ಸೇವಾಭಾರತಿ ವಾರ್ಷಿಕೋತ್ಸವ: ಮಕ್ಕಳಿಗೆ ಬೇಸಿಗೆ ಶಿಬಿರ ಉದ್ಘಾಟನೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 ಮಕ್ಕಳು ಸಂಸ್ಕಾರದ ಜತೆಗೆ ಜೀವನ ಮೌಲ್ಯ ಅಳವಡಿಸಿಕೊಳ್ಳಬೇಕು : ಪುಂಡರೀಕಾಕ್ಷ ಬೆಳ್ಳೂರು

ಉಜಿರೆ: ಯಾರೂ ಜೀವನದಲ್ಲಿ ಕಂಪ್ಲೇಂಟ್ ಮಾಡುವುದಿಲ್ಲವೋ ಅವನು ಬದುಕಿನಲ್ಲಿ ಯಶಸ್ವಿಯಾಗುತ್ತಾನೆ. ನಾವು ನಮಗೋಸ್ಕರ ಬದುಕುವುದಲ್ಲ. ಬೇರೆಯವರಿಗೋಸ್ಕರ, ಸಮಾಜಕ್ಕೋಸ್ಕರ ಬದುಕಬೇಕು. ನಾವು ಒಳ್ಳೆಯವರಾಗಿ ಇನ್ನೊಬ್ಬರನ್ನು ಒಳ್ಳೆಯವರನ್ನಾಗಿ ಪರಿವರ್ತಿಸುವುದೇ ನಮ್ಮ ಗುರಿಯಾಗಬೇಕು. ಇನ್ನೊಬ್ಬರಿಗಾಗಿ ಬದುಕುವ ಕಲೆಗೆ ಸಂಸ್ಕಾರ ಬೇಕು. ಮಕ್ಕಳು ಉತ್ತಮ ಸಂಸ್ಕಾರದ ಜತೆಗೆ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಮಂಜೇಶ್ವರ ನೀರೊಳಿಕೆಯ ಶ್ರೀಮಾತಾ ಸೇವಾಶ್ರಮದ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ನುಡಿದರು.
ಅವರು ಎ. 15 ರಂದು ಕನ್ಯಾಡಿ|| ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಸೇವಾಭಾರತಿ ಕನ್ಯಾಡಿ ಇದರ 15 ನೇ ವಾರ್ಷಿಕೋತ್ಸವ ಹಾಗೂ ತಾಲೂಕಿನ ಬಾಲಭಾರತಿ ಮಕ್ಕಳಿಗೆ 3 ದಿನಗಳ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು. ಸಮಾರಂಭವನ್ನು ದೀಪಪ್ರಜ್ವಲನಗೊಳಿಸಿ ಉದ್ಘಾಟಿಸಿದ ಉಜಿರೆ ಎಸ್.ಡಿ.ಎಂ. ಕಾಲೇಜು ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಗಣೇಶ್ ಶೆಂಡ್ಯೆ ಪರಿಸರಕ್ಕೆ ಪೂರಕ ಕೆಲಸ ಮಾಡಿ, ನೀರು ಮಿತವಾಗಿ ಬಳಸಿ, ದುರಭ್ಯಾಸ-ದುಶ್ಚಟಗಳಿಂದ ದೂರವಿರಿ, ಇನ್ನೊಬ್ಬರ ಬಗ್ಗೆ ಅನುಕಂಪ ಬೇಡ, ಮಾನವೀಯತೆಯಿರಲಿ, ಜೀವನ ಕೌಶಲ ಬೆಳೆಸಿಕೊಳ್ಳಿ, ಪ್ರತಿಯೊಬ್ಬರ ಮನಸ್ಸಿನಲ್ಲೂ ಸೇವೆಯ ಅಮೃತಬಿಂದು ಹುಟ್ಟಲಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿ ಸೇವಾಭಾರತಿಯ ಬಹುಮುಖ ಸೇವಾ ಕಾರ್ಯ ಇತರರಿಗೆ ಆದರ್ಶ ಪ್ರೇರಣೆಯಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸೇವಾಭಾರತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್ ೧೫ನೇ ವರ್ಷದ ವಾರ್ಷಿಕ ವರದಿಯನ್ನು ಬಿಡುಗಡೆಗೊಳಿಸಿ ಸೇವಾ ಯೋಜನೆಗಳಿಗೆ ಸರ್ವರ ಸಹಕಾರ, ಪ್ರೋತ್ಸಾಹ ಕೋರಿದರು.
