ಶ್ರೀ ಕ್ಷೇತ್ರ ಧರ್ಮಸ್ಥಳದ ಸಮುದಾಯ ಅಭಿವೃದ್ಧಿ ಯೋಜನೆ : ವಿವಿಧ ಯೋಜನೆಗಳಿಗೆ ರೂ.1.30ಕೋಟಿ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1

 

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯಾದ್ಯಂತ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಮುಖಾಂತರ ಅನುದಾನಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ರಾಜ್ಯಾದ್ಯಂತ ಜನ ಸಮುದಾಯದ ಪಾಲ್ಗೊಳ್ಳುವಿಕೆ ಮುಖಾಂತರ ಅಭಿವೃದ್ಧಿ ಕಾರ್ಯಕ್ರಮ ಬೇಡಿಕೆ ಬಂದಲ್ಲಿ ಸೂಕ್ತವಾಗಿ ಪರಿಶೀಲಿಸಿ ತಾಂತ್ರಿಕ ಮಾಹಿತಿಗಳನ್ನು ನೀಡಿ ಕಾಮಗಾರಿಗಳ ಗುಣವನ್ನು ಮತ್ತು ಆರ್ಥಿಕ ಕ್ರೋಢೀಕರಣವನ್ನು ಗಮನಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪೂರಕ ನೆರವನ್ನು ನೀಡುತ್ತಿದೆ. ಕರ್ನಾಟಕ ರಾಜ್ಯಾದ್ಯಂತ ಈ ಅಭಿವೃದ್ಧಿ ಕಾರ್ಯಕ್ರಮವನ್ನು ಸಮುದಾಯ ಅಭಿವೃದ್ಧಿ ವಿಭಾಗದಿಂದ ನಡೆಸಲಾಗುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ|| ಎಲ್.ಹೆಚ್. ಮಂಜುನಾಥ್ ಇವರ ಶಿಫಾರಸ್ಸಿನಂತೆ ಈ ಅನುದಾನಗಳನ್ನು ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಮಾಡುತ್ತಿದ್ದಾರೆ. ಪ್ರಸ್ತುತ ತಿಂಗಳಲ್ಲಿ ರಾಜ್ಯದ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಒಟ್ಟು ರೂ. 1.30 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.
ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸಂಬಂಧಪಟ್ಟಂತೆ :- ದಕ್ಷಿನ ಕನ್ನಡ ಜಿಲ್ಲೆಯ ಮಲವಂತಿಗೆ, ಉಡುಪಿ ಜಿಲ್ಲೆಯ ಪುನಾರು, ಹಾಸನ ಜಿಲ್ಲೆಯ ಬೋಗಾರಹಳ್ಳಿ, ಮುತ್ತುಗನ್ನೆ, ಬೆಳುಗಲಿ, ಚಿಕ್ಕಮಗಳೂರು ಜಿಲ್ಲೆಯ ಯಳ್ಳಂಬಳಸೆ ಶಿವಮೊಗ್ಗ ಜಿಲ್ಲೆಯ ಅಡಗಂಟಿ, ನಿಂಬೆಗೊಂದಿ, ಮಂಡ್ಯ ಜಿಲ್ಲೆಯ ಸೋಮನಹಳ್ಳಿ, ಕಲ್ಲುದೇವನಹಳ್ಳಿ, ಆನಗೋಳ, ಪಡುವಲಪಟ್ಟಣ, ಶ್ರೀರಂಗಪುರ, ಸಾಮಕಹಳ್ಳಿ, ಬ್ರಹ್ಮದೇವರಹಳ್ಳಿ, ಪುಟ್ಟಿಕೊಪ್ಪಲು, ಅಂಚನಹಳ್ಳಿ, ಗುಡಗನಹಳ್ಳಿ, ಕೋಣಶಾಲೆ, ಕದಲೂರು, ಚಿತ್ರದುರ್ಗಾ ಜಿಲ್ಲೆಯ ಆರ್. ನುಲೇನೂರು ಮೈಸೂರು ಜಿಲ್ಲೆಯ ಕಲ್ಲಹಳ್ಳಿ, ಗೆರಸನಹಳ್ಳಿ, ಕಾಳಿಹುಂಡಿ, ಅಗಸನಹುಂಡಿ, ಪಟ್ಟೆಹುಂಡಿ, ಮುದಗನೂರು, ಲಕ್ಕಿಕುಪ್ಪೆ, ವೆಂಕಟೇಗೌಡನಕೊಪ್ಪಲು, ನಾಗಮಂಗಲ, ತುಮಕೂರು ಜಿಲ್ಲೆಯ ಕೋಳಾಲ, ಬೆಳಗೀಹಳ್ಳಿ, ತೀರ್ಥಪುರ, ನೀಲಿಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆದಿಗೊಂಡನಹಳ್ಳಿ, ವರದೇನಹಳ್ಳಿ, ಜಿ.