಾನು ಶಕ್ತಿ ಮೀರಿ ತಾಲೂಕಿನ ಅಭಿವೃದ್ಧಿ ಮಾಡಿ, ಯಾವುದೇ ಕಪ್ಪು ಚುಕ್ಕೆ ಇಲ್ಲದೆ ನನ್ನ ತಂದೆ, ತಾಯಿ, ಕ್ಷೇತ್ರದ ಮತದಾರರ, ಕಾರ್ಯಕರ್ತರ ಗೌರವ ಉಳಿಸಿಕೊಂಡಿದ್ದೇನೆ. ಮುಂದೆಯೂ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಅವಕಾಶ ನೀಡಿ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಬ್ಲಾಕ್ ಕಾಂಗ್ರೆಸ್ ಸಮಿತಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಇದರ ವತಿಯಿಂದ ಬೆಳ್ತಂಗಡಿ ವಿಧಾನ ಸಭಾ ಚುನಾವಣೆಗೆ ಮುನ್ನ ಇಲ್ಲಿಯ ಅಂಬೇಡ್ಕರ್ ಭವನದ ಬಳಿ ಎ.20 ರಂದು ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಬೆಳ್ತಂಗಡಿ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಒಂದು ಸಾವಿರ ಕೋಟಿಗೂ ಮಿಕ್ಕಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇನೆ. ವಿಪಕ್ಷದವರು ತೆಂಗಿನಕಾಯಿ ಒಡೆಯುವ ಶಾಸಕ ಎಂದು ಟೀಕೆ ಮಾಡುತ್ತಾರೆ. ಆದರೆ ನಾನು ಕಾಯಿ ಒಡೆದ ಸ್ಥಳದಲ್ಲಿ ರಸ್ತೆ, ಸೇತುವೆ, ಕುಡಿಯುವ ನೀರು, ಆಸ್ಪತ್ರೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿದೆ ಮುಖ್ಯಮಂತ್ರಿ ಬೆಳ್ತಂಗಡಿಗೆ ಬಂದ ವೇಳೆ ನೀಡಿದ ಮಾತಿನಂತೆ ರೂ.100 ಕೋಟಿಯಲ್ಲಿ ರೂ.65 ಕೋಟಿ ಮಂಜೂರಾಗಿ ಬಂದಿದ್ದು, ಚುನಾವಣೆ ಘೋಷಣೆ ಆಗುವ ಮೊದಲು ಇದರ ಶಿಲಾನ್ಯಾಸ ನಡೆಸಿದ್ದೇನೆ. ಕೊನೆಯ ಹಂತದಲ್ಲಿ ಪುನಃ ರೂ.50 ಕೋಟಿ ಮಂಜೂರಾದರೂ ನಂತರ ಚುನಾವಣೆ ಘೋಷಣೆಯಾಯಿತು. ಶಿಲಾನ್ಯಾಸ ಮಾಡಿದ ಎಲ್ಲಾ ಕೆಲಸಗಳು ಆರಂಭಗೊಂಡಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಮುಂದಿನ ಲೋಕಸಭಾ ಚುನಾವಣೆ ಸತ್ಯ-ಅಸತ್ಯ, ಧರ್ಮ-ಅಧರ್ಮ ಮತ್ತು ಅಭಿವೃದ್ಧಿ ಮತ್ತು ಅಪಪ್ರಚಾರದ ನಡುವಿನ ಚುನಾವಣೆಯಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಶಾಸಕ ವಸಂತ ಬಂಗೇರ ರೂ.1 ಸಾವಿರ ಕೋಟಿಯ ಅಭಿವೃದ್ಧಿ ಕೆಲಸ ನಡೆಸಿದ್ದಾರೆ. ರಾಜ್ಯ ಸರಕಾರ ಅನ್ನಭಾಗ್ಯದಿಂದ ಅನಿಲ ಭಾಗ್ಯದವರೆಗೆ ವಿವಿಧ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ ಈ ಸಾಧನೆಗಳನ್ನು ಕಾರ್ಯಕರ್ತರು ಜನರ ಮನೆ, ಮನೆಗಳಿಗೆ ತಲುಪಿಸಿ ಎಂದು ಕರೆ ನೀಡಿದರು. ಕೇಂದ್ರ ಸರಕಾರ ಚುನಾವಣೆ ವೇಳೆ ನೀಡಿದ ಎಲ್ಲಾ ಭರವಸೆಗಳು ಸಂಪೂರ್ಣ ವಿಫಲವಾಗಿದ್ದು, ಜನರು ಭ್ರಮನಿರಸರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಂಗೇರರನ್ನು ೩೫ ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸುವಂತೆ ಕರೆ ನೀಡಿದರು.
ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಮಾತನಾಡಿ ಬಂಗೇರರು ತಾಲೂಕಿನ ಜನರ ಕಷ್ಟ-ಸುಖಗಳಿಗೆ ಸ್ಪಂದಿಸಿದವರು ಐದು ವರ್ಷಗಳ ಕಾಲ ಸತತ ಸೇವೆ ಮಾಡಿದ್ದಾರೆ ಈಗ ಕೂಲಿ ಕೇಳುತ್ತಿದ್ದಾರೆ ತಮ್ಮ ಮತ ನೀಡುವ ಮೂಲಕ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವುದರೊಂದಿಗೆ ಹೊಸ ಚರಿತ್ರೆಯನ್ನು ನಿರ್ಮಾಣ ಮಾಡಬೇಕು ಎಂದರು.
ಕೆಪಿಸಿಸಿ ಕಾರ್ಯದರ್ಶಿ ವೆಂಕಪ್ಪ ಗೌಡ ಅವರು ಮೋದಿಯವರು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೂಡಲೇ ವಿದೇಶದಲ್ಲಿರುವ ಕಪ್ಪು ಹಣ ತಂದು ದೇಶದ ಪ್ರತಿಯೊಬ್ಬರ ಖಾತೆ ರೂ.15 ಲಕ್ಷ ಹಾಕುವುದಾಗಿ ಹೇಳಿದ್ದರು ಆದರೆ ಯಾರ ಖಾತೆಗೂ ಹಣ ಬಿದ್ದಿಲ್ಲ, ಎಲ್ಲರಿಗೂ ಜನಧನ್ ಖಾತೆ ಮಾಡಿಸಿ ಹಣ ಹಾಕುವುದಾಗಿ ತಿಳಿಸಿದರೂ ಯಾರಿಗೂ ಹಣ ಬಂದಿಲ್ಲ, ಜೊತೆಗೆ ಖಾತೆ ತೆರೆಯಲು ಕಟ್ಟಿದ ಹಣವೂ ಹೋಗಿದೆ ಎಂದು ಟೀಕಿಸಿದರು.
ಕೆಪಿಸಿಸಿ ಕಾರ್ಯದರ್ಶಿ ವೆಂಕಟೇಶ್ ಮಾತನಾಡಿ ಅಪ ಪ್ರಚಾರ, ಸುಳ್ಳು ಹೇಳುವವರಿಗೆ, ಹಣ ಕೊಡುವವರಿಗೆ ನಿಮ್ಮ ಮತವನ್ನು ಮಾರಾಟ ಮಾಡಬೇಡಿ, ಅಭಿವೃದ್ಧಿ ಕೆಲಸ ಮಾಡಿದ ಬಂಗೇರರಿಗೆ ನಿಮ್ಮ ಮತ ಹಾಕಿ ಎಂದು ಕರೆ ನೀಡಿದರು. ಮಾಲೆಯಾಳಿ ಎಸೋಸಿಯೇಶನ್ ತಾಲೂಕು ಅಧ್ಯಕ್ಷ ಎ.ಸಿ. ಜಯರಾಜ್ ಬಂಗೇರರ ಗೆಲುವಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು.
