ಕಾಜೂರು ಉರೂಸ್ ಮುಬಾರಕ್ ಸಮಾರೋಪ, ಸರ್ವ ಧರ್ಮೀಯರ ಸೌಹಾರ್ದ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಿತ್ತಬಾಗಿಲು: ಉರೂಸ್‌ಗಳ ಆಚರಣೆ ಎಂದರೆ ಆಡಂಬರ ಅಥವಾ ನಮ್ಮ ವೈಯುಕ್ತಿಕ ಅವಶ್ಯಕತೆಗಳನ್ನು ಅವರ ಮೂಲಕ ಅಲ್ಲಾಹನಲ್ಲಿ ನಿವೇಧಿಸುವ ಕಾರ್ಯಕ್ಕೆ ಮಾತ್ರ ಇರುವ ಕಾರ್ಯಕ್ರಮವಲ್ಲ. ಕೇವಲ ಅಲ್ಲಾಹನ ಮೇಲಿನ ಭಯದಿಂದ ತನ್ನ ಜೀವನದಲ್ಲಿ ನಶ್ವರ ಮತ್ತು ಲೌಖಿಕವಾಗ ಎಲ್ಲಾ ಸುಖಃ ಲೋಲುಪತೆಗಳ ಕಡೆಗೆ ಆಕರ್ಷಿತರಾಗದೇ ಅಲ್ಲಾಹನ ಸನ್ಮಾರ್ಗದಲ್ಲಿ ಪಾರತ್ರಿಕ ಜೀವನ ಗುರಿಯೊಂದಿಗೆ ಬದುಕಿ ಕಣ್ಮರೆಯಾದ ಅವನ ಇಷ್ಟದಾಸರಾದ ಔಲಿಯಾಗಳ ಬದುಕಿನ ಆದರ್ಶಗಳ ಬೋಧನೆ ಉರೂಸ್‌ಗಳಲ್ಲಿ ಆಗಬೇಕು ಎಂದು ಉಡುಪಿ-ಚಿಕ್ಕಮಗಳೂರು-ಶಿವಮೊಗ್ಗ- ಹಾಸನ ಜಿಲ್ಲೆಗಳ ಸಂಯುಕ್ತ ಜಮಾಅತ್ ಖಾಝಿ ಬೇಕಲ್ ಇಬ್ರಾಹಿಂ  ಮುಸ್ಲಿಯಾರ್ ಹೇಳಿದರು.
ಕಾಜೂರು ರಹ್ಮಾನಿಯಾ ಜುಮ್ಮಾ ಮಸೀದಿ ಮತ್ತು ದರ್ಗಾ ಶರೀಫ್ ಇಲ್ಲಿ ಎ. ೧೫ ರಂದು ಸಮಾಪ್ತಿಗೊಂಡ ೨೦೧೮ ನೇ ಉರೂಸ್ ಮಹಾಸಂಭ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಇಸ್ಲಾಂ ಚೌಕಟ್ಟಿನಲ್ಲಿ ಮಹಿಳೆಯರು ವಹಿಸಬೇಕಾದ ಜವಾಬ್ದಾರಿಗಳು ಮತ್ತು ಅವರ ಧಾರ್ಮಿಕ ಚೌಕಟ್ಟನ್ನೂ ಅವರು ಜ್ಞಾಪಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಯ್ಯಿದ್ ಕೆಪಿಎಸ್ ಝೈನುಲ್ ಆಬದೀನ್ ಜಮಲುಲ್ಲೈಲಿ ತಂಙಳ್ ಮದನಿ ಕಾಜೂರು ತಂಙಳ್ ವಹಿಸಿದ್ದರು. ವೇದಿಕೆಯಲ್ಲಿದ್ದ ಸಯ್ಯಿದ್ ಶಿಹಾಬುದ್ದೀನ್ ಹೈದ್ರೋಸಿ ತಂಙಳ್ ಸಖಾಫಿ ಕಿಲ್ಲೂರು ಆಶೀರ್ವಚನ ನೀಡಿದರು.
