ವಿಮುಕ್ತಿ : ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ.

 ಬೆಳ್ತಂಗಡಿ : ಆಸಿಫಾ ಸೇರಿದಂತೆ ಅಪ್ರಾಪ್ತ ಬಾಲಕಿಯರ ಮೇಲೆ ನಡೆದಂತಹ ಅತ್ಯಾಚಾರ, ಕೊಲೆ ಖಂಡಿಸಿ ಇಂತಹ ಘಟನೆಗಳು ಸಮಾಜದಲ್ಲಿ ಮರುಕಳಿಸದಂತೆ ಹಾಗೂ ಜನರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಎ.24 ರಂದು ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ವಿಮುಕ್ತಿ ಸಂಸ್ಥೆಯಿಂದ ಶಾಂತಿಯುತ ಪ್ರತಿಭಟನೆ ನಡೆಯಿತು.
ವಿಮುಕ್ತಿ ಸಂಸ್ಥೆಯ ನಿರ್ದೇಶಕ ಪಾ| ವಿನೋದ್ ಮಸ್ಕರೇನಸ್ ಕಪ್ಪು ಬಟ್ಟೆ ಬಿಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಇನ್ನು ನಮ್ಮ ದೇಶದಲ್ಲಿ 1.33 ಲಕ್ಷಕ್ಕೂ ಹೆಚ್ಚು ಅತ್ಯಾಚಾರ ಕೊಲೆ ಪ್ರಕರಣಗಳು ಬಾಕಿ ಇದೆ ಇದನ್ನು ನೋಡಿದಾಗ ಆತಂಕ ಹುಟ್ಟಿಸುತ್ತದೆ, ನಾವೆಲ್ಲರೂ ಕೈ ಜೋಡಿಸಿ ಅತ್ಯಾಚಾರ, ಕೊಲೆ ಇವುಗಳನ್ನು ಖಂಡಿಸಿದಾಗ ಮಾತ್ರ ಮುಕ್ತಿ ಸಿಗಲು ಸಾಧ್ಯ ಎಂದರು.
ಅತ್ಯಾಚಾರ ಕೊಲೆ ಪ್ರಕರಣಕ್ಕೆ ವಿರುದ್ಧವಾಗಿ ಅನೇಕ ಘೋಷಣೆಗಳನ್ನು ಕೂಗಿ ಎಲ್ಲಾ ಹೆಣ್ಣು ಮಕ್ಕಳನ್ನು ಗೌರವದಿಂದ ನೋಡುವುದಾಗಿ ಪ್ರಮಾಣ ವಿಧಿ ಬೋದಿಸಲಾಯಿತು. ಪ್ರತಿಭಟನೆಯಲ್ಲಿ ಹಲವಾರು ಸಂಘ ಸಂಸ್ಥೆಗಳ ಮಹಿಳೆಯರು, ವಿಮುಕ್ತಿ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.