ಮಿತ್ತಬಾಗಿಲು: ದೇವರು ಸರ್ವವ್ಯಾಪಿ ಹಿರಿಯರು ಹಾಕಿ ಕೊಟ್ಟಿರುವ ದೇವಸ್ಥಾನ, ನಾಗಬನಗಳು, ಪಕೃತಿಯಲ್ಲಿರುವ ಎಲ್ಲಾ ವಸ್ತುಗಳನ್ನು ನಾವು ಪೂಜಿಸುತ್ತೇವೆ. ಇವೆಲ್ಲವೂ ಧರ್ಮದ ಆಚಾರ ವಿಚಾರಗಳಿಗೆ ಸಂಬಂಧಿಸಿದವು ಎಂದು ವೇದ ಮೂರ್ತಿ ಪಾವಂಜೆ ವಾಗೀಶ ಶಾಸ್ತ್ರಿಯವರು ಎ.19 ರಂದು ಕೂಡಬೆಟ್ಟು ಶ್ರೀ ಸದಾಶಿವ ದೇವಸ್ಥಾನದಲ್ಲಿ ಅಶ್ವತ್ಥ ವೃಕ್ಷ,ಉದ್ಯಾಪನ-ಉಪನಯನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ದೇವಸ್ಥಾನದ ಸೇವಾ ಸಮತಿ ಗೌರವಾಧ್ಯಕ್ಷ ಬಿ.ಕೆ.ಸುಬ್ಬರಾವ್ ಉಪಸ್ಥಿತರಿದ್ದರು. ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಬಿ.ಕೆ.ಧನಂಜಯ ರಾವ್ ಸ್ವಾಗತಿಸಿ, ನಿರೂಪಿಸಿದರು. ಸೇವಾ ಸಮಿತಿಯ ಅಧ್ಯಕ್ಷ ಕೆ.ವಾಸುದೇವರಾವ್, ವ್ಯವಸ್ಥಾಪನಾ ಸಮಿತಿಯ ಎಲ್ಲಾಸದಸ್ಯರು, ಅರ್ಚಕರು ಉಪಸ್ಥಿರಿದ್ದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.