ಸರ್ವಧರ್ಮೀಯರ ಸೌಹಾರ್ದ ಸಂಗಮ:
ಉರೂಸ್ ಪ್ರಯುಕ್ತ ಸಂಜೆ ಇದೇ ವೇದಿಕೆಯಲ್ಲಿ ಸರ್ವ ಧರ್ಮೀಯರ ಸೌಹಾರ್ದ ಸಂಗಮ ಕಾರ್ಯಕ್ರಮ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ವಕ್ಫ್ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಉದ್ಯಮಿ ಕಣಚೂರ್ ಮೋನು ಹಾಜಿಯವರು ವಹಿಸಿದ್ದರು. ಸಮಾರಂಭದಲ್ಲಿ ನ್ಯಾಯವಾದಿ ಹಾಗೂ ಕೃಷಿಕ ಸುದರ್ಶನ ರಾವ್ ಗಜಂತೋಡಿ, ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಚೊಕ್ಕಬೆಟ್ಟು ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ, ಎಸ್ಸೆಸ್ಸೆಫ್ ಮಾಜಿ ರಾಜ್ಯಾಧ್ಯಕ್ಷ ಎನ್.ಕೆ.ಎಂ ಶಾಫಿ ಸಅದಿ ಬೆಂಗಳೂರು, ದ. ಕ ಜಿಲ್ಲಾ ಧಾರ್ಮಿಕ ಧತ್ತಿ ಇಲಾಖೆ ಸದಸ್ಯ ಮುಕುಂದ ಸುವರ್ಣ ಕಾರ್ಯಕ್ರಮದ ಅಂಗವಾಗಿ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಮಿತ್ತಬಾಗಿಲು ತಾ.ಪಂ ಸದಸ್ಯ ಜಯರಾಮ ಆಲಂಗಾರು, ಮಲವಂತಿಗೆ ಗ್ರಾ.ಪಂ ಅಧ್ಯಕ್ಷ ಭಾಸ್ಕರ ಪೂಜಾರಿ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಉಸ್ಮಾನ್, ದ.ಕ ಜಿಲ್ಲಾ ವಕ್ಫ್ ಸಲಹಾ ಮಂಡಳಿ ಸದಸ್ಯರಾದ ನೂರುದ್ದೀನ್ ಸಾಲ್ಮರ, ಹಸನಬ್ಬ ಚಾರ್ಮಾಡಿ, ಇಂದಬೆಟ್ಟು ಗ್ರಾ.ಪಂ ಉಪಾಧ್ಯಕ್ಷ, ಮಲವಂತಿಗೆ ಗ್ರಾ.ಪಂ ಸದಸ್ಯ ಕೆ.ಯು ಮುಹಮ್ಮದ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಿ ಅಶ್ರಫ್, ಸ್ಟಾರ್‌ಲೈನ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಸಯ್ಯಿದ್ ಹಬೀಬ್ ಸಾಹೇಬ್ ಮಂಜೊಟ್ಟಿ, ಉಜಿರೆ ಮಸೀದಿ ಅಧ್ಯಕ್ಷ ಬಿ.ಎಮ್ ಅಬ್ದುಲ್ ಹಮೀದ್, ಉದ್ಯಮಿ ಯು.ಎ. ಹಮೀದ್ ಉಜಿರೆ, ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಸಮದ್ ಸೋಂಪಾಡಿ, ಗುರುವಾಯನಕೆರೆ ಮಸೀದಿ ಅಧ್ಯಕ್ಷ ಉಸ್ಮಾನ್ ಬಳೆಂಜ, ದರ್ಗಾ ಸಮಿತಿ ಅಧ್ಯಕ್ಷ ಉಸ್ಮಾನ್ ಶಾಫಿ ಗುರುವಾಯನಕೆರೆ, ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಆದಂ ಉಸ್ಮಾನ್, ತುಂಗಪ್ಪ ಪೂಜಾರಿ, ಕಾಸಿಂ ಮಲ್ಲಿಗೆಮನೆ, ಕೆ ಶೇಕಬ್ಬ ಕುಕ್ಕಾವು, ಮಿತ್ತಬಾಗಿಲು ಗ್ರಾ.