ಗುರುವಾಯನಕೆರೆ: ಬಿಎಜಿ ತಂಡದ ಸದಸ್ಯರಿಗೆ ತರಬೇತಿ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಶೇ.೧೦೦ ಮತದಾನ ಚುನಾವಣಾ ಆಯೋಗದ ಉದ್ದೇಶ: ಡಾ| ಎಂ.ಆರ್. ರವಿ

ಬೆಳ್ತಂಗಡಿ: ಪ್ರಜಾಪ್ರಭುತ್ವ ದೇಶದಲ್ಲಿ ಚುನಾವಣೆ ಎನ್ನುವುದು ಹಬ್ಬ ಇದ್ದಂತೆ. ಮತದಾರರು ಭಾವಚಿತ್ರ ಇರುವ 26 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಮತದಾನ ಮಾಡಬಹುದು. ಬೆಳ್ತಂಗಡಿ ತಾಲೂಕಿನ 241  ಮತಗಟ್ಟೆಗಳಲ್ಲಿ 699  ಮತತಂಡಗಳು ಹಾಗೂ 24 ಸೆಕ್ಟರ್ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಶೇ.100 ಮತದಾನ ಚುನಾವಣಾ ಆಯೋಗದ ಉದ್ದೇಶ ಎಂದು ದ.ಕ. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು, ದ.ಕ.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್. ರವಿ ಹೇಳಿದರು.
ಅವರು ಎ.೧೮ರಂದು ಭಾರತ ಚುನಾವಣಾ ಆಯೋಗ, ದ.ಕ. ಜಿಲ್ಲಾ ಸ್ವೀಪ್ ಸಮಿತಿ ಆಶ್ರಯದಲ್ಲಿ ಗುರುವಾಯನಕೆರೆ ಹವ್ಯಕ ಭವನದಲ್ಲಿ ಜರಗಿದ ಮತಗಟ್ಟೆಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರದ ಬಳಕೆ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬಿಎಜಿ ತಂಡದ ಸದಸ್ಯರಿಗೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿ, ಚುನಾವಣಾ ಸಂದರ್ಭದಲ್ಲಿನ ವಿಚಾರ, ತೀರ್ಮಾನಗಳು ಚುನಾವಣಾ ಆಯೋಗದ ನಿರ್ದೇಶನಕ್ಕೆ ಒಳಪಟ್ಟಿರುತ್ತದೆ. ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮತಗಟ್ಟೆ ಜಾಗೃತಿ ತಂಡಗಳನ್ನು ರಚಿಸಲಾಗಿದೆ. ಕಳೆದ ಬಾರಿ ತಾಲೂಕಿನಲ್ಲಿ ಶೇ. ೭೫ ಮತದಾನ ನಡೆದಿದ್ದು, ಈ ಬಾರಿ ಶೇ. ೧೦೦ ಮತದಾನ ನಡೆಯಬೇಕು. ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಎ. ೩೦ರವರೆಗೂ ಪ್ರತಿಯೊಂದು ಮತಗಟ್ಟೆಗಳಲ್ಲಿ ಚುನಾವಣಾ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದರು.
ವಿಕಲ ಚೇತನರು, ವಿಶೇಷ ಚೇತನರು, ಹಿರಿಯ ನಾಗಕರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಸರತಿಸಾಲಿನಲ್ಲಿ ನಿಲ್ಲದೆ ನೇರವಾಗಿ ಮತಕೇಂದ್ರದೊಳಗೆ ಆಗಮಿಸಿ ಮತ ಚಲಾಯಿಸಬಹುದು. ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದ.ಕ. ಜಿಲ್ಲೆಯ ನಗರ ಭಾಗದ ೨೦ ಮತಗಟ್ಟೆಗಳಲ್ಲಿ ಮಹಿಳಾ ಸ್ನೇಹಿ ಮತದಾನ ಕೇಂದ್ರವನ್ನು ರಚಿಸಲಾಗಿದೆ. ಎಲ್ಲಾ ಮತಗಟ್ಟೆಗಳ ಸಿಬ್ಬಂದಿಗಳಿಗೆ ಊಟ, ತಿಂಡಿ, ಚಾ ವ್ಯವಸ್ಥೆಯನ್ನು ಅಕ್ಷರದಾಸೋಹ ಸಿಬ್ಬಂದಿಗಳ ಮೂಲಕ ವ್ಯವಸ್ಥೆ ಮಾಡಲಾಗಿದೆ ಎಂದರು.
ಮಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿ, ಬೆಳ್ತಂಗಡಿ ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಸವರಾಜ್ ಕೆ. ಅಯ್ಯಣ್ಣಾವರ್, ತಾಲೂಕು ಚುನಾವಣಾಧಿಕಾರಿ ಎಚ್.ಆರ್. ನಾಯಕ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಚುನಾವಣಾ ಸಂಪನ್ಮೂಲ ಅಧಿಕಾರಿಗಳು, ಚುನಾವಣಾ ಸಿಬ್ಬಂದಿಗಳಾಗಿ ನೇಮಕಗೊಂಡ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಂಪನ್ಮೂಲ ಅಧಿಕಾರಿ ಧರಣೇಂದ್ರ ಕೆ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಾಹಿತಿ ನೀಡಿದರು. ತಾ.ಪಂ. ಕಾರ್ಯಕ್ರಮ ಸಂಯೋಜಕ ಜಯಾನಂದ ಅವರು ಸಭೆಯನ್ನು ನಿರ್ವಹಿಸಿದರು.

