HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಸ್ವತಂತ್ರ ಅಭ್ಯರ್ಥಿಯಾಗಿ ಬೆಳ್ತಂಗಡಿ ಕ್ಷೇತ್ರದಲ್ಲಿ ಸ್ಪರ್ಧೆ: ವೆಂಕಟೇಶ ಬೆಂಡೆ

 ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕ್ಯಾಮರಾ ಚಿಹ್ನೆಯೊಂದಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಅಭ್ಯರ್ಥಿ ವೆಂಕಟೇಶ ಬೆಂಡೆ ಎ.24 ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕ್ಷೇತ್ರದಲ್ಲಿ ದೂರದರ್ಶಿತ್ವವಿಲ್ಲದ ಆಡಳಿತ ವೈಖರಿಯನ್ನು ಕಂಡು ಬೇಸತ್ತು ಈ ಚುನಾವಣೆಯನ್ನು ಎದುರಿಸುತ್ತಿದ್ದೇನೆ. ನಮ್ಮ ಅಕ್ಕಪಕ್ಕದ ತಾಲೂಕುಗಳಲ್ಲಿ ಕಂಡರೆ ನಮ್ಮಲ್ಲಿ ಓಡಾಟಕ್ಕೆ ಸರಿಯಾದ ಯೋಗ್ಯ ರಸ್ತೆಗಳಿಲ್ಲ. ಈಗಾಗಲೇ ಪಟ್ಟಣ ಪ್ರದೇಶಗಳಾಗಿ ಬೆಳೆಯುತ್ತಿರುವ ಪುಂಜಾಲಕಟ್ಟೆ, ಮಡಂತ್ಯಾರು, ಬೆಳ್ತಂಗಡಿ, ಉಜಿರೆ, ಕಕ್ಕಿಂಜೆ ಪ್ರದೇಶಗಳು ಆಮೆ ಗತಿಯಲ್ಲಿ ಬೆಳೆಯುತ್ತಿವೆ. ಇಲ್ಲಿ ಮೂಲ ಸೌಕರ್ಯ ಕೊರತೆ ಎದ್ದು ಕಾಣುತ್ತಿದೆ. ನೈರ್ಮಲ್ಯ, ಕುಡಿಯುವ ನೀರಿನ ವ್ಯವಸ್ಥೆ, ಸಮರ್ಪಕವಾದ ರಸ್ತೆಗಳು ಇಲ್ಲವಾಗಿದೆ. ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ಕೈಗಾರಿಕೆಗಳು ಇಲ್ಲವೆನ್ನಬಹುದು. ಕೈಗಾರಿಕೆಗಳು ಬರುವುದಕ್ಕೆ ಕೈಗಾರಿಕೋದ್ಯಮಿಗಳನ್ನು ಆಕರ್ಷಿಸುವ ಪೂರಕ ವಾತಾವರಣ ಮೂಡಿ ಬರಬೇಕಿದೆ.
ನೇತ್ರಾವತಿ ತಿರುಗಿಸುವಿಕೆ, ಕಸ್ತೂರಿ ತಂಗನ್ ವರದಿ ಅನುಷ್ಠಾನ, ಹುಲಿ ಯೋಜನೆ, ಆನೆ ಕಾರಿಡಾರ್ ಇತ್ಯಾದಿಗಳನ್ನು ರಾಜಕೀಯ ರಹಿತವಾಗಿ ವಿರೋಧಿಸಿ ನಿಲ್ಲಿಸಬೇಕಿದೆ. ಆಡಳಿತ ವ್ಯವಸ್ಥೆಯ ಕಛೇರಿಗಳಲ್ಲಿ ಆಗುವ ಲಂಚ, ಭ್ರಷ್ಠಾಚಾರ ನಿರ್ಮೂಲನೆ ಕ್ರಮ ಕೈಗೊಳ್ಳಬೇಕಿದೆ.
ಇನ್ನು ನನ್ನ ಚುನಾವಣಾ ಪ್ರಣಾಳಿಕೆ 27 ಅಂಶಗಳಿಂದ ಕೂಡಿದೆ. ಕ್ಷೇತ್ರ ಸಮಾನವಾದ ಸೌಲಭ್ಯ ಪಡೆಯುವಲ್ಲಿ ಎಲ್ಲರೂ ಸಮಾನರು. ಬಡವ, ಬಲ್ಲಿದ, ಶ್ರೀಮಂತ, ಆಜಾತಿ, ಈಜಾತಿ ಎನ್ನುವ ತಾರತಮ್ಯವಿಲ್ಲದೆ ನೋಡಿಕೊಳ್ಳುವ ಹೊಣೆ ನನ್ನ ಗುರಿ ಎಂದು ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಸಂಜೀವಿ ಪ್ರಭು, ರೂಪಲತಾ ಬೆಂಡೆ ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.