ಪಂ ಸದಸ್ಯ ವಿಜಯ ಗೌಡ ಕಾಡುಮನೆ, ಬಂಗಾಡಿ ಸಹಕಾರಿ ಸಂಘದ ಅಧ್ಯಕ್ಷ ಲಕ್ಷ್ಮಣ ಗೌಡ ಇರ್ತಿಲಾಲ್, ಬಿ.ಎ ಯೂಸುಫ್ ಶರೀಫ್, ಅಬ್ದುಲ್ ರಹಿಮಾನ್ ಕಣಚೂರು, ಮೋಹನ್ ಗೌಡ ಬೆಡಿಗುತ್ತು, ಜೆ.ಎಚ್ ಅಬೂಬಕ್ಕರ್ ಸಿದ್ದೀಕ್, ಅಬ್ದುಲ್ ಶುಕೂರ್ ಉಜಿರೆ, ಕಾಜೂರು ಮುದರ್ರಿಸ್ ಇಕ್ಬಾಲ್ ಸಖಾಫಿ, ಕೊಲ್ಲಿ ಶ್ರೀ ದುರ್ಗಾ ದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ, ಮಂಜುನಾಥ ಕಾಮತ್, ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷ ನಾರಾಯಣ ಪಾಟಾಳಿ, ಎಪಿಎಂಸಿ ಮಾಜಿ ಅಧ್ಯಕ್ಷ ಭರತ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಎಚ್.ಎನ್ ಮುಹಮ್ಮದ್ ಹನೀಫ್, ಮಧುಕರ ಸುವರ್ಣ, ಬದ್ರುದ್ದೀನ್ ಕಾಜೂರು, ಬಿ.ಎಚ್ ಹಮೀದ್, ಅಬುಬಕ್ಕರ್ ಮಲ್ಲಿಗೆಮನೆ, ಪಿ.ಎ ಮುಹಮ್ಮದ್, ಜೆ.ಎಚ್ ಅಬ್ಬಾಸ್, ಬಶೀರ್ ಅಹ್‌ಸನಿ, , ಹಮೀದ್ ಮುಸ್ಲಿಯಾರ್, ಉಮರ್ ಸಖಾಫಿ ಕಾಜೂರು, ಮೊದಲಾದವರು ಉಪಸ್ಥಿತರಿದ್ದರು. ಬಿ.ಎಮ್ ತನ್ಸೀಫ್ ಕಿಲ್ಲೂರು ಮತ್ತು ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಆತೂರು ಕಾರ್ಯಕ್ರಮ ನಿರೂಪಿಸಿದರು. ಕಾಜೂರು ದರ್ಗಾಶರೀಫ್ ವಕ್ಫ್ ನಿಯೋಜಿತ ಆಡಳಿತಾಧಿಕಾರಿ ಮುಹಮ್ಮದ್ ರಫಿ ಸ್ವಾಗತಿಸಿದರು. ಕೆ.ಯು ಇಬ್ರಾಹಿಂ, ಅಬ್ದುಲ್ ರಝಾಕ್ ಮುಸ್ಲಿಯಾರ್, ಕೆ.ಎಚ್ ಅಬ್ದುಲ್ ಹಮೀದ್ ಮುಸ್ಲಿಯಾರ್, ಕೆ.ಎಂ ಅಬೂಬಕ್ಕರ್, ಜೆ.ಎಚ್ ಅಬೂಬಕ್ಕರ್ ಸಿದ್ದೀಕ್ ಸಹಿತ ಕಾಜೂರು- ಕಿಲ್ಲೂರು ಜಮಾಅತ್ ಸದಸ್ಯರು ಸಹಕಾರ ನೀಡಿದರು.
ಚಿತ್ರ: ಸಿದ್ದಿಕ್ ಜೆ.ಎಚ್.

ಕರ್ನಾಟಕದಾಧ್ಯಂತ ಸಮುದಾಯವನ್ನು ಸನ್ಮಾರ್ಗಕ್ಕೆ ದಾರಿ ತೋರಿದವರಲ್ಲಿ ತಾಜುಲ್ ಉಲೆಮಾ ಪ್ರಮುಖರು. ಅವರ ನಿರ್ಗಮನದ ವೇಳೆಗೆ ಅವರ ಅಪಾರ ಶಿಷ್ಯವರ್ಗವಾಗಿರುವ ಪ್ರಖಾಂಡ ಪಂಡಿತರುಗಳನ್ನು ಅವರು ಕೊಡುಗೆಯಾಗಿ ಸಮರ್ಪಿಸಿದ್ದಾರೆ. -ಎಂ.ಎಸ್.ಎಂ. ಅಬ್ದುಲ್ ರಶೀದ್ ಝೈನಿ ಕಕ್ಕಿಂಜೆಕರ್ನಾಟಕದಾಧ್ಯಂತ ಸಮುದಾಯವನ್ನು ಸನ್ಮಾರ್ಗಕ್ಕೆ ದಾರಿ ತೋರಿದವರಲ್ಲಿ ತಾಜುಲ್ ಉಲೆಮಾ ಪ್ರಮುಖರು. ಅವರ ನಿರ್ಗಮನದ ವೇಳೆಗೆ ಅವರ ಅಪಾರ ಶಿಷ್ಯವರ್ಗವಾಗಿರುವ ಪ್ರಖಾಂಡ ಪಂಡಿತರುಗಳನ್ನು ಅವರು ಕೊಡುಗೆಯಾಗಿ ಸಮರ್ಪಿಸಿದ್ದಾರೆ. -ಎಂ.