ಸೊಣ್ಣೇನಹಳ್ಳಿ, ಹುಣಸೇಪಾಳ್ಯ, ಕುಂಬಾರಹಳ್ಳಿ, ಕವಣಾಪುರ, ಬೆಂಗಳೂರು ಉತ್ತರದ ಜಂಗಲ್‌ಪುರ ಕೋಲಾರ ಜಿಲ್ಲೆಯ ವೀರಸಂದ್ರ, ಚೊಕ್ಕದೊಡ್ಡಿ, ಅನಂತಪುರ, ಮಚ್ಚನಹಳ್ಳಿ, ಚಾಕರಸನಹಳ್ಳಿ, ಬೆಳ್ಳಹಳ್ಳಿ, ಹೊಳೇರಹಳ್ಳಿ, ಚಾಮರಾಜನಗರ ಜಿಲ್ಲೆಯ ವಡಕೆಹಳ್ಳ ಚಿಕ್ಕಬಳ್ಳಾಪುರ ಜಿಲ್ಲೆಯ ವೀರ್‍ಲಗೊಲ್ಲಹಳ್ಳಿ, ಆವಲಗುರ್ಕಿ, ಗುಜ್ಜೆಪಲ್ಲಿ, ಕೈವಾರ, ಕೊಂಡಾಪುರ ಧಾರವಾಡ ಜಿಲ್ಲೆಯ ಗುಡ್ಡದಹೂಲಿಕಟ್ಟಿ ಕೊಪ್ಪಳ ಜಿಲ್ಲೆಯ ಮಂಗಳಾಪುರ, ವಿಜಯಪುರ ಜಿಲ್ಲೆಯ ಹತ್ತಳ್ಳಿ ಮುಂತಾದ ಒಟ್ಟು 57 ಹಾಲು ಸಂಘಗಳ ನೂತನ ಕಟ್ಟಡಗಳ ನಿರ್ಮಾಣಕ್ಕೆ ಒಟ್ಟು ರೂ. 44.65 ಲಕ್ಷ ಮಂಜೂರು ಮಾಡಲಾಗಿದೆ.
ಗ್ರಾಮ ಕಲ್ಯಾಣ ಕಾರ್‍ಯಕ್ರಮದಂತೆ ಸಭಾಭವನ ನಿರ್ಮಾಣ, ಭಜನಾ ಮಂದಿರ, ಸಮುದಾಯ ಭವನ ರಚನೆ, ಅಂಗನವಾಡಿ ಕಟ್ಟಡ, ಬಯಲು ರಂಗ ಮಂದಿರ, ನಿರ್ಗತಿಕರ ವಸತಿ, ಮಹಿಳಾ ಮಂಡಲ ಕಟ್ಟಡ, ವಿದ್ಯಾರ್ಥಿ ನಿಲಯ ಕಟ್ಟಡ, ವೃದ್ಧಾಶ್ರಮ, ಶಾಲಾ ರಂಗಮಂದಿರ, ಗೋಕಟ್ಟೆ ಕಾರ್ಯಕ್ರಮ ಮುಂತಾದ ವಿವಿಧ ಜಿಲ್ಲೆಯ ಒಟ್ಟು 31 ಕಾಮಗಾರಿಗೆ 37 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ. ಬಂಟ್ವಾಳ ತಾಲೂಕಿನ ಹೂ ಹಾಕುವ ಕಲ್ಲು ರುದ್ರಭೂಮಿ ನಿರ್ಮಾಣ, ಬೆಳಗಾವಿ ತಾಲೂಕಿನ ಮಹಾಂತೇಶನಗರದ ಸಮಾಜ ಕಲ್ಯಾಣ ಸಂಸ್ಥೆಯ ಹೆಣ್ಣ ಮಕ್ಕಳ ವಸತಿ ನಿಲಯಕ್ಕೆ ಸೋಲಾರ್ ವಾಟರ್ ಹೀಟರ್ ಅಳವಡಿಕೆಗೆ ಅನುದಾನವನ್ನು ದೊರಕಿಸಿಕೊಡಲಾಗಿದೆ. ಕಲ್ಬುರ್ಗಿ ಹಾಗೂ ಬೀದರ್ ಜಿಲ್ಲೆಯಲ್ಲಿ ಒಟ್ಟು 2400 ಜೊತೆ ಬೆಂಚ್ ಡೆಸ್ಕ್‌ಗಳನ್ನು ವಿತರಿಸಲಾಗುತ್ತಿದೆ. ಪೀಠೋಪಕರಣ ಕೊರತೆಯಿರುವ ಸುಮಾರು 400 ಕ್ಕೂ ಮಿಕ್ಕಿದ ಶಾಲೆಗಳಿಗೆ ಈ ಪೀಠೋಪಕರಣ ಒದಗಿಸಲಾಗುತ್ತಿದ್ದು ಈ ಕಾರ್‍ಯಕ್ರಮಕ್ಕೆ ರೂ. 48 ಲಕ್ಷ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಜಯರಾಮ ನೆಲ್ಲಿತ್ತಾಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.