ಹಿಂದೂ ಧರ್ಮ ಕೊಟ್ಟು ಕೊಡುವ ಧರ್ಮ : ವಿಷ್ಣುಭಟ್ ಡೊಂಗ್ರೆ

 ಮುಂಡಾಜೆ : ಗುಜರಾತಿನಿಂದ ಕನ್ಯಾಕುಮಾರಿವರೆಗೆ ಎಲ್ಲಾ ವರ್ಗದವರಿಗೆ ಜಾಗವನ್ನು ದಾನ ಮಾಡಿದವ ಶ್ರೀ ಪರಶುರಾಮ, ಆತ ಎಲ್ಲರ ಗುರುವು ಹೌದು. ಸಹಕಾರ ಬೀಜ ಬಿತ್ತಿದವನೇ ಶ್ರೀ ಪರಶುರಾಮ. ಹಿಂದು ಧರ್ಮವು ಕೊಟ್ಟು ಕೊಟಡುವ ಧರ್ಮವಾಗಿದೆ. ಎಂದು ಶ್ರೀ ಪರಶುರಾಮ ಜಯಂತಿ ಪ್ರಯುಕ್ತ ಎ.18 ರಂದು ನಡೆದ ಶ್ರೀ ಪರುಶುರಾಮ ದೇವರ ಪುನಃ ಪ್ರತಿಷ್ಠಾಷ್ಠಬಂಧ ಬ್ರಹ್ಮಕಲಶೋತ್ಸವದಲ್ಲಿ ಬೆಂಗಳೂರಿನ ವಿಷ್ಣು ಭಟ್ ಡೊಂಗ್ರೆ ಧಾರ್ಮಿಕ ಉಪನ್ಯಾಸದಲ್ಲಿ ಮಾತನಾಡಿದರು.
ಅಧ್ಯಕ್ಷತೆಯನ್ನು ಜಿರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್.ಎಸ್ ಗೋಖಲೆ ವಹಿಸಿ, ಜೀರ್ಣೋದ್ಧಾರದಲ್ಲಿ ಊರಪರವೂರ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಜಗದೀಶ ಆರ್ ಫಡಕೆ, ತಾ.ಪಂ ಸದಸ್ಯೆ ಲಿಲಾವತಿ ನಾಯ್ಕ, ಮುಂಡಾಜೆ ಗ್ರಾ.ಪಂ ಅಧ್ಯಕ್ಷೆ ಶಾಲಿನಿ ಉಪಸ್ಥಿತರಿದ್ದರು. ಮುಂಡಾಜೆ ಸಿ.ಎ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡಕೆ ಸ್ವಾಗತಿಸಿದರು. ಶ್ರೀಕರಭಟ್ ವಿಷ್ಣುಭಟ್ ಡೊಂಗ್ರೆಯವರ ಪರಿಚಯಿಸಿದರು. ಸ್ಥಳೀಯ ಮಕ್ಕಳು ಪ್ರಾರ್ಥಿಸಿದರು. ನಾಮದೇವ ರಾವ್ ಮತ್ತು ಉಪನ್ಯಾಸಕ ಪುರುಪೋತ್ತಮ ಶೆಟ್ಟಿ ನಿರೂಪಿಸಿ, ಬಾಬು ಪೂಜಾರಿ ಕೂಳೂರು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.