HomePage_Banner_
HomePage_Banner_
HomePage_Banner_

ದಾವೂದ್ ಹಾಜಿ ಬೆಳ್ತಂಗಡಿ ನಿಧನ.

Advt_NewsUnder_1

ಬೆಳ್ತಂಗಡಿ:  ಬೆಳ್ತಂಗಡಿಯ ಹಿರಿಯ ಸಾಮಾಜಿಕ, ಧಾರ್ಮಿಕ ಮುಖಂಡರಾಗಿದ್ದು, ಎನ್‌ಆರ್‌ಐ ಉದ್ಯಮಿಯಾಗಿ ಅನೇಕ ವರ್ಷಗಳ ಕಾಲ ವಿದೇಶದಲ್ಲಿ ಕೆಸಲದಲ್ಲಿದ್ದ ದಾವೂದ್ ಹಾಜಿ ಬೆಳ್ತಂಗಡಿ ಇವರು ಹೃದಯಾಘಾತಕ್ಕೊಳಗಾಗಿ ಎ. 26 ರಂದು (ಇಂದು) ಮಧ್ಯಾಹ್ನ ಮಂಗಳೂರು ಕೆಎಮ್‌ಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಹೃದಯ ಸಂಬಂಧಿ ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಅವರು ಇಂದು ಅಲ್ಲಿ ನಿಧನರಾದರು.
ಬೆಳ್ತಂಗಡಿಯ ಖ್ಯಾತ ಉದ್ಯಮಿಯಾಗಿದ್ದ ದಿ. ಇದ್ದಿನಬ್ಬ ಹಾಜಿ ಅವರ ಸಹೋದರರಾಗಿದ್ದ ಅವರು, ಬೆಳ್ತಂಗಡಿ ಖಿಲ್‌ರ್ ಜುಮ್ಮಾ ಮಸೀದಿ ಇದರ ಮಾಜಿ ಅಧ್ಯಕ್ಷರೂ ಆಗಿದ್ದು ಚಿರಪರಿಚಿತರಾಗಿದ್ದರು. ವಿದೇಶಿ ಅರಬ್ಬಿಗಳು, ದಾನಿಗಳ ಸಂಪರ್ಕದಿಂದ ಅವರ ಮೂಲಕ ನೆರವು ಸಂಗ್ರಹಿಸಿ ಅವರು ತಾಲೂಕಿನ ಅನೇಕ ಕಡೆ ನೂತನ ಮಸೀದಿ, ಮದರಸ, ಹೌಝ್ ನಿರ್ಮಾಣ ಕಾರ್ಯಕ್ಕೆ ನೇತೃತ್ವ ನೀಡಿದ್ದರು. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

 

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.