HomePage_Banner_
HomePage_Banner_
HomePage_Banner_

ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ಪ್ರತಿಭಟನೆ.

Advt_NewsUnder_1

ಬೆಳ್ತಂಗಡಿ: ಎಸ್.ಕೆ.ಎಸ್.ಎಸ್.ಎಫ್ ಬೆಳ್ತಂಗಡಿ ವತಿಯಿಂದ ಜಮ್ಮುವಿನನಲ್ಲಿ ಅತ್ಯಾಚಾರಕ್ಕೆ ಒಳಗಾದ ಆಸಿಫಾಳ ನ್ಯಾಯಕ್ಕಾಗಿ ಮತ್ತು ದೇಶದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತ ,ದಲಿತ ಧೌರ್ಜನ್ಯಗಳ ವಿರುಧ್ಧ ಬೆಳ್ತಂಗಡಿಯ ಡಿಸಿಸಿ ಬ್ಯಾಂಕ್ ಸಮೀಪ ಎ.20 ರಂದು ಪ್ರತಿಭಟನೆ ನಡೆಯಿತು.

ಕಕ್ಕಿಂಜೆ ಜುಮಾ ಮಸೀದಿ ಖತೀಬ್ ಮೂಸ ದಾರಿಮಿ ಉದ್ಘಾಟಿಸಿ ವಿವಿಧ ಜಾತಿ ಧರ್ಮಗಳ ಸುಂದರ ದೇಶದಲ್ಲಿ ಇಂತಹ ಕ್ರತ್ಯಗಳು ಖಂಡನೀಯ ಎಂದರು  . ಎಸ್ ಕೆ ಎಸ್ ಎಸ್ ಎಫ್ ಕೇಂದ್ರ ಸಮಿತಿ ಸದಸ್ಯರಾದ ಇಶಾಕ್ ಫೈಝಿ ಮುಖ್ಯ ಭಾಷಣ ಮಾಡುತ್ತಾ  ಕೋಮುವಾದವೂ ದೇಶದ ಅಖಂಡತೆಗೆ ಮತ್ತು ಅಭಿವ್ರಧ್ಧಿಗೆ ಮಾರಕ ಪರಸ್ಪರ ಐಕ್ಯತೆ ಮತ್ತು ವಿಶ್ವಾಸದೊಂದಿಗೆ ಎಲ್ಲಾ ಧರ್ಮಿಯರು ಮುನ್ನಡೆದರೆ ಮಾತ್ರ ಭಾರತ ಅಭಿವ್ರಧ್ಧಿ ಸಾಧ್ಯ ಎಂದರು.

ವಲಯ ಅಧ್ಯಕ್ಷ ನಝೀರ್ ಅಝ್ಹರಿ ಬೊಳ್ಮಿನಾರ್ ಅಧ್ಯಕ್ಷತೆ ವಹಿಸಿದ್ದು, ಬೆಳ್ತಂಗಡಿ ಖತೀಬ್ ಹನೀಫ್ ದಾರಿಮಿ, ಬೆಳ್ತಂಗಡಿ ದಲಿತ ನಾಯಕ ಶೇಕರ್ ಲಾಯಿಲ,  ಡಿಐಸಿ ಪ್ರೊಪೆಸರ್ ಇಸ್ಹಾಖ್ ಕೌಸರಿ , ನ್ಯಾಯವಾದಿ ನವಾಝ್ ಕಕ್ಕಿಂಜೆ, ರಝಾಕ್ ಕನ್ನಡಿ ಕಟ್ಟೆ , ಶರೀಫ್ ಎಚ್ ಏ, ಇಲ್ಲ್ಯಾಸ್ ಕಕ್ಕಿಂಜೆ , ಹನೀಫ್ ದೂಮಲಿಕೆ, ಬಶೀರ್ ವಗ್ಗ , ಹನೀಫ್ ಮಜಲು , ಶರೀಫ್ ದೂಮಲಿಕೆ, ಹಕೀಂ ಬಂಗೇರ ಕಟ್ಟೆ , ಸಾದಿಕ್ ಕನ್ನಡಿಕಟ್ಟೆ , ಬೆಳ್ತಂಗಡಿ ಮುಸ್ಲಿಂ ಐಕ್ಯತ ವೇದಿಕೆ ಅದ್ಯಕ್ಷ ಸಲೀಂ ಗುರುವಾಯನಕೆರೆ , ರಝಾಕ್ ಮುಸ್ಲಿಯಾರ್ , ಮುಪತೀಶ್ ಹಮೀದ್ ದಾರಿಮಿ , ಅಶ್ರಫ್ ಫೈಝಿ ಪೂಂಜಾಲಕಟ್ಟೆ , ಅಬ್ದುಲ್ಲ ಪೂಂಜಾಲಕಟ್ಟೆ ,ಹಮೀದ್ ದಾರಿಮಿ ಅಳಕೆ, ಅಬ್ಬಾಸ್ ಫೈಝಿ ಕಾಜೂರು, ಡಿಐಸಿ ಹುದವಿ ಬೆಳ್ತಂಗಡಿ, ಹೈದರ್ ಬಿಕೆ, ಮುಹಮ್ಮದ್ ಕುದ್ರಡ್ಕ, ಶಂಸುದ್ದೀನ್ ದಾರಿಮಿ, ವಲಯ ಕಾರ್ಯದರ್ಶಿ ಸಿರಾಜ್ ಚಿಲಿಂಬಿ, ವರ್ಕಿಂಗ್ ಕಾರ್ಯಾದರ್ಶಿ ರಿಯಾಝ್ ಫೈಝಿ , ಶರೀಫ್ ಕಕ್ಕಿಂಜೆ  ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಲಯ ನೇತಾರರಿಂದ ಬೆಳ್ತಂಗಡಿ ತಹಶೀಲ್ದಾರರ ಮುಖಾಂತರ ಪ್ರಧಾನ ಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.