ವೇಣೂರು: ಧಾರ್ಮಿಕ-ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ .

Advt_NewsUnder_1
Advt_NewsUnder_1
Advt_NewsUnder_1

 ಧಾರ್ಮಿಕ ಶಿಬಿರಗಳು ಬದುಕಿನ ಪಾಠ ಕಲಿಸುತ್ತದೆ: ಮೂಡಬಿದಿರೆ ಶ್ರೀ

 ವೇಣೂರು: ಐಕ್ಯತೆ, ಪರಸ್ಪರ ಗೌರವ, ಶಿಸ್ತು, ಸಮಯ ಪರಿಪಾಲನೆ ಮುಂತಾದ ವಿಚಾರಗಳನ್ನು ತಿಳಿದುಕೊಳ್ಳಲು ಧಾರ್ಮಿಕ ಶಿಬಿರಗಳು ಸಹಕಾರಿ. ಪುಸ್ತಕದ ಪಾಠ ಜ್ಞಾನವನ್ನು ವೃದ್ಧಿಸಿದರೆ ಧಾರ್ಮಿಕ ಶಿಬಿರಗಳು ಬದುಕಿನ ಪಾಠ ಕಲಿಸುತ್ತದೆ ಎಂದು ಮೂಡಬಿದಿರೆ ಜೈನಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ನುಡಿದರು.
ವೇಣೂರು ಶ್ರೀ ಬಾಹುಬಲಿ ಯುವಜನ ಸಂಘ ಹಾಗೂ ಶ್ರೀ ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿ ಸಹಯೋಗದಲ್ಲಿ ಎ.11 ರಂದು ಶ್ರೀ ಬಾಹುಬಲಿ ಸಭಾಭವನದಲ್ಲಿ ಜರಗಿದ 18 ನೇ ವರ್ಷದ ಜೈನ ಬಾಲಕ-ಬಾಲಕಿಯರ ಧಾರ್ಮಿಕ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದರು. ಇದಕ್ಕೂ ಮೊದಲು ಸ್ವಾಮೀಜಿಯವರು 25 ವಟುಗಳಿಗೆ ಸಾಮೂಹಿಕ ವೃತೋಪದೇಶವನ್ನು ನೀಡಿ, ಧರ್ಮೊಪದೇಶ ಬೋಧಿಸಿದರು.
ಪುತ್ತೂರು ಜೈನ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಜಯರಾಜ ಹೆಗ್ಡೆ ಪುತ್ತಿಲ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವೇಣೂರು ಯುವಜನ ಸಂಘವು ಕಳೆದ 18 ವರ್ಷಗಳಿಂದ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿ ಅಚ್ಚುಕಟ್ಟಾಗಿ ಧಾರ್ಮಿಕ ಶಿಬಿರವನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿದ್ದಕಟ್ಟೆ ಶ್ರೀ ಅನಂತಪದ್ಮಾ ಹೆಲ್ತ್ ಸೆಂಟರ್‌ನ ಡಾ| ಸುದೀಪ್ ಮಾತನಾಡಿ, ಜೈನಧರ್ಮದ ತತ್ವಾರ್ಥಗಳು, ಧ್ಯಾನ, ಸ್ವಾಧ್ಯಾಯ, ತಪ ಮುಂತಾದ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾನವ ಬದುಕು ಶ್ರೇಷ್ಠ ಆಗುತ್ತದೆ. ಅಂತಹ ಶ್ರೇಷ್ಠತೆಯ ವಿಚಾರಗಳನ್ನು ಯುವಜನಾಂಗಕ್ಕೆ ತಿಳಿಸುವ ಮಾಧ್ಯಮಗಳೇ ಇಂತಹ ಧಾರ್ಮಿಕ-ವ್ಯಕ್ತಿತ್ವ ವಿಕಸನ ಶಿಬಿರಗಳು ಎಂದರು.
ಸಂಪನ್ಮೂಲ ವ್ಯಕ್ತಿಗಳ ಪರವಾಗಿ ಮಹಾವೀರ ಜೈನ್ ಇಚ್ಲಂಪಾಡಿ, ಶಿಬಿರಾರ್ಥಿಗಳ ಪರವಾಗಿ ಪೂರ್ಣಿಮಾ ಹಾಗೂ ಸಮ್ಯಕ್ತ್ ಅನಿಸಿಕೆ ವ್ಯಕ್ತಪಡಿಸಿದರು.
ಶಿಬಿರಾಧಿಕಾರಿಗಳನ್ನು ಹಾಗೂ ಶಿಬಿರಕ್ಕೆ ಸಹಕಾರ ನೀಡಿದವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ವೇಣೂರು ಶ್ರೀ ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿ ಕಾರ್ಯದರ್ಶಿ ಯಂ. ವಿಜಯರಾಜ ಅಧಿಕಾರಿ, ಶ್ರೀ ಬಾಹುಬಲಿ ಯುವಜನ ಸಂಘದ ಅಧ್ಯಕ್ಷ ಶರ್ಮಿತ್ ಕುಮಾರ್, ಕಾರ್ಯದರ್ಶಿ ಅನಿತ್ ಕುಮಾರ್, ವೇಣೂರು ಜೈನ್ ಮಿಲನ್ ಅಧ್ಯಕ್ಷ ಪ್ರಮೋದ್ ಕುಮಾರ್, ಶಿಬಿರದ ನಿರ್ವಾಹಕ ಜ್ಞಾನಚಂದ್ರ ಮೂಡಬಿದಿರೆ ಉಪಸ್ಥಿತರಿದ್ದರು.
ಶ್ರೀ ಬಾಹುಬಲಿ ಯುವಜನ ಸಂಘದ ಸಂಘಟನಾ ಕಾರ್ಯದರ್ಶಿ ಸುಧೀರ್ ಕುಮಾರ್ ಪ್ರಾಸ್ತಾವಿಸಿ, ಸ್ವಾಗತಿಸಿದರು. ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರ್ವಹಿಸಿ, ಪ್ರಶಾಂತ್ ಕುಮಾರ್ ಕರಿಮಣೇಲುಗುತ್ತು ವಂದಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮುನಿರಾಜ ರೇಂಜಾಳ, ಯೋಗರಾಜ ಶಾಸ್ತ್ರಿ, ನವೀನ್ ಕುಮಾರ್ ಕಾರ್ಕಳ, ಉದಯ ಕುಮಾರ್ ಬಂಟ್ವಾಳ, ಮಂಜುಳಾ ಮೂಡಬಿದಿರೆ, ಅಜಿತ್ ಕುಮಾರ್ ಜೈನ್ ಕೊಕ್ರಾಡಿ, ನಿರಂಜನ್ ಎ. ಅಳಿಯೂರು, ಶಾಂತಿರಾಜ್ ಜೈನ್ ಪಡಂಗಡಿ ಮೊದಲಾದವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.