HomePage_Banner_
HomePage_Banner_

ಬೈಕ್ ಸ್ಕಿಡ್ : ಸವಾರ ಸಾವು

ಲಾಯಿಲ : ಇಲ್ಲಿಯ ನಿನ್ನಿಕಲ್ಲು ನಾಯರ್‌ಗುಡ್ಡೆ ಸಮೀಪ ತಡರಾತ್ರಿ ಬೈಕ್ ಸ್ಕಿಡ್ ಆಗಿ ಉರುಳಿ ಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಎ.೧೪ ರಂದು ವರದಿಯಾಗಿದೆ.
ಬೆಳ್ತಂಗಡಿ ಕೋರ್ಟು ರಸ್ತೆಯ ಗೌಸಿಯಾ ಮಸೀದಿ ಸಮೀಪದ ನಿವಾಸಿ ಪೈಂಟರ್ ಮಹಮ್ಮದ್ ಹನೀಫ್(೪೮ವ) ಈ ದುರ್ಘಟನೆಯಲ್ಲಿ ಮೃತ ಪಟ್ಟವರು. ರಾತ್ರಿ ನಿನ್ನಿಕಲ್ಲಿಗೆ ತನ್ನ ಗೆಳೆಯನನ್ನು ಬಿಟ್ಟು ವಾಪಸ್ ಬರುತ್ತಿರುವ ಸಂದರ್ಭದಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಮಹಮ್ಮದ್ ಹನೀಫ್ ಅವರ ತಲೆಯ ಹಿಂಭಾಗಕ್ಕೆ ತೀವ್ರ ಗಾಯಗೊಂಡು ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಇವರು ಲಾಯಲದ ಬ್ರದರ್‍ಸ್ ಗ್ಯಾರೇಜ್‌ನಲ್ಲಿ ಪೈಂಟರ್ ಆಗಿ ಕೆಲಸ ಮಾಡುತ್ತಿದ್ದರು. ಬೆಳ್ತಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿ ಕೊಂಡು ತನಿಖೆ ನಡೆಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.