ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಎಂ.ಇ.ಪಿ ಪಕ್ಷ ಬೆಂಬಲಿಸಿ: ಜಗನ್ನಾಥ ಎಂ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 ಬೆಳ್ತಂಗಡಿ : ಭ್ರಷ್ಟಾಚಾರ ರಹಿತ ಉತ್ತಮ ಆಡಳಿತಕ್ಕಾಗಿ ಆಲ್ ಇಂಡಿಯಾ ಎಂಪವರ್‌ಮೆಂಟ್ ಪಕ್ಷವನ್ನು ಬೆಂಬಲಿಸಿ ಎಂದು ಆ ಪಕ್ಷದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಉದ್ಯಮಿ ಜಗನ್ನಾಥ ಎಂ. ತೋಟತ್ತಾಡಿ ಮನವಿ ಮಾಡಿದರು.
ಅವರು ಎ.26 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಬೆಳ್ತಂಗಡಿ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಅಹಿತಕರ ಘಟನೆಗಳ ವಿರುದ್ಧ ಹೋರಾಟ, ಯುವಕರ ನಿರುದ್ಯೋಗ ನಿವಾರಣೆಗೆ ಮಾಹಿತಿ, ಉದ್ಯೋಗ ಮೇಳ, ಕೃಷಿಕರ ರಬ್ಬರ್ ಬೆಳೆಗೆ ಬೆಂಬಲ ಬೆಲೆ, ಕನ್ನಡ ಶಾಲೆ ಉಳಿಸಲು ಪ್ರಯತ್ನ, ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಶನ್ ಬಗ್ಗೆ ಹೋರಾಟ, ಜಾತಿ ರಾಜಕೀಯ ಅಳಿಸಿ ಜಾತ್ಯಾತೀತ ಸಮಾಜ ನಿರ್ಮಾಣ, ಶಾಲಾ ಮಕ್ಕಳಿಗೆ ಉಚಿತ ಬಸ್‌ಪಾಸ್, ಎಂಡೋಸಲ್ಫಾನ್ ಪೀಡಿತರಿಗೆ ಮಾಸಾಶನ ಮೊದಲಾದ ಉತ್ತಮ ಸೇವೆ ನೀಡಿ ಅವಕಾಶ ಮಾಡಿಕೊಡುವಂತೆ ಅವರು ಮನವಿ ಮಾಡಿದರು.

ದ.ಕ. ಜಿಲ್ಲಾ ಎಂ.ಇ.ಪಿ ಕಾರ್ಯದರ್ಶಿ ಶ್ರೀಮತಿ ಯಶೋಧಾ ಮೂಡಬಿದ್ರೆ ಮಾತನಾಡಿ ಪಕ್ಷದ ಸ್ಥಾಪಕಿ ಡಾ| ನೌಹೀರಾ ಶೇಕ್‌ರವರ ಮಾನವೀಯ ನ್ಯಾಯ ಮತ್ತು ಹೊಸ ಧ್ಯೇಯ ಪರಿಕಲ್ಪನೆ ಉದ್ದೇಶದಿಂದ ರಾಜ್ಯದ 224 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ವಕ್ತಾರ ಆಲಿಸ್ ಬಾಬು, ಸದಸ್ಯ ಸುಕೇಶ್ ಉಪಸ್ಥಿರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.