ಎಸ್.ಎಂ. ಅಬ್ದುಲ್ ರಶೀದ್ ಝೈನಿ ಕಕ್ಕಿಂಜೆಮುಸ್ಲಿಂ ಸಮಾಜ ಇಂದು ದೇಶಾಧ್ಯಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾರತದ ಸಂವಿಧಾನ, ಪ್ರಜಾಪ್ರಭುತ್ವ ಅಪಾಯದಲ್ಲಿದ್ದು, ಮತೀಯ ಸೌಹಾರ್ದತೆ ನಶಿಸಿ ಹೋಗಿದೆ. -ಶಾಫಿ ಬೆಳ್ಳಾರೆ, ಪಿಎಫ್‌ಐ ರಾಜ್ಯ ಕಾರ್ಯದರ್ಶಿ

ಶಾಸಕರಿಗೆ ಮತ್ತು ಆಹಾರ ಸಚಿವರಿಗೆ ಸನ್ಮಾನ:
ಬೆಂಗಳೂರು ಪ್ರವಾಸದಲ್ಲಿದ್ದ ಶಾಸಕ ವಸಂತ ಬಂಗೇರ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ಅವರು ಕಾಜೂರು ಉರೂಸ್ ಕಾರ್ಯಕ್ರಮಕ್ಕಾಗಿ ತಡರಾತ್ರಿ ಕಾಜೂರಿಗೆ ಆಗಮಿಸಿದ್ದರು. ಈ ವೇಳೆ ಅವರನ್ನು ಕಾಜೂರು ದರ್ಗಾದ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು. ಬಳಿಕ ಮಾತನಾಡಿದ ಇಬ್ಬರೂ ಅತಿಥಿಗಳು, ಕಾಜೂರು ಉರೂಸ್ ಕಾರ್ಯಕ್ರಮ ಮುಂದಕ್ಕೆ ಪ್ರತೀ ವರ್ಷ ಅಡ್ಡಿ ಆತಂಕಗಳಿಲ್ಲದೆ ನಡೆಯುವಂತಾಗಬೇಕು. ಸಣ್ಣ ಸಣ್ಣ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಬೇಕು ಎಂದರು.

ಅಲ್ಲಾಹನ ಔಲಿಯಾಗಳಿಗೆ ಜಾತಿ, ಬಣ್ಣ, ಧರ್ಮ, ಮತ, ಪಂಗಡ, ರಾಜಕೀಯ ಎಂಬ ವ್ಯತ್ಯಾಸವಿರಲಿಲ್ಲ. ಎಲ್ಲರಿಗೂ ಕರುಣೆಯನ್ನು ಮಾತ್ರ ವರ್ಷಿಸುತ್ತಿದ್ದರು. ಎಲ್ಲ ಧರ್ಮಗ್ರಂಥಗಳೂ ಪ್ರೀತಿ ಸ್ನೇಹವನ್ನು ಮಾತ್ರ ಕಲಿಸುತ್ತದೆ. ಧರ್ಮತತ್ವ ಅಜ್ಞಾನಿಯಿಂದ ಮಾತ್ರ ಸೌಹಾರ್ದರ್ತೆಗೆ ಧಕ್ಕೆ ಇದೆ.
-ಸಯ್ಯಿದ್ ಕಾಜೂರು ತಂಙಳ್.

ಕಾಜೂರು ಧಾರ್ಮಿಕ ಕೇಂದ್ರ ಮತ್ತು ಇಲ್ಲಿನ ಉರೂಸ್ ರಾಷ್ಟ್ರಕ್ಕೇ ಮಾದರಿ ಸಾರುವ ಸನ್ನಿವೇಶ. ಎಲ್ಲ ಧರ್ಮೀಯರೂ ಅರಿತು ಬೆರೆತು ಒಂದಾಗಿ ಬಾಳೋಣ. ಪರೋಪಕಾರಕ್ಕಾಗಿ ಬದುಕೋಣ.
-ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು

ರಾಜ್ಯದ ಇತರ ಸಮುದಾಯದ ರಾಜಕೀಯ ಸ್ಥಾನಮಾನ, ಅಧಿಕಾರ ಮತ್ತು ಅವಕಾಶದ ಅಂಕಿ ಅಂಶ ಪರಿವೀಕ್ಷಿಸಿದರೆ, ಅಲ್ಪ ಸಂಖ್ಯಾತ ರಿಗೆ ರಾಜಕೀಯ ಪ್ರಾತಿನಿಧ್ಯ ಕಡಿಮೆಯಾ ಗಿದೆ, ನಮಗೆ ನಿರ್ಧಿಷ್ಟ ಪಕ್ಷದ ಮೇಲೆ ನಿಷ್ಠೆಯಿಲ್ಲ, ನಮ್ಮದು ಸಮುದಾಯ ನಿಷ್ಠೆಯ ಬೇಡಿಕೆಯಷ್ಟೇ.
-ಎನ್.ಕೆ.ಎಮ್ ಶಾಫಿ ಸಅದಿ ಬೆಂಗಳೂರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.