ವೇದಿಕೆಯಲ್ಲಿ ಶ್ರೀಮತಿ ಸುಜಿತಾ ವಿ. ಬಂಗೇರ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಶ್ರೀನಿವಾಸ ಕಿಣಿ, ನಗರ ಅಧ್ಯಕ್ಷ ರಾಜಶೇಖರ ಅಜ್ರಿ, ಕೆಪಿಸಿಸಿ ಸದಸ್ಯರಾದ ಪೀತಾಂಬರ ಹೇರಾಜೆ, ರಾಮಚಂದ್ರ ಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಇಚ್ಚಿಲ ಸುಂದರ ಗೌಡ, ನಗರ ಪ್ರಚಾರ ಸಮಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಡಿಸಿಸಿ ಕಾರ್ಯದರ್ಶಿ ಹಾಗೂ ಬಂಟ್ವಾಳ ಕ್ಷೇತ್ರ ಉಸ್ತುವಾರಿ ಜಗದೀಶ್ ಡಿ, ಕಿಸಾನ್ ಘಟಕದ ಅಧ್ಯಕ್ಷ ಪ್ರಮೋದ್ ಕುಮಾರ್ ರೆಖ್ಯ, ಜಿಲ್ಲಾ ಕಾಂಗ್ರೆಸ್‌ನ ಯು.ಎ ಹಮೀದ್, ಮೋಹನ್ ಶೆಟ್ಟಿಗಾರ್, ಬಿ.ಎಂ. ಹಮೀದ್, ಕಾಂಗ್ರೆಸ್ ಅಲ್ಪಸಂಖ್ಯಾತ ಪ್ರಚಾರ ಸಮಿತಿ ಉಪಾಧ್ಯಕ್ಷ ಅಬ್ದುಲ್‌ರಹಿಮಾನ್ ಪಡ್ಪು, ಅಲ್ಪಸಂಖ್ಯಾತ ಘಟಕದ ಅಶ್ರಫ್ ನೆರಿಯ, ಅಯ್ಯಾಬ್, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ. ಸೆಭಾಸ್ಟಿನ್, ಜಿ.ಪಂ. ಸದಸ್ಯರಾದ ಧರಣೇಂದ್ರ ಕುಮಾರ್, ನಮಿತಾ, ಶೇಖರ ಕುಕ್ಕೇಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ್ ಕಾಮತ್, ಇಂಟಕ್ ಅಧ್ಯಕ್ಷ ಸುಭಾಶ್ಚಂದ್ರ ರೈ, ಮಹಿಳಾ ಘಟಕದ ಅಧ್ಯಕ್ಷೆ ಉಷಾ ಶರತ್, ಹಾಜಿರಾ, ಜೆಸಿಂತಾ ಮೋನಿಸ್, ಎ.ಪಿ.ಎಂ.ಸಿ. ಅಧ್ಯಕ್ಷ ಸತೀಶ್ ಕಾಶಿಪಟ್ಣ, ಚುನಾವಣಾ ಉಸ್ತುವಾರಿಗಳಾದ ವಿಜಯಕುಮಾರ್ ರೈ, ಸೈಮನ್, ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಭಿಡೆ, ನಿರಂಜನ ಬಾವಂತಬೆಟ್ಟು, ಮೋಹನ್ ಗೌಡ ಕಲ್ಮಂಜ, ಕೋರಬೆಟ್ಟು ಸುಬ್ಬಯ್ಯ ಶೆಟ್ಟಿ, ರಘುರಾಮ ಶೆಟ್ಟಿ ಸಾಧನಾ, ಶ್ರೀಧರ ಕಳೆಂಜ, ವಸಂತ ಬಿ.ಕೆ, ಉಷಾ ಅಂಚನ್, ಫಾರೂಕ್, ಇದಿನಬ್ಬ, ಲೋಕೇಶ್ವರಿ ವಿನಯಚಂದ್ರ, ಉಮ್ಮರ್‌ಕುಂಞ ಮುಸ್ಲಿಯಾರ್, ಎ.ಸಿ. ಮ್ಯಾಥ್ಯು, ಉಷಾ ಅಂಚನ್, ಜೆ.ಪಿ. ವರ್ಗಿಸ್, ಶ್ರೀಧರ ಕಳೆಂಜ, ಸರ್ವೋತ್ತಮ ಗೌಡ ಮೊದಲಾದವರು ಉಪಸ್ಥಿತರಿದ್ದರು. ಫ್ರಾನ್ಸಿಸ್ ವಿ.ವಿ. ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.