HomePage_Banner_
HomePage_Banner_
HomePage_Banner_

ಕಾಂಗ್ರೆಸ್ ಅಭ್ಯರ್ಥಿ ವಸಂತ ಬಂಗೇರ ಆಸ್ತಿ 9.15 ಕೋಟಿ ರೂ.

 ಬೆಳ್ತಂಗಡಿ: ಕಾಂಗ್ರೆಸ್ ಅಭ್ಯರ್ಥಿ ಕೆ. ವಸಂತ ಬಂಗೇರ ಅವರು ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಆಯೋಗಕ್ಕೆ ಆಸ್ತಿಗಳ ವಿವರವನ್ನು ಸಲ್ಲಿಸಿದ್ದಾರೆ.
ಕೆ. ವಸಂತ ಬಂಗೇರ ಹಾಗೂ ಅವರ ಪತ್ನಿ ಸಜಿತಾ ಬಂಗೇರ ಅವರ ಹೆಸರಿನಲ್ಲಿ ನಗದು, ಪಾಲಿಸಿ, ವಾಹನಗಳು, ಚಿನ್ನಾಭರಣ, ಕೃಷಿ ಹಾಗೂ ಕೃಷಿಯೇತರ ಭೂಮಿ ಸೇರಿದಂತೆ ಒಟ್ಟು 9 ಕೋಟಿ, 15 ಲಕ್ಷ ಮೌಲ್ಯದ ನಗದು ಆಸ್ತಿ, ನಗದು, ಸೊತ್ತುಗಳಿವೆ.
ವಸಂತ ಬಂಗೇರ ರವರಲ್ಲಿ ಬ್ಯಾಂಕ್ ಠೇವಣಿ, ಪಾಲಿಸಿಗಳು, ಒಂದು ಇನೋವಾ, ಒಂದು ಆಲ್ಟೋ ಕಾರು, ಚಿನ್ನಾಭರಣ, ಒಂದು ವೈನ್ ಸ್ಟೋರ್ ಸೇರಿ 91,98,143 ರೂ, ಸ್ಥಿರಾಸ್ತಿಗಳಲ್ಲಿ ಕೃಷಿ ಭೂಮಿ 12 ಲಕ್ಷ ರೂ. ಮೌಲ್ಯದ್ದು, ಕೃಷಿಯೇತರ ಭೂಮಿ 5 ಕೋಟಿ, 79 ಲಕ್ಷ ಇದ್ದು ಒಟ್ಟು ಬಂಗೇರರಲ್ಲಿ 6,83,28,143 ಮೌಲ್ಯದ ಆಸ್ತಿ, ನಗದು, ಸೊತ್ತುಗಳಿವೆ. ಪತ್ನಿಯ ಹೆಸರಿನಲ್ಲಿ 2,32,00,102 ಮೌಲ್ಯದ ಆಸ್ತಿ, ನಗದು, ಸೊತ್ತುಗಳಿವೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.