ಸಮಾರಂಭದಲ್ಲಿ ಯಕ್ಷಭಾರತಿ ಅಧ್ಯಕ್ಷ ಹರಿದಾಸ್ ಗಾಂಭೀರ, ಧರಿತ್ರಿ ಕೃಷಿಕರ ಸಂಘ ದ ಉಪಾಧ್ಯಕ್ಷ ಅರುಣ ರೆಬೆಲ್ಲೋ, ಶ್ರೀ ದುರ್ಗಾ ಮಾತೃಮಂಡಲಿ ಅಧ್ಯಕ್ಷೆ ವಸಂತಿ, ಬೆಳ್ತಂಗಡಿ ತಾ| ಸಕ್ಷಮ ಅಧ್ಯಕ್ಷ ರಾಜಪ್ರಸಾದ್ ಪೋಳ್ನಾಯ, ಧಾರಿಣಿ ತೆಂಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ರಾಜಶೇಖರ ಹೆಬ್ಬಾರ್, ಆರೋಗ್ಯ ಭಾರತಿ ಅಧ್ಯಕ್ಷ ಶ್ರೀಧರ ಕೆ.ವಿ, ಬೆಳ್ತಂಗಡಿ ತಾ| ಬಾಲ ಭಾರತಿ ಅಧ್ಯಕ್ಷ ಕಮಲಾಕ್ಷ ಡಿ. ಮತ್ತು ಬೆನ್ನುಮೂಳೆ ಮುರಿತಕ್ಕೊಳಗಾದವರ ಪುನಶ್ಚೇತನ ಕೇಂದ್ರದ ಸಂಚಾಲಕ ಡಾ| ಮಾಧವ ಎಂ.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾಭಾರತಿ ಕಾರ್ಯದರ್ಶಿ ವಿನಾಯಕ ರಾವ್ ಕನ್ಯಾಡಿ ಪ್ರಸ್ತಾವಿಸಿ ವರ್ಷದ ಸೇವಾ ಯೋಜನೆಗಳ ವರದಿ ಮಂಡಿಸಿದರು. ಡಾ| ಮಾಧವ ಎಂ.ಕೆ. ಬೆನ್ನುಮೂಳೆ ಮುರಿತಕ್ಕೊಳಗಾದವರಿಗಾಗಿ ನಿಯೋಜಿತ ಪುನಶ್ಚೇತನ ಕೇಂದ್ರದ ಸ್ಥೂಲ ಮಾಹಿತಿ ನೀಡಿದರು.
ಮಕ್ಕಳಿಗಾಗಿ ಏರ್ಪಡಿಸಲಾದ 3 ದಿನಗಳ ಬೇಸಿಗೆ ಶಿಬಿರದಲ್ಲಿ ಶೈಲೇಶ್ (ಚಿತ್ರಕಲೆ) ಮಂಜುಳಾ ಸುಬ್ರಹ್ಮಣ್ಯ (ಮಂಕುತಿಮ್ಮನ ಕಗ್ಗ), ಯಶವಂತ (ನಟನಾ ತರಬೇತಿ), ವಸಂತಿ ಕೆ., ಸುರೇಖಾ ಮತ್ತು ಪೂರ್ಣಿಮಾ (ಕರಕುಶಲ ತರಬೇತಿ), ಗಣೇಶ್ ಶೆಂಡ್ಯೆ (ವಿವೇಕ ದೃಷ್ಟಿ), ಸ್ವರ್ಣಗೌರಿ (ಹಾಡು ಮತ್ತು ಭಜನೆ), ಶುತಿ ಜೈನ್ (ನೃತ್ಯ ಭಾವಾಭಿನಯ) ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದ್ದು ತಾಲೂಕಿನ 14 ಬಾಲಭಾರತಿ ಕೇಂದ್ರಗಳ ಸುಮಾರು 120 ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಬಿರದಲ್ಲಿ ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದರು. ಸೇವಾಭಾರತಿ ಉಪಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಸ್ವಾಗತಿಸಿ, ಸ್ವರ್ಣಗೌರಿ ಮತ್ತು ವಿನಿಷಾ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಸೇವಾಭಾರತಿ ಕಾರ್ಯಾಲಯದ ಪರಮೇಶ್ವರ್ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.