ಮತದಾನ ಖಾತ್ರಿಗೆ ಅವಕಾಶ
ಮತಯಂತ್ರದಲ್ಲಿ ನಿಮ್ಮ ಮತವನ್ನು ಚಲಾಯಿಸಲು ಬಟನನ್ನು ಒತ್ತಿದ ಬಳಿಕ ೭ ಸೆಕೆಂಡ್‌ಗಳ ಕಾಲ ವಿವಿ ಪ್ಯಾಟ್ ಯಂತ್ರದಲ್ಲಿ ನಿಮ್ಮ ಅಭ್ಯರ್ಥಿಯ ಕ್ರಮ ಸಂಖ್ಯೆ, ಹೆಸರು, ಚಿಹ್ನೆಯುಳ್ಳ ವಿವರ ಪ್ರದರ್ಶನವಾಗುತ್ತದೆ. ಇದು ಮತ ಚಲಾವಣೆ ಆಗಿದೆಯಾ ಎಂದು ನಿಮಗೆ ಖಾತ್ರಿ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಆ ಬಳಿಕ ಸ್ಪಿಪ್ ಕಟ್ ಆಗಿ ಯಂತ್ರದೊಳಗಿರುವ ಬಾಕ್ಸ್‌ನೊಳಗೆ ಬೀಳುತ್ತದೆ. ಅದನ್ನು ಯಾರೂ ನೋಡಲಾಗುವುದಿಲ್ಲ. ಮತಎಣಿಕೆ ಬಳಿಕ ಏನಾದರೂ ಗೊಂದಲ ಉಂಟಾದರೆ ಅದರ ಕ್ರಾಸ್‌ಚೆಕ್ ಮಾಡಲು ಅನುಕೂಲವಾಗುತ್ತದೆ ಎಂದು ಡಾ| ಎಂ.ಆರ್. ರವಿ ಮಾಹಿತಿ ನೀಡಿದರು.

ನಿಮ್ಮ ಮತಗಟ್ಟೆಯ ಮಾಹಿತಿ ತಿಳಿಯಲು ಹೀಗೆ ಮಾಡಿ
ನಿಮ್ಮ ಮತಗಟ್ಟೆಯಲ್ಲಿನ ಮಾಹಿತಿಯನ್ನು ತಿಳಿಯಲು ಏಂಇPIಅ ಎಂದು ಟೈಪ್ ಮಾಡಿ ಸ್ಪೇಸ್ ಬಿಟ್ಟು ಇPIಅ ನಂಬರನ್ನು ಟೈಪ್ ಮಾಡಿ 9731979899 ನಂಬರಿಗೆ ಎಸ್‌ಎಂಎಸ್ ಮಾಡಿದಾಗ ೨ ನಿಮಿಷದೊಳಗೆ ನಿಮ್ಮ ಮತಗಟ್ಟೆಗಳ ವಿವರ ಲಭಿಸುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.