ಮೇ.1 ರೂ.3 ಕೋಟಿ ವೆಚ್ಚದ ಅನುಗ್ರಹ ಸಭಾಭವನ ಲೋಕಾರ್ಪಣೆ.

Advt_NewsUnder_1
Advt_NewsUnder_1
Advt_NewsUnder_1

 ಉಜಿರೆ : ತಾಲೂಕಿನಲ್ಲಿಯೇ ಪ್ರಥಮ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಅನುಗ್ರಹ ಶಿಕ್ಷಣ ಸಂಸ್ಥೆಯು ಸಾರ್ವಜನಿಕ ಹಾಗೂ ವಿದ್ಯಾರ್ಥಿಗಳ ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲು ಸ್ಥಳಾವಕಾಶದ ಸಮಸ್ಯೆ ಇದ್ದು, ಇದನ್ನು ಮನಗಂಡು ಚರ್ಚ್ ಆಡಳಿತ ಮಂಡಳಿ ಹಾಗೂ ಸಮಸ್ತ ಉಜಿರೆ ಕ್ರೈಸ್ತ ಭಾಂದವರು, ಶಾಲಾ ವಿದ್ಯಾರ್ಥಿ, ಪೋಷಕರ ಹಾಗೂ ಸರಕಾರದ ಅನುದಾನದಿಂದ ಸುಮಾರು 3 ಕೋಟಿಗೂ ಮಿಕ್ಕಿದ ವೆಚ್ಚದಿಂದ ನಿರ್ಮಿಸಲಾದ ವಿಶಾಲವಾದ ಸುಸಜ್ಜಿತವಾದ ಅನುಗ್ರಹ ಸಭಾಭವನ ಮೇ.1 ರಂದು ಲೋಕಾರ್ಪಣೆಗೊಳ್ಳಲಿದೆ.
ಶಾಸಕ ವಸಂತ ಬಂಗೇರ ಇದರ ಉದ್ಘಾಟನೆಯನ್ನು ನೆರವೇರಿಸುವರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ| ಅಲೋಸಿಯಸ್ ಪೌಲ್ ಡಿಸೋಜ, ಸಂತ ಅಂತೋನಿ ಚರ್ಚ್‌ನ 50 ರ ಸಂಭ್ರಮದ ಉದ್ಘಾಟನೆ, ಕೃತಜ್ಞಾತಾ ದಿವ್ಯ ಬಲಿ ಪೂಜೆ ಅರ್ಪಿಸಿ, ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಮಂಗಳೂರಿನ ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆ| ವೇನ್ಸಿಂಜೋರ್ ಡೆನ್ನಿಸ್ ಮೋರಾಸ್ ಪ್ರಭು, ಮಂಗಳೂರಿನ ಶಾಸಕ ಜೆ.ಆರ್ ಲೋಬೊ, ಸಚೇತಕ ಐವನ್ ಡಿಸೋಜಾ, ಬೆಳ್ತಂಗಡಿಯ ವಿಕಾರ್ ವಂ.ಫಾ| ಬೊನ್‌ವೆಂಚರ್ ನಜಿತ್, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ಜಿ.ಪಂ ಸದಸ್ಯ ನಮಿತಾ, ತಾ.ಪಂ ಸದಸ್ಯೆ ಶಶಿಧರ್, ಉಜಿರೆ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ ಮೊದಲಾದ ಗಣ್ಯರು ಭಾಗವಹಿಸುವರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.