HomePage_Banner_
HomePage_Banner_

ಹರೀಶ್ ಪೂಂಜ ನಾಮಪತ್ರ ಸಲ್ಲಿಕೆ.

 ಬೆಳ್ತಂಗಡಿ: ವಿಧಾನ ಸಭಾ ಕ್ಷೇತ್ರದ ಬಾ.ಜ.ಪ ಅಭ್ಯರ್ಥಿ ಹರೀಶ್ ಪೂಂಜ ರವರು ಇಂದು ಬೆಳಿಗ್ಗೆ ಬೆಳ್ತಂಗಡಿ ಕುತ್ಯಾರು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಅಲ್ಲಿಂದ  ಅಪಾರ ಜನಸಾಗರದೊಂದಿಗೆ ಮೆರವಣಿಗೆಯಲ್ಲಿ ಹೊರಟು ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಮಾಜಿ ಶಾಸಕ ಪ್ರಭಾಕರ ಬಂಗೇರ, ತಾಲೂಕು ಪ್ರಮುಖ್ ಕುಶಾಲಪ್ಪ ಗೌಡ, ಜಿಲ್ಲಾ ಪ್ರಭಾರಿ ಪ್ರತಾಪ್ ಸಿಂಹ ನಾಯಕ್, ಧರ್ಮಸ್ಥಳ ಜಿ.ಪಂ ಸದಸ್ಯ ಕೊರಗಪ್ಪ ನಾಕ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸೀತಾರಾಮ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಸಾದ್, ಬಿಜೆಪಿ ತಾಲೂಕು ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಭಾಕರ್ ಶೆಟ್ಟಿ ಉಪ್ಪಡ್ಕ, ಲಾಲ ಜಿ.ಪಂ. ಸದಸ್ಯರಾದ ಸೌಮ್ಯಲತಾ ಜಯಂತ್ ಗೌಡ, ನಗರ ಶಕ್ತಿ ಕೇಂದ್ರದ ಶಂಕರ್ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷರಾದ ಶಾರದಾ ಆರ್. ರೈ, ಬೆಳ್ತಂಗಡಿ ಉದ್ಯಮಿ ವಿಠಲ್ ಭಟ್, ಶಂಕರ ಶೆಟ್ಟಿ ಗರ್ಡಾಡಿ, ಗಣೇಶ್ ನ್ಯಾಯವಾದಿ, ಮಹಾಬಲ ಗೌಡ, ಹರೀಶ್ ಸಾಲಿಯಾನ್ ನಾವೂರು, ರತ್ನಾಕರ ಪೂಜಾರಿ ಬಲ್ಪುಂಜ, ಕೃಷ್ಣಪ್ಪ ಗುಡಿಗಾರ್, ರತ್ನಾಕರ ಬುಣ್ಣಾನ್, ರಾಮ್‌ಪ್ರಸಾದ್ ಮರೋಡಿ ವೇಣೂರು, ಭಜರಂಗದಳ ಸಂಚಾಲಕ ನಾರಾವಿ ಪಂಚಾಯತ್ ಮಾಜಿ ಅಧ್ಯಕ್ಷ ಡಾಕಯ್ಯ ಪೂಜಾರಿ, ಮಹಾಬಲ ಶೆಟ್ಟಿ ಲಾಲ, ಮುತ್ತಣ್ಣ ಪೂಂಜ, ನಳಿನ್ ಪೂಂಜ, ಮೊದಲಾದವರು ಉಪಸ್ಥಿತರಿದ್ದರು ಹಾಗೂ ಕಾರ್ಯಕರ್ತರು, ಅಭಿಮಾನಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.