ಮುಂಡಾಜೆ ಪರಶುರಾಮ ದೇವಸ್ಥಾನದಲ್ಲಿ ಧಾರ್ಮಿಕ ಸಭೆ.

ಬೆಳ್ತಂಗಡಿ: “ಯಾರಿಗೂ ಅನ್ಯಾಯ ಮಾಡಬೇಡ, ಯಾರ ಸೊತ್ತನ್ನೂ ಅಪಹರಿಸಬೇಡ ಎಂಬ ಪರಶುರಾಮನ ಉದಾತ್ತ ಚಿಂತನೆಯೊಂದಿಗೆ ನಾವು ಬಾಳಬೇಕು. ಅದಕ್ಕಾಗಿ ಇಲ್ಲಿನ ದೇವಾಲಯ ಪ್ರೇರಣೆ ನೀಡಲಿದೆ” ಎಂದು ಅಗ್ನಿಮಾನ್ ವೇದಮೂರ್ತಿ ತಲಾರೆ  ವಾಮನ ಭಟ್  ಮುಂಡಾಜೆಯಲ್ಲಿ ನವೀಕರಣಗೊಂಡ  ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಪುನಃಪ್ರತಿಷ್ಠಾಷ್ಠಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಎ.20 ರಂದು  ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮೇ|ಜ| ಎಂ.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವೇ|ಮೂ| ಉದಯಕುಮಾರ್ ಅಡಿಗ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್.ಎಸ್.ಗೋಖಲೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ವೈದಿಕ ವಿಧಾನಗಳನ್ನು ನೆರವೇರಿಸಿದ ತಲಾರೆ ವೇ|ಮೂ|ವಾಮನ ಭಟ್ ಅವರನ್ನು ಸನ್ಮಾನಿಸಲಾತು.
ದೇವಸ್ಥಾನದ  ಆಡಳಿತ ಮೊಕ್ತೇಸರ ವೆಂಕಟ್ರಾಯ ಅಡೂರು, ವೇದಿಕೆ ಸಮಿತಿ ಸಂಯೋಜಕ ನಾರಾಯಣ ಫಡ್ಕೆ,  ಶಂಕರ ತಾಮ್ಹಣ್ಕರ್ ಮೊದಲಾದವರು ವೇದಿಕೆಯಲ್ಲಿ  ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.